ಕಲಿಯುಗದ ಕರ್ಣ 77ರ ವೈದ್ಯ; ₹100 ಕೋಟಿಗೂ ಅಧಿಕ ಆಸ್ತಿ ಸರ್ಕಾರಕ್ಕೆ ದಾನ, ಸಮಾಜಸೇವೆಗೆ ಮಾದರಿ
ದಶಕಗಳ ಕಾಲ ವೈದ್ಯಕೀಯ ಸೇವೆ ಮಾಡಿದ ಬಳಿಕ ಇದೀಗ ತಮ್ಮ 100 ಕೋಟಿ ರೂಪಾಯಿಗೆ ಅಧಿಕ ಎಲ್ಲ ಚರ, ಸ್ಥಿರ ಆಸ್ತಿಯನ್ನು ಹಿರಿಯ ವೈದ್ಯಾಧಿಕಾರಿಯೊಬ್ಬರು ರಾಜ್ಯ ಸರ್ಕಾರಕ್ಕೆ ಬರೆದುಕೊಟ್ಟಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಇದರ ಔಪಚಾರಿಕ ನೋಂದಣಿ ಕಾರ್ಯವು ಮುಗಿದಿದೆ. ಬಹುಕೋಟಿ ಆಸ್ತಿ ದಾನ ಮಾಡುವ ಮೂಲಕ ಕಲಿಯುಗದ ಕರ್ಣನಾಗಿದ್ದಾರೆ. ಇಳಿ ವಯಸ್ಸಿನಲ್ಲಿ ಇವರ ಸಾಮಾಜಿಕ ಸೇವೆ ಸಮಾಜಕ್ಕೆ ಮಾದರಿಯಾಗಿದೆ.
77 ವರ್ಷದ ನಿವೃತ್ತ ಹಿರಿಯ ವೈದ್ಯಾಧಿಕಾರಿ ಡಾ. ರಾಜೇಂದ್ರ ಕನ್ವರ್ ಅವರು ತಮ್ಮ 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಡಾ. ರಾಧಾಕೃಷ್ಣನ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಹಿಮಾಚಲ ಪ್ರದೇಶದ ಹಿರಿಯ ನಿವೃತ್ತ ವೈದ್ಯಾಧಿಕಾರಿ ಇವರಾಗಿದ್ದು, ಅಲ್ಲಿನ ರಾಜ್ಯ ಸರ್ಕಾರಕ್ಕೆ ಆಸ್ತಿ ಕೊಟ್ಟಿದ್ದಾರೆ.

ಆಗಸ್ಟ್‌ನಲ್ಲಿ ಆಸ್ತಿ ವರ್ಗಾವಣೆ
ಡಾ. ಕನ್ವರ್ ಅವರು 2021 ರಲ್ಲೇ ತಮ್ಮ ಆಸ್ತಿಯನ್ನು ಯಾರಿಗೆ ಸೇರಬೇಕು ಎಂದು ವಿಲ್ ಮಾಡಿದ್ದರು. ಅಂದೇ ಅವರು ಸರ್ಕಾರಕ್ಕೆ ಆಸ್ತಿ ದಾನ ಮಾಡುವ ಕುರಿತು ವಿಲ್‌ನಲ್ಲಿ ಬರೆಸಿದ್ದರು. ಅದನ್ನೀಗ ತಮ್ಮ ಮುಪ್ಪಿನ ಕಾಲಕ್ಕೆ ನಿಯಮಾನುಸಾರ ಕಾರ್ಯಗತಗೊಳಿಸಿದ್ದಾರೆ. ಇದೇ ಆಗಸ್ಟ್ 5 ರಂದು ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ಕನ್ವರ್ ಅವರ ಆಸ್ತಿ ನೋಂದಣಿ ನಡೆಯಿತು. ಔಪಚಾರಿಕ ಆಸ್ತಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದರೆಂದು ವರದಿ ಆಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಡಾ.ಕನ್ವರ್ ಅವರು ಸುಮಾರು 33 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಕಾಲೇಜು ಬಳಿಯ ನದೌನ್‌ನಲ್ಲಿರುವ ಜೋಲ್ ಸಪ್ಪರ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಅವರು ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಮನೆಯಲ್ಲೇ ಉಚಿತ ಚಿಕಿತ್ಸೆ ನೀಡುವ ಕಾಯಕ ಮುಂದುವರಿಸಿದ್ದರು. ನಿತ್ಯವು ಅವರ ಮನೆ ಮುಂದೆ ಅಪಾರ ಸಂಖ್ಯೆಯ ಜನ ಬಂದು ಆರೋಗ್ಯ ಸೇವೆ ಪಡೆಯುತ್ತಿದ್ದರು ಎನ್ನಲಾಗಿದೆ.
