Maggi Noodles: ಆನ್‌ಲೈನ್‌ನಲ್ಲಿ ನೂಡಲ್ಸ್ ಖರೀದಿಸಿ ತಿಂದು ಬಾಲಕಿ ಸಾವು....!

ಆನ್‌ಲೈನ್‌ನಲ್ಲಿ ನೂಡಲ್ಸ್ ಖರೀದಿಸಿ ತಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು ನೂಡಲ್ಸ್ ಪ್ರಿಯರನ್ನು ಬೆಚ್ಚಿ ಬೀಳಿಸಿದೆ. ಇತ್ತೀಚೆಗಷ್ಟೇ ತಮಿಳುನಾಡಿನ ತಿರುಚ್ಚಿಯ ತಿರುವೆರುಂಪುರ್ ಮೂಲದ ಸ್ಟೆಫಿ ಜಾಕ್ವೆಲಿನ್ ಎಂಬ 16 ವರ್ಷದ ಬಾಲಕಿ ನೂಡಲ್ಸ್ ತಿಂದು ಮೃತಪಟ್ಟಿದ್ದಾಳೆ. ಸ್ಟೆಫಿ ಜಾಕ್ವೆಲಿನ್ ಮಸಾಲೆಯುಕ್ತ ನೂಡಲ್ಸ್ ಅನ್ನು ಇಷ್ಟಪಡುವ ಕಾರಣ, ಶನಿವಾರ ಸ್ಟೆಫಿ ಜಾಕ್ವೆಲಿನ್ ಅವರ ತಾಯಿ ಆನ್‌ಲೈನ್‌ನಲ್ಲಿ ನೂಡಲ್ಸ್ ಅನ್ನು ಆರ್ಡರ್ ಮಾಡಿದ್ದರು.

ಶನಿವಾರ ರಾತ್ರಿ ನೂಡಲ್ಸ್ ತಿಂದು ಮಲಗಿದ ಬಾಲಕಿ ಮರುದಿನ ಬೆಳಗ್ಗೆ ಬಹಳ ಹೊತ್ತಾದರೂ ಏಳಲಿಲ್ಲ. ಆಕೆಯನ್ನು ಎಬ್ಬಿಸಿದಾಗಲೂ ಬಾಲಕಿ ಎದ್ದೇಳಲಿಲ್ಲ. ಇದರಿಂದಾಗಿ ಗಾಬರಿಗೊಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳೀಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಳಿಕ ಬಾಲಕಿ ನ್ಯೂಡಲ್ಸ್‌ನಿಂದ ಮೃತಪಟ್ಟಿರುವುದು ಗೊತ್ತಾಗಿದೆ.

Health trichy girl died after eating spicy noodles know what could be the reason in kannada

ರಾಜ್ಯ ಆರೋಗ್ಯ ಸಚಿವ ಎಂ ಸುಬ್ರಮಣಿಯನ್ ನೂಡಲ್ಸ್ ತಿಂದೇ ಬಾಲಕಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಬಾಲಕಿ ತಾಯಿ ಅಮೆಜಾನ್‌ನಿಂದ ಸ್ಪೈಸಿ ನೂಡಲ್ಸ್ ಆರ್ಡರ್ ಮಾಡಿದ್ದರು. ಆಹಾರ ಸುರಕ್ಷತಾ ಅಧಿಕಾರಿಗಳು ಈ ಸ್ಥಳಕ್ಕೆ ದಾಳಿ ಮಾಡಿದ ಬಳಿಕ ನೂಡಲ್ಸ್ ಅವಧಿ ಮುಗಿದಿರುವುದನ್ನು ಪತ್ತೆ ಹಚ್ಚಿದ್ದಾರೆ. ಜೊತೆಗೆ ಕಸದ ತೊಟ್ಟಿಯಲ್ಲಿದ್ದ 800 ಕೆಜಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

Health trichy girl died after eating spicy noodles know what could be the reason in kannada

ಅಲ್ಲದೆ ಅವಧಿ ಮೀರಿದ ಉತ್ಪನ್ನಗಳು, ಪಾನೀಯಗಳನ್ನೂ ಈ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ತಿರುಚ್ಚಿ ಸಗಟು ಆಹಾರ ವ್ಯಾಪಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು ಆಹಾರ ಸುರಕ್ಷತಾ ಮಾನದಂಡಗಳ ಪ್ರಕರಣವನ್ನು ದಾಖಲಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ನೂಡಲ್ಸ್ ಅಂದರೆ ಬೇಡ ಎನ್ನುವವರಿಗಿಂತ ಬೇಕು ಎನ್ನುವವರೇ ಹೆಚ್ಚಾಗಿದ್ದಾರೆ. ತ್ವರಿತವಾಗಿ ತಯಾರಿಸಬಲ್ಲ ಈ ನೂಡಲ್ಸ್‌ ಬಹುತೇಕರ ಅಡುಗೆ ಮನೆಗಳಲ್ಲಿ ಇದ್ದೇ ಇರುತ್ತೆ. ಮಕ್ಕಳಿಗೆ ಹಸಿವು ಅಂದಾಗ ತ್ವರಿತವಾಗಿ ಮತ್ತು ರುಚಿಕರವಾಗಿ ತಯಾರಿಸುವ ಆಹಾರ ಅಂದರೆ ಅದು ನೂಡಲ್ಸ್. ಹೀಗಾಗಿ ಬಹುತೇಕ ತಾಯಂದಿರೂ ಇದನ್ನು ತಯಾರಿಸಲು ಇಷ್ಟ ಪಡುತ್ತಾರೆ. ಹೀಗಾಗಿ ನೂಡಲ್ಸ್ ಎಲ್ಲರ ಮನೆಯಲ್ಲಿ ತಯಾರಿಸುವ ಸಾಮಾನ್ಯ ಆಹಾರವಾಗಿದೆ.

Health trichy girl died after eating spicy noodles know what could be the reason in kannada

ಆದರೆ ಈ ನೂಡಲ್ಸ್ ಯಾವುದೇ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುವುದಿಲ್ಲ. ಇದನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳೇ ಹೆಚ್ಚು. ಇದರಲ್ಲಿ ಸೋಡಿಯಂ ಅಧಿಕವಾಗಿದ್ದು ರಕ್ತದೊತ್ತಡ ಹೆಚ್ಚಿಸುತ್ತದೆ. ಹೀಗಾಗಿ ನೂಡಲ್ಸ್ ಆರೋಗ್ಯಕ್ಕೆ ಹಾನಿಕಾರಕ್ಕೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಅದಾಗ್ಯೂ ಜನ ನೂಡಲ್ಸ್ ಅನ್ನು ಸೇವಿಸುತ್ತಿರುವುದು ಆರೋಗ್ಯದ ಬಗ್ಗೆ ಆತಂಕ ಹೆಚ್ಚಿಸಿದೆ.

ನೀವು ಆರೋಗ್ಯವಾಗಿರಲು ಬಯಸಿದರೆ, ನೂಡಲ್ಸ್‌ನಂತಹ ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಿ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಪ್ರಾರಂಭಿಸಿ. ಇದರಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ದೂರವಿರಬಹುದು. ಆರೋಗ್ಯಕರ ಜೀವನ ನಡೆಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+