ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಎಕ್ಸಿಟ್ ಪೋಲ್ : ಕಾಂಗ್ರೆಸ್ ಸದೆಬಡಿಯಲಿದೆ ಬಿಜೆಪಿ

By Prasad
|
Google Oneindia Kannada News

Recommended Video

ಹಿಮಾಚಲ ಎಕ್ಸಿಟ್ ಪೋಲ್ : ಕಾಂಗ್ರೆಸ್ ಸದೆಬಡಿಯಲಿದೆ ಬಿಜೆಪಿ | Oneindia Kannada

ನವದೆಹಲಿ, ಡಿಸೆಂಬರ್ 14 : ಹಿಮಾಚಲ ಪ್ರದೇಶದಲ್ಲಿ ಟೈಮ್ಸ್ ಆಫ್ ಇಂಡಿಯಾ ಆನ್ ಲೈನ್ ಮತ್ತು ಸಿವೋಟರ್ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಲಿದ್ದು, ಕಾಂಗ್ರೆಸ್ಸಿಗೆ ಮಣ್ಣು ಮುಕ್ಕಿಸಲಿದೆ.

ನ್ಯೂಸ್ ನೇಷನ್ ಸಮೀಕ್ಷೆ: ಹಿ.ಪ್ರದೇಶ, ಗುಜರಾತ್ ನಲ್ಲಿ ಕೇಸರಿ ಹಿಡಿತ ನ್ಯೂಸ್ ನೇಷನ್ ಸಮೀಕ್ಷೆ: ಹಿ.ಪ್ರದೇಶ, ಗುಜರಾತ್ ನಲ್ಲಿ ಕೇಸರಿ ಹಿಡಿತ

ಎಬಿಪಿ ನ್ಯೂಸ್ ಎಕ್ಸಿಟ್ ಪೋಲ್ : ಸೌರಾಷ್ಟ್ರದಲ್ಲಿ ಬಿಜೆಪಿ ಜಯಭೇರಿಎಬಿಪಿ ನ್ಯೂಸ್ ಎಕ್ಸಿಟ್ ಪೋಲ್ : ಸೌರಾಷ್ಟ್ರದಲ್ಲಿ ಬಿಜೆಪಿ ಜಯಭೇರಿ

68 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನಗಳನ್ನು ಗಳಿಸಿ ಸರಳ ಬಹುಮತ ಪಡೆಯಲಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಹಿಮಾಚಲ ಪ್ರದೇಶದಾದ್ಯಂತ ಕೇಸರಿ ಧ್ವಜಗಳು ಹಾರಾಡಲು ಆರಂಭಿಸಿವೆ. ಫಲಿತಾಂಶ ಡಿಸೆಂಬರ್ 18ರಂದು ತಿಳಿದುಬರಲಿದೆ.

ಇಂಡಿಯಾ ಟಿವಿ ಎಕ್ಸಿಟ್ ಪೋಲ್: ಬಹುಮತದತ್ತ ಬಿಜೆಪಿ ದಾಪುಗಾಲು! ಇಂಡಿಯಾ ಟಿವಿ ಎಕ್ಸಿಟ್ ಪೋಲ್: ಬಹುಮತದತ್ತ ಬಿಜೆಪಿ ದಾಪುಗಾಲು!

Himachal Pradesh exit poll 2017 : TOI online-CVoter survey

ಗುಜರಾತ್ Exit Poll: ಟೈಮ್ಸ್ ನೌ VMR ಫಲಿತಾಂಶದಂತೆ ಬಿಜೆಪಿಗೆ ಜಯ ಗುಜರಾತ್ Exit Poll: ಟೈಮ್ಸ್ ನೌ VMR ಫಲಿತಾಂಶದಂತೆ ಬಿಜೆಪಿಗೆ ಜಯ

ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ಸಿಗೆ ಈ ಚುನಾವಣೋತ್ತರ ಫಲಿತಾಂಶ ಭಾರೀ ನಿರಾಶೆ ಹುಟ್ಟಿಸಿದೆ. 36 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಸಂಖ್ಯೆ 25ಕ್ಕೆ ಇಳಿಯಲಿದೆ. ಈ ಬಾರಿ ಫಲಿತಾಂಶ ತಿರುವುಮುರುವು ಆಗಲಿದ್ದು, ಬಹುಮತಕ್ಕೆ ಬೇಕಾಗಿರುವ 35 ಸೀಟುಗಳನ್ನು ಮೀರಿ ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ.

ಗುಜರಾತ್ ಚುನಾವಣೆ : ರಿಪಬ್ಲಿಕ್ ಟಿವಿ exit poll ಫಲಿತಾಂಶ ಗುಜರಾತ್ ಚುನಾವಣೆ : ರಿಪಬ್ಲಿಕ್ ಟಿವಿ exit poll ಫಲಿತಾಂಶ

ಬಿಜೆಪಿಯ ಮತಗಳಲ್ಲಿ ಕೂಡ ಗಣನೀಯ ಏರಿಕೆ ಕಂಡುಬಂದಿದ್ದು, 2012ರಲ್ಲಿ ಶೇ.38.5ರಷ್ಟು ಮತ ಪಡೆದಿದ್ದರೆ, 2017ರಲ್ಲಿ ಮತ ಗಳಿಕೆಯ ಸಂಖ್ಯೆ ಶೇ.47.6ಕ್ಕೆ ಏರಲಿದೆ. ಕಾಂಗ್ರೆಸ್ ಮತಗಳಿಕೆ ಏರಿದ್ದರೂ, 11ರಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಇತರ ಪಕ್ಷಗಳು ಹೇಳಹೆಸರಿಲ್ಲದಂತೆ ನಿರ್ನಾಮವಾಗಿವೆ.

English summary
Results of Himachal Pradesh Exit Poll 2017 are out now. Read latest updates related to exit poll done by TOI online-CVoter. BJP will get majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X