Delhi weather update: ದೆಹಲಿಯಲ್ಲಿ ಗುಡುಗು ಮಿಂಚು ಸಮೇತ ಭಾರೀ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

ದೆಹಲಿ ಏಪ್ರಿಲ್ 13: ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ರಾಷ್ಟ್ರ ರಾಜಧಾನಿ ದೆಹಲಿಗೆ ವರುಣ ಕೃಪೆ ತೋರಿದ್ದಾನೆ. ವಾರಾಂತ್ಯದಲ್ಲಿ ಜೋರು ಮಳೆಯಾಗಿದ್ದು ಜನ ವರ್ಷದ ಮೊದಲ ಮಳೆಯನ್ನು ಆನಂದಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿ ಇಂದು ಸಂಜೆ ಭಾರೀ ಮಳೆಗೆ ಸಾಕ್ಷಿಯಾಗಿದೆ. ದೆಹಲಿಯಲ್ಲಿ ಹವಾಮಾನ ಬದಲಾವಣೆಯಾಗುತ್ತಿದ್ದಂತೆ ಬೇಸಿಗೆ ಬಿಸಿಲಿನಿಂದ ಕೊಂಚ ರಿಲೀಫ್ ಸಿಕ್ಕಿದೆ. ಮುಂದಿನ ಕೆಲ ಗಂಟೆಗಳಲ್ಲಿ ದೆಹಲಿ ಸೇರಿದಂತೆ ಭಾರೀ ಮಳೆಯಾಗುವ ಸೂಚನೆ ಕೂಡ ಇದೆ. ಹೀಗಾಗಿ ದೆಹಲಿಯ 17 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

Heavy rain with thunder and lightning in Delhi 17 flights diverted

ದೆಹಲಿಯ 17 ವಿಮಾನಗಳ ಮಾರ್ಗ ಬದಲಾವಣೆ

ಇಂದು ಸಂಜೆ ದೆಹಲಿಯಲ್ಲಿ ಗುಡುಗು, ಮಿಂಚು ಹಾಗೂ ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗಿದೆ. ಅಲ್ಲದೆ ಮುಂದಿನ ಎರಡು ಗಂಟೆಗಳಲ್ಲಿ ದೆಹಲಿ ಎನ್‌ಸಿಆರ್‌, ನೊಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಇತ್ಯಾದಿಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ದೆಹಲಿಯಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ವಿಮಾನ ನಿಲ್ದಾಣದ ಬಳಿ ಕೆಟ್ಟ ಹವಾಮಾನ ಸೃಷ್ಟಿಯಾಗಿದೆ. ಹೀಗಾಗಿ ಶನಿವಾರ ಸಂಜೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 17 ವಿಮಾನಗಳನ್ನು ತಿರುಗಿಸಲಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಸಂಜೆ 5ರ ನಂತರ ಹೆಚ್ಚಿನ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (IGIA)ದಿಂದ ಪ್ರತಿದಿನ ಸುಮಾರು 1,300 ವಿಮಾನಗಳು ಸಂಚಾರ ಮಾಡುತ್ತವೆ. ಅವುಗಳಲ್ಲಿ ಕೆಲವನ್ನು ಇಂದು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ದೆಹಲಿಯಲ್ಲಿ ಇಂದು ಮತ್ತು ನಾಳೆ ಜೋರು ಮಳೆ

ದೆಹಲಿಯಲ್ಲಿಂದು ಮೋಡ ಕವಿದ ವಾತಾವರಣವಿತ್ತು. ಸಂಜೆ ಬಿರುಸಿನ ಗಾಳಿಯೊಂದಿಗೆ ಗುಡುಗು ಮಿಂಚು ಸಮೇತ ಮಳೆಯಾಗಿದೆ. ದೆಹಲಿಯ ಜೊತೆಗೆ ಸೋನಿಪತ್, ರೋಹ್ಟಕ್, ಖಾರ್ಖೋಡಾ, ಭಿವಾನಿ, ಚಾರ್ಖಿ ದಾದ್ರಿ, ಮಟ್ಟನ್ಹೈಲ್, ಜಜ್ಜರ್, ಫಾರುಖ್‌ನಗರ, ಕೋಸಾಲಿ, ಮಹೇಂದರ್‌ಗಢ್, ರೇವಾರಿ ಮತ್ತು ರಾಜಸ್ಥಾನದ ಭಿವಾರಿ ಸೇರಿದಂತೆ ಹರಿಯಾಣದ ಪಕ್ಕದ ನಗರಗಳಲ್ಲಿ ಶನಿವಾರ ಮಳೆಯಾಗಿದೆ.

ಕೆಲವು ಸ್ಥಳಗಳಲ್ಲಿ ಧೂಳಿನ ಚಂಡಮಾರುತದಂತಹ ರಭಸದ ಬಿರುಗಾಳಿ ಬೀಸಿದೆ. ಶನಿವಾರ ಸಂಜೆ ಮಳೆ ಅನೇಕರಿಗೆ ಆನಂದ ತಂದಿದೆ. ವಾರಾಂತ್ಯದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇಂಡಿಯಾ ಗೇಟ್‌ನಂತಹ ಸ್ಥಳಗಳಿಗೆ ಭೇಟಿ ನೀಡಲು ಮಳೆ ಉತ್ತೇಜಿಸಿದೆ.

Heavy rain with thunder and lightning in Delhi 17 flights diverted

IMD ಮುನ್ಸೂಚನೆಯ ಪ್ರಕಾರ, ರಾಷ್ಟ್ರ ರಾಜಧಾನಿ ಸೇರಿದಂತೆ ಮುಂದಿನ ಎರಡು ಗಂಟೆಗಳಲ್ಲಿ ಬಹದ್ದೂರ್‌ಗಢ್, ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಮನೇಸರ್ ನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಗಂಟೆಗೆ 30-50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.

ನವದೆಹಲಿಯ ಪ್ರಾದೇಶಿಕ ಹವಾಮಾನ ಇಲಾಖೆ ಹೊರಡಿಸಿದ ಹವಾಮಾನ ಬುಲೆಟಿನ್ ಪ್ರಕಾರ, ನಗರದಲ್ಲಿ ಭಾನುವಾರವೂ ಲಘು ಮಳೆ ಮತ್ತು ಗುಡುಗು ಸಹಿತ ಮೋಡ ಕವಿದ ವಾತಾವರಣವಿರುತ್ತದೆ. (35-45 kmph) ವೇಗದಲ್ಲಿ ಬಿರುಗಾಳಿ ಬೀಸಲಿದೆ. ಇದರೊಂದಿಗೆ ಮಳೆಯು ಇರುತ್ತದೆ.

ಸೋಮವಾರ ಏಪ್ರಿಲ್ 15 ರಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ತುಂಬಾ ಲಘುವಾದ ತುಂತುರು ಮಳೆಯು ಜೋರಾದ ಗಾಳಿಯೊಂದಿಗೆ (30-40 ಕಿಮೀ ವೇಗ) ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನದಲ್ಲಿನ ಹಠಾತ್ ಬದಲಾವಣೆ ರಸ್ತೆಗಳಲ್ಲಿ ಟ್ರಾಫಿಕ್ ಉಂಟು ಮಾಡುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+