ಐಸ್ ಕ್ರೀಂ ತಿನ್ನುತ್ತೀಯಾ ಎಂದು ಸ್ವತಃ ತಿನ್ನಿಸಿದ ರಾಹುಲ್ ಗಾಂಧಿ

ಇಂದೋರ್, ಅಕ್ಟೋಬರ್ 30: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜನ ಸಾಮಾನ್ಯರ ಜತೆ ಆರಾಮವಾಗಿ ಬೆರೆಯುತ್ತಾರೆ ಎಂಬುದಕ್ಕೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಮತ್ತೊಂದು ಉದಾಹರಣೆ ಸಿಕ್ಕಿದೆ. ಬಿಸಿ ಏರಿದ ಚುನಾವಣೆ ಪ್ರಚಾರದ ಮಧ್ಯೆಯೂ ರಾಹುಲ್ ಗಾಂಧಿ ಅವರು ಐಸ್ ಕ್ರೀಮ್ ತಿನ್ನುವ ಸಲುವಾಗಿ ಸಮಯ ಮೀಸಲಿಟ್ಟರು.

'ದುಕಾನ್ 56' ಎಂಬ ಮಳಿಗೆಗೆ ತೆರಳಿ, ತಾವೊಬ್ಬ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಎಂಬ ಯಾವ ಅಹಂ ಇಲ್ಲದೆ ಸಾಲಿನಲ್ಲಿ ನಿಂತು ಐಸ್ ಕ್ರೀಂ ಖರೀದಿಸಿ, ಸವಿದರು. ಅದೇ ಸಮಯಕ್ಕೆ ಅಲ್ಲಿ ತನ್ನ ತಂದೆಯ ಜತೆಗಿದ್ದ ಹುಡುಗನೊಬ್ಬನನ್ನು ಮಾತನಾಡಿಸಿ, 'ಐಸ್ ಕ್ರೀಮ್ ಬೇಕಾ?' ಎಂದು ಕೇಳಿ, ಒಂದು ಚಮಚ ಐಸ್ ಕ್ರೀಮ್ ನ ಕೂಡ ತಿನಿಸಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದೆ.

ಇದಕ್ಕೂ ಮುನ್ನ ರಾಹುಲ್ ಗಾಂಧಿ ಅವರು ಉಜ್ಜೈನ್ ನಲ್ಲಿರುವ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಾಹುಲ್ ಗಾಂಧಿ ಅವರ ಯಾವುದೇ ನಡೆಯನ್ನು ಟೀಕಿಸುತ್ತಿರುವ ಬಿಜೆಪಿ, ಸಿಬಿಐ ವಿವಾದ, ರಫೇಲ್ ಸೇರಿದಂತೆ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ.

Hello, want ice cream? Rahul Gandhis evening out in MP

ಮಹಾಕಾಲೇಶ್ವರ ದೇವಸ್ಥಾನಕ್ಕೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಭೇಟಿ ನೀಡಿದ ರಾಹುಲ್ ಅವರದು 'ಹಿಂದೂ ಧರ್ಮದ ಫಾನ್ಸಿ ಡ್ರೆಸ್' ಎಂದು ಬಿಜೆಪಿ ಹೀಗಳೆದಿದೆ. "ನಿಮ್ಮ ಜನಿವಾರ ಯಾವುದು, ಗೋತ್ರ ಯಾವುದು?'' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನೆ ಮಾಡಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 28ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಇತರ ನಾಲ್ಕು ರಾಜ್ಯಗಳ ಫಲಿತಾಂಶದ ಜತೆಗೆ ಡಿಸೆಂಬರ್ 11ರಂದು ಅಲ್ಲೂ ಚುನಾವಣೆ ಫಲಿತಾಂಶ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+