• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ, ಲಷ್ಕರ್ ಬೆದರಿಕೆ ಪತ್ರ

By ವಿಕಾಸ್ ನಂಜಪ್ಪ
|

ನವದೆಹಲಿ, ಸೆಪ್ಟೆಂಬರ್ 26 : ಅಕ್ಟೋಬರ್ 20ರೊಳಗೆ ದೇಶದ ವಿವಿಧ ರೈಲು ನಿಲ್ದಾಣದಲ್ಲಿ ಸ್ಫೋಟಗಳನ್ನು ನಡೆಸಲಾಗತ್ತದೆ ಎಂದು ಬೆದರಿಕೆ ಪತ್ರ ಬಂದಿದೆ. ಲಷ್ಕರ್ ಏ ತೋಯ್ಬಾ ಸಂಘಟನೆ ಈ ಬೆದರಿಕೆ ಹಾಕಿದೆ ಎಂದು ಶಂಕಿಸಲಾಗಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಬುಧವಾರ ಹರ್ಯಾಣದ ಅಂಬಾಲ ರೈಲು ನಿಲ್ದಾಣದಲ್ಲಿ ಬೆದರಿಕೆ ಪತ್ರ ಪೊಲೀಸರಿಗೆ ಸಿಕ್ಕಿದೆ. ಪಾಕಿಸ್ತಾನದ ಕರಾಚಿಯಿಂದ ಪತ್ರ ಬಂದಿದೆ. ಪತ್ರ ಸಿಕ್ಕ ಬಳಿಕ ಅಂಬಾಲ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಪಾಕ್ ಪಾಲಿಗೆ ಉಗ್ರ ಬುರ್ಹಾನ್ ವಾನಿ ಹೀರೋನಂತೆ! ಅಂಚೆ ಚೀಟಿಯಲ್ಲೂ ಅವನೇ!

ಅಕ್ಟೋಬರ್ 20ರೊಳಗೆ ರೈಲು ನಿಲ್ದಾಣದಲ್ಲಿ ಸ್ಫೋಟಗಳನ್ನು ನಡೆಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪತ್ರ ಹುಸಿ ಬೆದರಿಕೆಯೇ ಎಂದು ಸಹ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮಗ ರಾಜೀನಾಮೆ ಕೊಡ್ತಾನೆ, ಬಿಟ್ಟುಬಿಡಿ: ಉಗ್ರರೆದುರು ಅಂಗಲಾಚಿದ್ದ ತಾಯಿ

ಒನ್ ಇಂಡಿಯಾದ ಜೊತೆ ಮಾತನಾಡಿದ ಪೊಲೀಸರು, 'ಜನರಲ್ಲಿ ಆತಂಕ ಮೂಡಿಸಲು ಈ ರೀತಿಯ ಪತ್ರವನ್ನು ಕಳಿಸಿರಬಹುದು. ಹಲವು ರೈಲು ನಿಲ್ದಾಣದಲ್ಲಿ ಸ್ಫೋಟ ನಡೆಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ' ಎಂದು ಹೇಳಿದ್ದಾರೆ.

ಮುಸ್ಲಿಮರ ಸ್ಮಶಾನದಲ್ಲಿ ಭಯೋತ್ಪಾದಕರ ಶವಸಂಸ್ಕಾರಕ್ಕೆ ಸಿಗಲಿಲ್ಲ ಜಾಗ

ರೈಲು ನಿಲ್ದಾಣಗಳು ಮೊದಲಿನಿಂದಲೂ ಉಗ್ರರ ಟಾರ್ಗೆಟ್. ಮುಂಬೈ ಸೇರಿದಂತೆ ದೇಶದ ವಿವಿಧ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಉದಾಹರಣೆಗಳು ಇವೆ. ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ಕೆಲವು ದಿನಗಳ ಹಿಂದೆ ದೆಹಲಿಯಿಂದ ಹೊರಟ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಇದೆ ಎಂಬ ಕರೆ ಬಂದಿತ್ತು. ಸುಮಾರು ಎರಡೂವರೆ ಗಂಟೆಗಳ ಕಾಲ ರೈಲಿನಲ್ಲಿ ತಪಾಸಣೆ ನಡೆಸಲಾಗಿತ್ತು.

English summary
Security has been increased at the Ambala Cantonment railway station, Haryana after the letter threatening to blow up the station was found. The police believe that this could have originated from the Lashkar-e-Tayiba and the letter has a Karachi address.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X