IMD Weather Forecast: ಚಂಡಮಾರುತ ಪ್ರಸರಣ: ಈ ಭಾಗಗಳಲ್ಲಿ ಧಾರಾಕಾರ ಮಳೆ! ಆರೆಂಜ್ ಅಲರ್ಟ್
IMD Cyclone alert: ಕೆಲವೇ ಕೆಲವು ರಾಜ್ಯಗಳಲ್ಲಿ ಸುರಿದಿದ್ದ ಮುಂಗಾರು ಭಾರೀ ಮಳೆ ಇದೀಗ ಭಾರತಾದ್ಯಂತ ಚುರುಕುಗೊಳ್ಳುತ್ತಿದೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೂ ಸಾಧಾರಣದಿಂದ ಭಾರೀ ಮಳೆಯ ಆಗಲಿದೆ. ವಾಯು ಚಂಡಮಾರುತದ ಪರಿಚಲನೆಯು ಸೃಷ್ಟಿಯಾಗಿದ್ದು, ಇದು ಸಮುದ್ರ ಮಟ್ಟದಲ್ಲಿ 5 ಕಿಲೋ ಮೀಟರ್‌ಗೂ ಎತ್ತರವಿದೆ. ಇದು ಸೇರಿದಂತೆ ವಿವಿಧೆಡೆ ಸ್ಟ್ರಫ್ ಉಂಟಾಗಿದೆ. ವಾಯುಭಾರ ಕುಸಿತ ಸ್ಥಿತಿ ಮುಂದುವರಿದ ಪರಿಣಾಮ ವಿವಿಧ ರಾಜ್ಯಗಳಿಗೆ ಹವಾಮಾನ ಇಲಾಖೆಯು (IMD) ಭಾರೀ ಮಳೆ ಮುನ್ನೆಚ್ಚರಿಕೆ ನೀಡಿದೆ.
ಸರಾಸರಿ ಸಮುದ್ರ ಮಟ್ಟದಲ್ಲಿ ಮಾನ್ಸೂನ್ ಸ್ಟ್ರಫ್ ಸದ್ಯ ಗಂಗಾನಗರ, ರೋಹ್ಟಕ್, ಲಕ್ನೋ, ವಾರಣಾಸಿ, ಡಾಲ್ಟೊಂಗಂಜ್, ಜಮ್ ಶೆಡ್ಪುರ, ಕಾಂಟೈ ಮೂಲಕ ಹಾದುಹೋಗಲಿದೆ. ಅಲ್ಲಿಂದ ಪೂರ್ವಕ್ಕೆ ಈಶಾನ್ಯ ಬಂಗಾಳ ಕೊಲ್ಲಿಯ ದಿಕ್ಕಿನತ್ತ ಸಾಗಲಿದೆ ಎಂದು ಹವಾಮಾನ ಇಲಾಖೆ ಬುಧವಾರದ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.

ಚಂಡಮಾರುತ ತೀವ್ರತೆ ಹೆಚ್ಚಳ
ದಕ್ಷಿಣ ಭಾರತದ ಆಂಧ್ರಪ್ರದೇಶ ಕರಾವಳಿ, ಪಕ್ಕದ ದಕ್ಷಿಣ ಒಡಿಶಾ ಕರಾವಳಿಗಳಲ್ಲಿ ಮೇಲ್ಭಾಗದ ವಾಯು ಚಂಡಮಾರುತದ ಪರಿಚಲನೆ ಉಂಟಾಗಿದೆ. ಈಗ ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ನೆರೆಹೊರೆಯ ಮೇಲೆ ಇದೆ. ಸರಾಸರಿ ಸಮುದ್ರ ಮಟ್ಟದಿಂದ 5.8 ಕಿಲೋ ಮೀಟರ್ ವರೆಗೆ ವಿಸ್ತರಣೆ ಆಗಿದೆ. ಅಲ್ಲಿಂದ ಆಗ್ನೆಯ ದಿಕ್ಕಿನತ್ತ ಬಿರುಗಾಳಿ ಚಲಿಸುವ ನಿರೀಕ್ಷೆ ಇದೆ.
