ತಮಿಳುನಾಡಿಗೆ ಮಳೆಯ ಹೈ ಅಲರ್ಟ್, ಎಲ್ಲೆಲ್ಲಿ ಮಳೆ ಸಂಭವ?

ಚೆನ್ನೈ, ನವೆಂಬರ್ 25: ತಮಿಳುನಾಡಿಗೆ ಈಗ ಜಲ ಸಂಕಟ ಎದುರಾಗಿದೆ. ಪ್ರತಿ ವರ್ಷೂ ಮುಂಗಾರಿಗಿಂತ ಹಿಂಗಾರು ಮಳೆ ತಮಿಳುನಾಡಿಲ್ಲಿ ಭಾರಿ ಅನಾಹುತವನ್ನೇ ಸೃಷ್ಟಿಸುತ್ತಿದೆ.

ತಮಿಳುನಾಡಿಗೆ ಭಾರಿ ಮಳೆಯ ಹೈ ಅಲರ್ಟ್ ಘೋಷಿಸಲಾಗಿದೆ. ನವೆಂಬರ್ 26-27ರಂದು ಎರಡು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡು, ಹರ್ಯಾಣ, ಪಂಜಾಬ್, ರಾಜಸ್ಥಾನದಲ್ಲೂ ಮಳೆಯಾಗುವ ಮುನ್ಸೂಚನೆ ದೊರೆತಿದೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರ ಇನ್ನಿತರೆಡೆ ಹಿಮಪಾತ ಆರಂಭವಾಗಿದೆ.

 ಎಲ್ಲೆಲ್ಲಿ ಹೆಚ್ಚು ಮಳೆ?

ಎಲ್ಲೆಲ್ಲಿ ಹೆಚ್ಚು ಮಳೆ?

ತಮಿಳುನಾಡು, ಪುದುಚೆರಿ, ಕರೈಕಲ್‌ನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮತ್ತೊಂದು ಕಡೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಖಂಡ, ಹರ್ಯಾಣ ಭಾಗಗಳಲ್ಲಿ ಹಿಮಪಾತವಾಗುತ್ತಿದೆ. ಇನ್ನೂ ಒಂದು ವಾರದಲ್ಲಿ ಕನಿಷ್ಠ ಉಷ್ಣಾಂಶ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ನವೆಂಬರ್ 26-27ರಂದು ಮಳೆ

ನವೆಂಬರ್ 26-27ರಂದು ಮಳೆ

ನವೆಂಬರ್ 26-27ರಂದು ದೆಹಲಿ, ಚಂಡೀಗಢ, ತಮಿಳುನಾಡು, ಹಿಮಾಚಲ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದೆಹಲಿಯ 10 ಸ್ಥಳಗಳನ್ನು ಗುರುತಿಸಲಾಗಿದ್ದು, ಅತಿ ಹೆಚ್ಚು ಮಾಲಿನ್ಯವಿರುವ ಪ್ರದೇಶಗಳು ಎಂದು ಗುರುತಿಸಲಾಗಿದೆ.

ಕರ್ನಾಟಕದಲ್ಲೂ ಮಳೆ

ಕರ್ನಾಟಕದಲ್ಲೂ ಮಳೆ

ತಮಿಳುನಾಡಿನಲ್ಲಿ ಮಳೆಯಾಗುತ್ತಿರುವ ಕಾರಣ ಅದು ಕರ್ನಾಟಕದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ ಭಾಗ, ಪಂಜಾಬ್, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ರಾಜಸ್ತಾನ, ಹರ್ಯಾಣ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಬೆಂಗಳೂರಲ್ಲಿ ತಾಪಮಾನ ಹೇಗಿದೆ?

ಬೆಂಗಳೂರಲ್ಲಿ ತಾಪಮಾನ ಹೇಗಿದೆ?

ಬೆಂಗಳೂರಲ್ಲಿ ಶುಭ್ರ ಆಕಾಶವಿರದಲಿದ್ದು, ಮಳೆ ಬರುವ ಯಾಉದೇ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.ಒಣಹವೆ ಮುಂದುವರೆಯಲಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 25.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18.6 ಡಿಗ್ರಿ ಸೆಲ್ಸಿಯಸ್, ಕೈಎಎಲ್‌ನಲ್ಲಿ ಗರಿಷ್ಠ 30.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 15.6 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 27.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+