ಎಬಿಪಿ ನ್ಯೂಸ್ ಸಮೀಕ್ಷೆ: ಹಿ.ಪ್ರದೇಶದಲ್ಲಿ ಬಿಜೆಪಿಗೆ ಗದ್ದುಗೆ
ಎಬಿಪಿ ನ್ಯೂಸ್ ನಿಂದ ಗುರುವಾರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿಗೆ 38 ಸ್ಥಾನ, ಕಾಂಗ್ರೆಸ್ 29 ಸ್ಥಾನ, ಇತರರು 1 ಸ್ಥಾನದಲ್ಲಿ ಗೆಲ್ಲಬಹುದು ಎಂದು ಭವಿಷ್ಯ ನುಡಿಯಲಾಗಿದೆ. ಆಡಳಿತ ವಿರೊಧಿ ಅಲೆ ಇಲ್ಲಿ ಕೆಲಸ ಮಾಡಿದಂತೆ ಕಾಣುತ್ತಿದೆ. ಆ ಮೂಲಕ ಕಾಂಗ್ರೆಸ್ ಗೆ ಇನ್ನೊಂದು ಹಿನ್ನಡೆಯಾದಂತೆ ಆಗುತ್ತದೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ಕೆಲ ರಾಜ್ಯಗಳ ಪೈಕಿ ಒಂದಾದ ಹಿಮಾಚಲ ಪ್ರದೇಶದಲ್ಲಿ ಕೂಡ ಬಿಜೆಪಿ ಬಾವುಟ ಹಾರುತ್ತದೆ ಎಂಬ ಅಂಶವನ್ನೇ ಭವಿಷ್ಯ ನುಡಿಯಲಾಗಿದೆ. ಇನ್ನು ಮುಂದಿನ ಗುರಿಯಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಕಡೆಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ಕಣ್ಣಿಡಬಹುದು.

ಡಿಸೆಂಬರ್ ಹದಿನೆಂಟರಂದು ವಿಧಾನಸಭಾ ಚುನಾವಣೆ ಫಲಿತಾಂಶ ಬರುವವರೆಗೆ ಏನಾಗಬಹುದು ಎಂಬ ಕುತೂಹಲ ಅಂತೂ ಇದ್ದೇ ಇರುತ್ತದೆ. ಆದರೆ ಈ ವರೆಗೆ ಸಮೀಕ್ಷೆ ಮಾಡಿರುವ ಎಲ್ಲ ಸಂಸ್ಥೆಗಳೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ ಎಂಬ ಅಂಶವನ್ನೇ ಪುನರುಚ್ಚರಿಸುತ್ತಿವೆ.












Click it and Unblock the Notifications