ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವೇಷ ಭಾಷಣ ಕ್ರಿಮಿನಲ್ ಕೃತ್ಯ, ಆದರೆ ಹೆಚ್ಚುತ್ತಿದೆ: ಮಾಜಿ ಸುಪ್ರೀಂ ನ್ಯಾಯಮೂರ್ತಿ ಕಳವಳ

|
Google Oneindia Kannada News

ನವದೆಹಲಿ, ಜನವರಿ 21: ದ್ವೇಷ ಭಾಷಣದ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್, "ದ್ವೇಷ ಭಾಷಣ ಕ್ರಿಮಿನಲ್ ಕೃತ್ಯವಾಗಿದೆ ಮತ್ತು ತಪ್ಪಿತಸ್ಥರಿಗೆ ಕನಿಷ್ಠ ಶಿಕ್ಷೆಯನ್ನು ನೀಡಲು ಸಂಸತ್ತು ನಿಬಂಧನೆಗಳನ್ನು ತಿದ್ದುಪಡಿ ಮಾಡಬೇಕು," ಎಂದು ಸಲಹೆ ನೀಡಿದರು. "ಆಡಳಿತ ಪಕ್ಷದ ಉನ್ನತ ಅಧಿಕಾರಿಗಳು ಈ ಬಗ್ಗೆ ಮೌನವಾಗಿರುವುದು ಮಾತ್ರವಲ್ಲದೆ ಅದನ್ನು ಬಹುತೇಕ ಒಪ್ಪಿಕೊಳ್ಳುತ್ತಿದ್ದಾರೆ," ಎಂದು ವಿಷಾಧ ವ್ಯಕ್ತಪಡಿಸಿದರು.

"ಇತ್ತೀಚೆಗೆ ನಾವು ಈ ದೇಶದಲ್ಲಿ ಸರ್ಕಾರವನ್ನು ಮುಕ್ತವಾಗಿ ಟೀಕಿಸಿದ್ದಕ್ಕಾಗಿ ದೇಶದ್ರೋಹದ ಕಾನೂನುಗಳ ಅಡಿಯಲ್ಲಿ ಕೇಸುಗಳನ್ನು ಹೊಂದಿರುವ ವಿದ್ಯಾರ್ಥಿಗಳು, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಮುಂತಾದ ಯುವಕರನ್ನು ಹೊಂದಿದ್ದೇವೆ. ಅದು ನಿಜವಾಗಿಯೂ ವಸಾಹತುಶಾಹಿ ಸ್ವಭಾವವಾಗಿದೆ. ನಮ್ಮ ಸಂವಿಧಾನದ ಅಡಿಯಲ್ಲಿ ಇದಕ್ಕೆ ಯಾವುದೇ ಸ್ಥಾನವಿಲ್ಲ. ಮತ್ತೊಂದೆಡೆ, ದ್ವೇಷದ ಭಾಷಣ ಮಾಡುವ ವ್ಯಕ್ತಿಗಳು ಇದ್ದಾರೆ. ನರಮೇಧಕ್ಕೆ ಕರೆ ನೀಡುತ್ತಾರೆ. ಆದರೆ ಈ ಜನರನ್ನು ಬಂಧಿಸಲು ಕೆಲವು ಅಧಿಕಾರಿಗಳು ಹಿಂಜರಿಯುವುದನ್ನು ನಾವು ನೋಡುತ್ತಿದ್ದೇವೆ," ಎಂದು "ಕಾನೂನು ನಿಯಮದ ಸಾಂವಿಧಾನಿಕ ಆಧಾರಗಳು" ಕುರಿತು ಮುಖ್ಯ ಭಾಷಣವನ್ನು ಮಾಡುತ್ತಾ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಹೇಳಿದ್ದಾರೆ.

ಹರಿದ್ವಾರ ದ್ವೇಷದ ಭಾಷಣವಲ್ಲ, ಸ್ತ್ರೀದ್ವೇಷಕ್ಕಾಗಿ ಯತಿ ನರಸಿಂಹಾನಂದ ಬಂಧನ: ಪೊಲೀಸರುಹರಿದ್ವಾರ ದ್ವೇಷದ ಭಾಷಣವಲ್ಲ, ಸ್ತ್ರೀದ್ವೇಷಕ್ಕಾಗಿ ಯತಿ ನರಸಿಂಹಾನಂದ ಬಂಧನ: ಪೊಲೀಸರು

ನಿಬಂಧನೆಗಳ ತಿದ್ದುಪಡಿಯನ್ನು ಸೂಚನೆ: "ಸ್ವಲ್ಪ ಸಮಯದ ಹಿಂದೆ ದೇಶದ ಉಪರಾಷ್ಟ್ರಪತಿಯವರು ಭಾಷಣದಲ್ಲಿ ದ್ವೇಷಪೂರಿತ ಭಾಷಣವು ಅಸಾಂವಿಧಾನಿಕ ಎಂದು ಹೇಳಿದ್ದಾರೆ. ಇದು ಸಂತೋಷದ ವಿಚಾರ. ಇದು ಅಸಾಂವಿಧಾನಿಕ ಮಾತ್ರವಲ್ಲ, ಅಪರಾಧ ಕೃತ್ಯವೂ ಆಗುತ್ತದೆ. ದುರದೃಷ್ಟವಶಾತ್, ಪ್ರಾಯೋಗಿಕವಾಗಿ, ಒಬ್ಬ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಬಹುದಾದರೂ, ಅದು ಎಂದಿಗೂ ಸಂಭವಿಸುವುದಿಲ್ಲ. ನಮ್ಮ ಸಂವಿಧಾನದಲ್ಲಿರುವ ಕಾನೂನಿನ ನಿಯಮವನ್ನು ನಾವು ನಿಜವಾಗಿಯೂ ಬಲಪಡಿಸಲು ಬಯಸಿದರೆ, ಕನಿಷ್ಠ ಶಿಕ್ಷೆಗಳನ್ನು ನೀಡಲು ಸಂಸತ್ತು ಈ ನಿಬಂಧನೆಗಳನ್ನು ತಿದ್ದುಪಡಿ ಮಾಡಬೇಕೆಂದು ನಾನು ಬಲವಾಗಿ ಸಲಹೆ ನೀಡುತ್ತೇನೆ," ಎಂದು ಕೂಡಾ ಹೇಳಿದ್ದಾರೆ.

Hate Speech a Criminal Act, but Increasing: Former Supreme Judge Express Concern

"ಆಡಳಿತ ಪಕ್ಷದ ಅಧಿಕಾರು ದ್ವೇಷ ಭಾಷಣ ಒಪ್ಪುತ್ತಾರೆ"

"ನಾವು, ದುರದೃಷ್ಟವಶಾತ್, ದ್ವೇಷದ ಭಾಷಣದ ಬಗ್ಗೆ ಮೌನವಾಗಿರುವುದು ಮಾತ್ರವಲ್ಲದೆ ಅದನ್ನು ಬಹುತೇಕ ಒಪ್ಪುತ್ತಿದ್ದೇವೆ. ನಾವು ಹಿಂದಿನ ದಿನ ಪಕ್ಷದ ಮುