ಟುಡೇಸ್ ಚಾಣಕ್ಯ ಸಮೀಕ್ಷೆ: ಹಿ.ಪ್ರದೇಶದಲ್ಲಿ ಬಿಜೆಪಿ ಬಾವುಟ

ಟುಡೇಸ್ ಚಾಣಕ್ಯ ಡಾಟ್ ಕಾಮ್ ನಿಂದ ಹಿಮಾಚಲ ಪ್ರದೇಶ ವಿಧಾನಭಾ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿಗೆ 55 ಸ್ಥಾನ + ಅಥವಾ -7 ಸ್ಥಾನ ಆಚೀಚೆ ಆಗಬಹುದು ಎಂದು ಹೇಳಲಾಗಿದೆ. ಇನ್ನು ಕಾಂಗ್ರೆಸ್ 13 ಸ್ಥಾನ + ಅಥವಾ -7 ಸ್ಥಾನ ಆಚೀಚೆ ಆಗಬಹುದು.

ಇತರರು 0-3 ಸ್ಥಾನ. ಅದು ಕೂಡ + ಅಥವಾ -3 ಸ್ಥಾನ ಆಚೀಚೆ ಆಗಬಹುದು ಎಂದು ಹೇಳಲಾಗಿದೆ. ಇನ್ನು ಸಮೀಕ್ಷೆ ವೇಳೆ, ರಾಜ್ಯದಲ್ಲಿರುವ ಸರಕಾರದಲ್ಲಿ ಬದಲಾವಣೆ ಬಯಸುತ್ತೀರಾ ಎಂಬ ಪ್ರಶ್ನೆಗೆ ಶೇಕಡಾ 61ರಷ್ಟು ಮಂದಿ ಹೌದು ಎಂದು ಉತ್ತರಿಸಿದ್ದರೆ, ಶೇ 30ರಷ್ಟು ಮಂದಿ ಇಲ್ಲ ಎಂದು ಉತ್ತರಿಸಿದ್ದಾರೆ.

Himachal Pradesh Exit Poll 2017- Todayschanakya.com

ಈ ಬಾರಿ ಚುನಾವಣೆಯಲ್ಲಿ ಮತ ಹಾಕುವುದಕ್ಕೆ ಪ್ರಮುಖವಾಗಿ ಪರಿಗಣಿಸಿರುವ ಅಂಶಗಳು ಯಾವುವು ಎಂಬ ಪ್ರಶ್ನೆಗೆ, ಶೇ 33ರಷ್ಟು ಮಂದಿ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿ ಆಧಾರದಲ್ಲಿ ಎಂದಿದ್ದರೆ, ಶೇ 27ರಷ್ಟು ಮಂದಿ ಅಭಿವೃದ್ಧಿಯೇ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 21ರಷ್ಟು ಮಂದಿ ಜಿಎಸ್ ಟಿ ಎಂದಿದ್ದರೆ, ಶೇ 11ರಷ್ಟು ಮಂದಿ ಬೇರೆ ಕಾರಣಗಳನ್ನು ನೀಡಿದ್ದಾರೆ.

ಮುಖ್ಯಮಂತ್ರಿ ಕಾರ್ಯ ವೈಖರಿ ಬಗ್ಗೆ ಕೇಳಿದ ಪ್ರಶ್ನೆಗೆ, ಶೇ 26ರಷ್ಟು ಮಂದಿ ಉತ್ತಮವಾಗಿದೆ ಎಂದಿದ್ದರೆ, ಶೇ 29ರಷ್ಟು ಮಂದಿ ಸುಮಾರು ಮತ್ತು ಶೇ 35ರಷ್ಟು ಮಂದಿ ಕೆಟ್ಟದಾಗಿದೆ ಎಂದು ಉತ್ತರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+