• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಯುಭಾರ ಕುಸಿತ: ಆಂಧ್ರ, ಒಡಿಶಾಗೆ ಚಂಡಮಾರುತ ಭೀತಿ

|

ಒಡಿಶಾ, ಅಕ್ಟೋಬರ್ 10: ಒಡಿಶಾ ಹಾಗೂ ಆಂಧ್ರಪ್ರದೇಶಕ್ಕೆ ಟಿಟ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯ ಎಚ್ಚರಿಕೆಯನ್ನು ಭುವನೇಶ್ವರ ಹವಾಮಾನ ಕೇಂದ್ರ ನೀಡಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ವಾಯುಭಾರ ಕುಸಿತ: ಆಂಧ್ರ, ಒಡಿಸ್ಸಾಗೆ ಅಪ್ಪಳಿಸಲಿದೆ 'ತಿತ್ಲಿ' ಚಂಡಮಾರುತ

ಗಜಪತಿ, ಗಂಜಾಮ್, ಪುರಿ, ಜಗತ್‌ಸಿಂಗ್‌ಪುರ, ಭದ್ರಕ್ ಹಾಗೂ ಇನ್ನಿತರೆ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಒಡಿಶಾಕ್ಕೆ ಭಾರಿ ಚಂಡಮಾರುತ ಅಪ್ಪಳಿಸುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಒಡಿಶಾ ಕರಾವಳಿಯನ್ನು ಪ್ರವೇಶಿಸಿದೆ.ಬಂಗಾಳಕೊಲ್ಲಿಯಲ್ಲಿ ಉಗಮವಾಗಿರುವ ಈ ಚಂಡಮಾರುತಕ್ಕೆ 'ಟಿಟ್ಲಿ' ಎಂದು ಹೆಸರು ನೀಡಲಾಗಿದೆ.

ಮಂಗಳೂರಿನಲ್ಲಿ ಚಂಡಮಾರುತದ ಭೀತಿ: ಲಂಗರು ಹಾಕಿದ ಸಾವಿರಾರು ಬೋಟ್‌ಗಳು

ಅಷ್ಟೇ ಅಲ್ಲದೆ ಅರಬ್ಬಿ ಸಮುದ್ರದಲ್ಲಿ ಲುಬಾನ್ ಚಂಡಮಾರುತ ಅಪ್ಪಳಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕೊಡಗು, ಮಂಗಳೂರು ಭಾಗಗಳಲ್ಲೂ ಚಂಡಮಾರುತ ಭೀತಿ ಎದುರಾಗಿದೆ. ತೀರದಿಂದ 500 ಕಿ.ಮೀ ದೂರದಲ್ಲಿದ್ದ ಚಂಡಮಾರುತವು 10 ಕಿ,ಮೀ ವೇಗದಲ್ಲಿ ಆಂಧ್ರಪ್ರದೇಶದ ಕಡೆ ಚಲಿಸುತ್ತಿದೆ. ಆದ್ದರಿಂದ ಮುಂದಿನ 24 ಗಂಟೆಯೊಳಗಾಗಿ ಇನ್ನುಷ್ಟು ವೇಗವನ್ನು ಪಡೆದುಕೊಂಡು ಭಾರಿ ಮಳೆಯಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ.

English summary
Severe Cyclonic Storm 'Titli' over westcentral Bay of Bengal. Cyclone Warning for districts of north Andhra Pradesh and south Odisha coasts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X