ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಗ್ಗೆ ಸುಳಿವು ನೀಡಲು ಇಲ್ಲಿದೆ ಮಾರ್ಗ
ನವದೆಹಲಿ, ಅಕ್ಟೋಬರ್ 21: ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳು, ತಲೆಮರೆಸಿಕೊಂಡ ಅಪರಾಧಿಗಳ ಬಗ್ಗೆ ಸುಳಿವಿಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯು ಸಾರ್ವಜನಿಕರ ನೆರವು ಕೋರಿದೆ.
ತಲೆ ಮರೆಸಿಕೊಂಡಿರುವವರ ಬಗ್ಗೆ ಯಾವುದೇ ರೀತಿ ಸುಳಿವು ಸಿಕ್ಕರೆ, ದಯವಿಟ್ಟು 011-24368800 ಅಥವಾ ಇಮೇಲ್ : [email protected] ಬಳಸಬಹುದು. ಮಾಹಿತಿ ನೀಡುವ ನಾಗರೀಕರ ಹೆಸರು, ವಿಳಾಸ ಅಥವಾ ಯಾವುದೇ ವಿವರಗಳನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸುವುದಿಲ್ಲ.

ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳ ಪಟ್ಟಿಯನ್ನು ಎನ್ಐಎ ಪ್ರಕಟಿಸಿದ್ದು, ಇದರಲ್ಲಿ ಡಾ ಝಾಕೀರ್ ನಾಯ್ಕ್, ಹಿಜ್ಬುಲ್ ಮುಜಾಹೀದ್ದೀನ್ ಮುಖ್ಯಸ್ಥ ಸಯದ್ ಸಲಾಹುದ್ದೀನ್, ಲಷ್ಕರ್ ಇ ತೋಯ್ಬಾ ಮುಖಂಡ ಹಫೀಜ್ ಸಯೀದ್, ಝಾಕಿ ಉರ್ ರೆಹ್ಮನ್ ಮುಂತಾದವರ ಹೆಸರುಗಳಿವೆ.











Click it and Unblock the Notifications