ಉತ್ತರ ಒಳನಾಡಿನಿಂದ ಕರಾವಳಿ ಆಂಧ್ರಪ್ರದೇಶದ ಮಧ್ಯ ಭಾಗಗಳವರೆಗೆ ಸರಿಸುಮಾರು ಸಮುದ್ರ ಮಟ್ಟದ ಮೇಲ್ಮೈನಲ್ಲಿ ಗಾಳಿ ತೀವ್ರತೆ ಹೆಚ್ಚಾಗಿದೆ. ನಾಳೆ ಗುರುವಾರ ಜುಲೈ 24ರಂದು ಈ ಚಂಡಮಾರುತ ಪ್ರಸರಣದ ಬಿರುಗಾಳಿ ಉತ್ತರ ಬಂಗಾಳ ಕೊಲ್ಲಿಯತ್ತ ಸಾಗಿ ಸ್ಪಷ್ಟ ಕಡಿಮೆ ಒತ್ತಡದ ಪ್ರದೇಶವಾಗಿ ರೂಪಗೊಂಡು ಮತ್ತು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಈ ಹವಾಮಾನ ವೈಪರೀತ್ಯಗಳ ಪ್ರಭಾವದಿಂದ ಜುಲೈ 26ರವರೆಗೆ ಮುಂದಿನ ಮೂರು ದಿನಗಳ ಕಾಲ ಛತ್ತೀಸ್‌ಗಢ, ಪಶ್ಚಿಮ ಬಂಗಾಳದ ಗಂಗಾ ನದಿ ತೀರ, ಜಾರ್ಖಂಡ್, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಒಡಿಶಾ ಮತ್ತು ವಿದರ್ಭದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ ಈ ಭಾಗದಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ರಾಜ್ಯಗಳಿಗೆ ಭಾರೀ ಮಳೆ: ಯೆಲ್ಲೋ ಅಲರ್ಟ್
ಜುಲೈ 24ರಂದು ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಬಿಹಾರ, ಆಂಧ್ರಪ್ರದೇಶದ ಕರಾವಳಿ, ಪೂರ್ವ ಮಧ್ಯಪ್ರದೇಶ, ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಾಫರಾಬಾದ್ ಪ್ರದೇಶಗಳು ಹಾಗೂ ಕರ್ನಾಟಕ, ಕೇರಳ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತೆಲಂಗಾನ ಮತ್ತು ತಮಿಳುನಾಡು ಭಾಗದಲ್ಲಿ ಧಾರಾಕಾರ ಮಳೆ ಆಗಲಿದೆ. ಈ ರಾಜ್ಯಗಳಿಗೆ 'ಯೆಲ್ಲೋ ಅಲರ್ಟ್ ನೀಡಲಾಗಿದೆ. ಆ ರಾಜ್ಯಗಳ ಕರಾವಳಿ ಹಾಗೂ ನಿರ್ದಿಷ್ಟ ಪ್ರದೇಶಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗಾಳಿಯ ವೇಗ ಎಷ್ಟಿರುತ್ತೆ?
ಭಾರೀ ಮಳೆ ರಾಜ್ಯಗಳಲ್ಲಿ ಮತ್ತು ವಿವಿಧ ಕರಾವಳಿ ಭಾಗದಲ್ಲಿ ಪ್ರತಿ ಗಂಟೆಗ ಗಾಳಿ ವೇಗ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಸಾಗಲಿದೆ. ಬಿಹಾರ, ಪಶ್ಚಿಮ ಬಂಗಾಳದ, ಒಡಿಶಾ, ಕರ್ನಾಟಕ ಕರಾವಳಿಯಲ್ಲಿ ಗಾಳಿಯ ವೇಗ 30 ರಿಂದ 40 ಕಿ.ಮೀ. ವೇಗದಲ್ಲಿ ಮಳೆ ಆಗಲಿದೆ.












Click it and Unblock the Notifications