Breaking: ದೇಶದಲ್ಲಿ ಮುಂದಿನ 3-4 ದಿನ ವ್ಯಾಪಕ ಮಳೆ; ಹವಾಮಾನ ಇಲಾಖೆ

ನವದೆಹಲಿ, ಆಗಸ್ಟ್ 23: ಮುಂದಿನ 3-4 ದಿನಗಳಲ್ಲಿ ಮಧ್ಯ ಭಾರತ, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ವ್ಯಾಪಕ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ಮುನ್ಸೂಚನೆ ನೀಡಿದೆ.

ಪೂರ್ವ ರಾಜಸ್ಥಾನ ಮತ್ತು ಪಕ್ಕದ ವಾಯವ್ಯ ಮಧ್ಯಪ್ರದೇಶದ ಮತ್ತು ಗುಜಾರಾತ್ ಮೇಲಿನ ಭಾರಿ ಮಳೆಯಾಗಲಿದೆ. ಒತ್ತಡವು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವುದನ್ನು ಮುಂದುವರೆಸುವ ಸಾಧ್ಯತೆಯಿದೆ. ಮುಂದಿನ ಆರು ಗಂಟೆಗಳ ಅವಧಿಯಲ್ಲಿ ಇದು ಬದಲಾಗುವ ಸಾಧ್ಯತೆಯಿದೆ.

ನೈಋತ್ಯ ರಾಜಸ್ಥಾನ ಮತ್ತು ಪಕ್ಕದ ಆಗ್ನೇಯ ಪಾಕಿಸ್ತಾನದ ಮೇಲಿನ ಕಡಿಮೆ ಒತ್ತಡದ ಪ್ರದೇಶ ಉಂಟಾಗಲಿದ. ಪೂರ್ವ ರಾಜಸ್ಥಾನ ಮತ್ತು ಪಕ್ಕದ ವಾಯುವ್ಯ ಮಧ್ಯಪ್ರದೇಶ, ಸಿಧಿ, ಡಾಲ್ಟೊಂಗಂಜ್, ದಿಘಾ ಒತ್ತಡದ ಕೇಂದ್ರಗಳಾಗಿವೆ.

Heavy Rainfall During The Next 3-4 Days: IMD

ಈ ಒತ್ತಡದಿಂದಾಗಿ ಆಗಸ್ಟ್ 23 ರಂದು ಗುಜರಾತ್ ಮತ್ತು ರಾಜಸ್ಥಾನದ ಉತ್ತರ ಭಾಗಗಳಲ್ಲಿ ಅತಿ ಭಾರಿ ಮಳೆ ಮತ್ತು ಗುಡುಗು ಮಿಂಚು ಸಹಿತ ವ್ಯಾಪಕವಾದ, ಕೆಲವೆಡೆ ಸಾಧಾರಣವಾದ ಮಳೆಯಾಗುವ ಸಾಧ್ಯತೆಯಿದೆ.

ಪಶ್ಚಿಮ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಬುಧವಾರದಂದು ಪ್ರತ್ಯೇಕವಾದ ಭಾರಿ ಮಳೆ, ಗುಡುಗು ಮಿಂಚು ಸಹಿತ ವ್ಯಾಪಕವಾದ ಲಘು ಅಥವಾ ಮಧ್ಯಮ ಮಳೆಯಾಗಲಿದೆ. ಆಗಸ್ಟ್ 26 ರಂದು ಪೂರ್ವ ಮಧ್ಯಪ್ರದೇಶ, ಪಶ್ಚಿಮ ಮಧ್ಯಪ್ರದೇಶ, ಗಂಗಾನದಿ ಪಶ್ಚಿಮ ಬಂಗಾಳ, ಸೌರಾಷ್ಟ್ರ ಮತ್ತು ಕಚ್, ಮಧ್ಯ ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾದಲ್ಲಿ ಮಳೆಯಾಗಲಿದೆ.

Heavy Rainfall During The Next 3-4 Days: IMD

ಆಗಸ್ಟ್ 25 ರಿಂದ 27 ರ ಅವಧಿಯಲ್ಲಿ ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ವ್ಯಾಪಕ ಮಳೆಯಾಗಲುದೆ. ಉತ್ತರಾಖಂಡದ ಮೇಲೆ ನಾಳೆ (ಆಗಸ್ಟ್ 24) ರಂದು ಪ್ರತ್ಯೇಕವಾದ ಭಾರಿ ಮಳೆ ಮತ್ತು ಗುಡುಗು ಮಿಂಚು ಸಹಿತ ವ್ಯಾಪಕವಾದ ಲಘು ಅಥವಾ ಮಧ್ಯಮ ಮಳೆಯಾಗಲಿದೆ.

ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಇಂದು ಮತ್ತು ಆಗಸ್ಟ್ 25 ರಿಂದ 27 ರವರೆಗೆ ಭಾರಿ ಮಳೆ ಮತ್ತು ಗುಡುಗು, ಮಿಂಚು ಸಹಿತ ವ್ಯಾಪಕವಾದ ಮಳೆಯಾಗುವ ಸಾಧ್ಯತೆಯಿದೆ; ಆಗಸ್ಟ್ 26 ಮತ್ತು 27 ರಂದು ಅರುಣಾಚಲ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರೆಯಲಿದೆ.

ಇತ್ತ, ತಮಿಳುನಾಡು ಮತ್ತು ಪಕ್ಕದ ಪುದುಚೇರಿಯ ಕೆಲವು ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳ ಪಕ್ಕದ ಕೆಲವು ಜಿಲ್ಲೆಗಳಲ್ಲಿ ಮಂಗಳವಾರದಿಂದ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಮೋಡ ಕವಿದ ವಾತಾವರಣಾದ ಸಾಧ್ಯತೆಯಿದೆ. ಮುಂದಿನ ಎರಡು ದಿನಗಳಲ್ಲಿ ತಾಪಮಾನವು 36 ರಿಂದ 26-27 ಡಿಗ್ರಿ ಸೆಲ್ಸಿಯಸ್‌ನ ನಡುವೆ ಇರಬಹುದೆಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+