Hero: ಸ್ಟ್ರೈಲಿಷ್ ಲುಕ್‌ನಲ್ಲಿ ಲಾಂಚ್ ಆಯಿತು ಹಿರೋ ಸ್ಕೂಟರ್: ಬೆಲೆ ಕೇಳಿದರೆ ಯೋಚನೆ ಮಾಡುವುದು ಫಿಕ್ಸ್!
ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನ ಛಾಪು ಹೊಂದಿರುವ ಹಿರೋ ಕಂಪನಿ ಈಗ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಮತ್ತೊಂದು ದ್ವಿಚಕ್ರವಾಹನವನ್ನು ಮಾರುಕಟ್ಟೆಯಲ್ಲಿ ಬಿಟ್ಟಿದ್ದು, ಸದ್ಯ ಇದರ ಲುಕ್ ಹಾಗೂ ಸ್ಟೈಲ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಮಿಡ್ ರೇಂಜ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ಈ ಬೈಕ್ ನಿರ್ಮಿಸಲಾಗಿದೆ.
ಈ ಹೊಸ ಸ್ಕೂಟರ್ ಅಪ್‌ಗ್ರೇಡೆಡ್ ಆಗಿದ್ದು ಇದರ ವಿನ್ಯಾಸವು ಫೈಟರ್ ಜೆಟ್‌ಗಳಿಂದ ಪ್ರೇರಿತವಾದಂತಿದೆ. ಸಾಮಾನ್ಯ ಮಾದರಿಗೆ ಹೋಲಿಸಿದರೆ ಇದು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಸಖತ್ ಸ್ಟೈಲಿಷ್ ಲುಕ್ ಹೊಂದಿರುವ ಈ ಬೈಕ್ ಹಲವು ಬಣ್ಣಗಳಲ್ಲಿ ಲಭ್ಯ. ಹಾಗಿದ್ದರೆ ಈ ಬೈಕ್ ವಿಶೇಷತೆ ಏನು ಇಲ್ಲಿದೆ ಮಾಹಿತಿ.

ಎಂಜಿನ್ ಹೇಗಿದೆ?
ಇದಕ್ಕೆ ಕಂಪನಿ ಹೀರೋ ಜೂಮ್ ಕಾಂಬ್ಯಾಟ್ ಆವೃತ್ತಿ ಎಂದು ಹೆಸರಿಟ್ಟಿದೆ. ಇದರ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಳ್ಳುವುದಿಲ್ಲ. ಇದು 110.9cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ Fi ಎಂಜಿನ್ ಹೊಂದಿದೆ. ಈ ಎಂಜಿನ್ 7,250 rpm ನಲ್ಲಿ 8.05 bhp ಟಾರ್ಕ್ ಉತ್ಪಾದಿಸಿದರೆ 5,750 rpm ನಲ್ಲಿ 8.70 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ಕೂಟರ್ 5.2 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.
ಕಂಪನಿಯು ಹೀರೋ ಜೂಮ್ ಬೆಲೆಯನ್ನು ರೂ 80,967 (ಎಕ್ಸ್ ಶೋ ರೂಂ) ಎಂದು ನಿಗದಿ ಮಾಡಿದೆ. ಜೂಮ್ 110 ಸಿಸಿ ವಿಭಾಗದಲ್ಲಿ ಕಾರ್ನರ್ ಲೈಟ್ ಕಾರ್ಯವನ್ನು ಹೊಂದಿರುವ ಮೊದಲ ಸ್ಕೂಟರ್ ಆಗಿದೆ.
ಸ್ಕೂಟರ್‌ನಲ್ಲಿ ಗೈರೊಸ್ಕೋಪಿಕ್, ಅಕ್ಸೆಲೆರೊಮೀಟರ್ ಸಂವೇದಕಗಳನ್ನು ಒದಗಿಸಲಾಗಿದೆ, ಇದು ಸ್ಕೂಟರ್‌ನ ಕಾರ್ನರ್ ಲೈಟ್‌ಗಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಈ ಕಾರಣದಿಂದಾಗಿ, ಸ್ಕೂಟರ್ ಒರಗಿದಾಗ ಅಥವಾ ಒಂದು ಬದಿಗೆ ತಿರುಗಿದಾಗ ಕಾರ್ನರ್ ಬೆಳಕು ಹತ್ತಿಕೊಳ್ಳುತ್ತದೆ. ಸ್ಕೂಟರ್ ಸ್ಥಿರವಾಗಿದ್ದಾಗ ಮತ್ತು ಹ್ಯಾಂಡಲ್‌ಬಾರ್ ಆನ್ ಆಗಿರುವಾಗ, ಕಾರ್ನರ್ ಲೈಟ್ ಆಫ್ ಆಗಿರುತ್ತವೆ.

