ಗೋವಾ:ವೇಶ್ಯಾವಾಟಿಕೆ ಜಾಲದಲ್ಲಿ ತೆಲುಗು ನಟಿ

ಪಣಜಿ, ಜೂ.3: ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿರುವ ಸ್ಥಳೀಯ ಪೊಲೀಸರು, ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಪಂಚತಾರಾ ಹೋಟೆಲಿನಲ್ಲಿದ್ದ ತೆಲುಗು ನಟಿ, ಪಿಂಪ್ ಗಳನ್ನು ಬಂಧಿಸಿದ್ದಾರೆ.

ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಕೊಂಡಿದ್ದ ನಟಿ, ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ತಿಳಿದು ಬಂದಿದೆ. ಆಕೆಯನ್ನು ರಿಮ್ಯಾಂಡ್ ಹೋಂಗೆ ಕಳಿಸಲಾಗಿದೆ. ಈ ಜಾಲದ ಮುಖ್ಯ ಪಿಂಪ್ ಬಂಧನವಾಗಿದೆ.

High-profile prostitution racket busted in Goa; Hindi-Telugu actress caught

ಟಾಲಿವುಡ್‌ನ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಈ ನಟಿಯನ್ನು ಪಿಂಪ್ ಆಯಿಷಾ ಸಯ್ಯದ್ ಎಂಬುವಳು ತನ್ನ ಜಾಲದಲ್ಲಿ ಸೇರಿಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದಳು ಎಂದು ಪಣಜಿ ಪೊಲೀಸರು ಹೇಳಿದ್ದಾರೆ. [ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ತಾರೆಗಳು]

ದೊಡ್ಡ ದೊಡ್ಡ ರೆಸಾರ್ಟ್‌ ಹಾಗೂ ಫೈವ್ ಸ್ಟಾರ್ ಹೋಟಲಿಗೆ ನಟಿಯನ್ನು ಕಳುಹಿಸುವ ದಂಧೆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇಲಾಖೆಯ ಸಿಬ್ಬಂದಿಯೊಬ್ಬನನ್ನು ಇಲ್ಲಿನ ಸ್ಟಾರ್ ಹೊಟೇಲಿಗೆ ಕಳಿಸಿ ಗ್ರಾಹಕನ ಸೋಗಿನಲ್ಲಿ ಡೀಲ್ ಕುದುರಿಸಿದ್ದಾರೆ. ಕೊನೆಗೂ ಆಯಿಷಾಳ ಜಾಲ ಪತ್ತೆ ಹಚ್ಚಿ ಎಲ್ಲರನ್ನು ಬಂಧಿಸುವಲ್ಲಿ ಸಫಲವಾಗಿದೆ.

ಬಂಧಿತ ಆಯೀಷಾ ಬಹುತೇಕ ಎಲ್ಲ ಸ್ಟಾರ್ ಹೊಟೇಲ್‌ಗಳು, ರೆಸಾರ್ಟ್‌ಗಳ ಸಂಪರ್ಕ ಹೊಂದಿದ್ದಾಳೆ. ಅನೇಕ ಗಣ್ಯ ವ್ಯಕ್ತಿಗಳು, ಸಿನಿಮಾ ತಾರೆಯರು ಈಕೆ ಗ್ರಾಹಕರ ಪಟ್ಟಿಯಲ್ಲಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ಧಾಂತ್ ಶಿರೋಡ್ಕರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+