32 ವರ್ಷಗಳ ಸೇವೆ, ನಿವೃತ್ತಿ ಬಳಿಕವೂ ಸೇವೆ
ಕುಟುಂಬದ ಆಸ್ತಿಗಳನ್ನು ದಾನ ಮಾಡುವ ನಿರ್ಧಾರ ಇದು ಕೇವಲ ಡಾ. ಅನ್ವಯರ್ ಅವರೊಬ್ಬರದ್ದೇ ಅಲ್ಲ. ಕೆಲವು ವರ್ಷಗಳ ಹಿಂದೆಯೇ ಪತ್ನಿ ಕೃಷ್ಣ ಕನ್ವರ್ ಅವರ ಒಪ್ಪಿಗೆಯೊಂದಿಗೆ ನಿರ್ಧರಿಸಲಾಗಿತ್ತು. ಈ ವೈದ್ಯ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿಯೇ ಅವರು ತಮ್ಮ ದುಡಿಮೆಯ ಹಣವನ್ನು ಬಡ ಜನರ ಆರೋಗ್ಯ ಸೇವೆಗಾಗಿ, ಸಮಾಜದ ಒಳಿತಿಗಾಗಿ ಬಳಸಬೇಕೆಂದು ನಿರ್ಧರಿಸಿದ್ದರು. ಶಿಕ್ಷಣ ಇಲಾಖೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಕನ್ವರ್ ಅವರು 2011 ರಲ್ಲಿ ಶಾಲಾ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು.
"ಕೃಷ್ಣ-ರಾಜೇಂದ್ರ ವೃದ್ಧಾಶ್ರಮ" ಪ್ರಸ್ತಾಪ
ಸುಮಾರು 2,112 ಚದರ ಮೀಟರ್ ಭೂಮಿಯಲ್ಲಿ ಎರಡು ಅಂತಸ್ತಿನ ಮನೆ ಇದೆ. ಕೋಟ್ಯಂತರ ಮೌಲ್ಯದ ಆಭರಣಗಳು, ಇನ್ನಿತರ ಚರಾಸ್ತಿಗಳು ಸೇರಿ ಸುಮಾರು 100 ಕೋಟಿಗೂ ಅಧಿಕ ಮೌಲ್ಯದ್ದಾಗುತ್ತದೆ. ಸರ್ಕಾರ ಆಸ್ತಿ ನೀಡಿರುವ ಕನ್ವರ್ ಅವರು ತಮ್ಮ ಈ ಮನೆಯನ್ನು "ಕೃಷ್ಣ-ರಾಜೇಂದ್ರ ವೃದ್ಧಾಶ್ರಮ" ಎಂಬ ವೃದ್ಧಾಶ್ರಮವಾಗಿ ಬೇಕಿದ್ದರು ಮಾಡಿ. ಇದರಿಂದ ವಯೋವೃದ್ಧರಿಗೆ ಆಸರೆ ಸಿಕ್ಕಂತಾಗುತ್ತದೆ ಎಂದು ಅವರು ಪ್ರಸ್ತಾಪಿಸಿದ್ದಾರೆ. ಆಸ್ತಿ ಮಾತ್ರವಲ್ಲದೇ ವೈದ್ಯಕೀಯ ಕಾಲೇಜಿಗೆ ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿಯೂ ಪ್ರತಿಜ್ಞೆ ಮಾಡಿದ್ದಾರೆ
ಕನ್ವರ್ ಅವರ ಈ ಸಮಾಜಮುಖಿ ಕಾಯ್ಗಳಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕೃತಜ್ಞತೆ ಸಲ್ಲಿಸಿದರು. ನಿಮ್ಮ ಸೇವೆ, ತ್ಯಾಗ ಮತ್ತು ಸಾರ್ವಜನಿಕ ಸೇವೆ ಇತರರಿಗೂ ಸ್ಪೂರ್ತಿ ಎಂದು ತಿಳಿಸಿದ್ದಾರೆ.


Click it and Unblock the Notifications