ಯಾವೆಲ್ಲಾ ಬಣ್ಣಗಳಲ್ಲಿ ಲಭ್ಯ
ಈ ಸ್ಕೂಟರ್ 5 ಬಣ್ಣಗಳಲ್ಲಿ ಲಭ್ಯವಾಗಲಿದೆ. ಇವುಗಳಲ್ಲಿ ಮ್ಯಾಟ್ ಅಬ್ರಾಸ್ ಆರೆಂಜ್, ಕಪ್ಪು, ಸ್ಪೋರ್ಟ್ಸ್ ರೆಡ್, ಪೋಲೆಸ್ಟಾರ್ ಬ್ಲೂ ಮತ್ತು ಪರ್ಲ್ ಸಿಲ್ವರ್ ವೈಟ್ ಸೇರಿವೆ. ಈ ಸ್ಕೂಟರ್ ಹೋಂಡಾ ಡಿಯೋ ಮತ್ತು ಆಕ್ಟಿವಾಗೆ ಪೈಪೋಟಿ ನೀಡಲಿದೆ.
ಹೊಸತು ಏನು?
ZX ರೂಪಾಂತರದ ವೈಶಿಷ್ಟ್ಯಗಳನ್ನು ಜೂಮ್ ಸ್ಕೂಟರ್‌ನಲ್ಲಿ ನೀಡಲಾಗಿದೆ. ಇದರಲ್ಲಿ ಬ್ಲ್ಯೂ ಟೂತ್ ವ್ಯವಸ್ಥೆ ಅಳವಡಿಸಲಾಗಿದ್ದು, ಇದರ ಸಹಾಯದಿಂದ ನೀವು ಕರೆ ಮತ್ತು ಎಚ್ಚರಿಕೆಯ ಅಲರ್ಟ್ ಪಡೆಯಬಹುದು. XTEC ತಂತ್ರಜ್ಞಾನ, ಹಿಂಭಾಗದ ಪ್ರಯಾಣಿಕರಿಗೆ ಹಿಡಿಯಲು ವ್ಯವಸ್ಥೆ, ಮುಂಭಾಗದಲ್ಲಿ USB ಚಾರ್ಜರ್ನೊಂದಿಗೆ ಗ್ಲೋವ್ ಬಾಕ್ಸ್ ಮತ್ತು ಎಲ್ಇಡಿ ಲ್ಯಾಂಪ್ ಹೊಂದಿದ್ದು, ಬ್ಯಾಕ್ ಸೈಡ್‌ನಲ್ಲಿ ಅಂಡರ್ ಸೀಟ್ ಸ್ಟೋರೇಜ್ ವ್ಯವಸ್ಥೆಯನ್ನು ಸಹ ನೀಡಲಾಗಿದೆ.
ಏನೆಲ್ಲಾ ವಿಶೇಷತೆ ಹೊಂದಿದೆ?
ಎಲ್ ಇಡಿ ಹೆಡ್ ಲೈಟ್ ಮತ್ತು ಸಿಂಗಲ್ ಪೀಸ್ ಸೀಟ್
ಈ ಹೀರೋ ಸ್ಕೂಟರ್ 108 ಕೆಜಿ ತೂಕ
ಮಿಶ್ರಲೋಹದ ಚಕ್ರಗಳು ಮತ್ತು ಸರಳ ಹ್ಯಾಂಡಲ್‌ಬಾರ್
ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಶಾಕ್ ಅಬ್ಸರ್ವರ್ ಸಸ್ಪೆನ್ಷನ್
ಸ್ಕೂಟರ್ 19.2 ಲೀಟರ್ ಬೂಟ್ ಸ್ಪೇಸ್
ಸ್ಕೂಟರ್ ಡಿಜಿಟಲ್ ಕನ್ಸೋಲ್ ಹೊಂದಿದೆ.












Click it and Unblock the Notifications