ಹಿಮಾಚಲ ಪ್ರದೇಶ: ಟೈಮ್ಸ್ ನೌ ಸಮೀಕ್ಷೆ, ಬಿಜೆಪಿಗೆ ಜಯಭೇರಿ
ಬೆಂಗಳೂರು, ಡಿಸೆಂಬರ್ 14: ಚುನಾವಣೋತ್ತರ ಸಮೀಕ್ಷೆಗಳ ಅಬ್ಬರ ಇದೀಗ ಆರಂಭವಾಗಿದೆ. ಟೈಮ್ಸ್ ನೌ ವಿಎಂಆರ್ ನೀಡಿರುವ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಎಕ್ಸಿಟ್ ಪೋಲ್ ವರದಿ ಇಲ್ಲಿದೆ.
ಟೈಮ್ಸ್ ನೌ ವರದಿಯಂತೆ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ಹೊಸ ಇತಿಹಾಸ ಸ್ಥಾಪಿಸಲಿದೆ. ಇಲ್ಲಿ ತನಕ ಯಾವ ಪಕ್ಷ ಕೂಡಾ ಇಲ್ಲಿ ಸತತವಾಗಿ ಅಧಿಕಾರ ಗದ್ದುಗೆಗೇರಿದ ಉದಾಹರಣೆ ಇರಲಿಲ್ಲ.

ಚುನಾವಣಾ ಪೂರ್ವ ಸಮೀಕ್ಷೆ: 68 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 43-47 ಸ್ಥಾನಗಳನ್ನು ಗೆಲ್ಲಲಿದೆ ಎಂದು 'ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ' ಜನಾಭಿಪ್ರಾಯದಲ್ಲಿ ತಿಳಿದು ಬಂದಿತ್ತು.
ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳು ಬೇಕಾಗಿವೆ. ನವೆಂಬರ್ 9ರಂದು ಇಲ್ಲಿ ಮತದಾನ ನಡೆದಿತ್ತು. ಡಿಸೆಂಬರ್ 18ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಚುನಾವಣೋತ್ತರ ಸಮೀಕ್ಷೆ: ಟೈಮ್ಸ್ ನೌ ವಿಎಂಆರ್ ಸಮೀಕ್ಷೆಯಂತೆ ಬಿಜೆಪಿ 51, ಕಾಂಗ್ರೆಸ್ 16 ಹಾಗೂ ಇತರೆ 0.












Click it and Unblock the Notifications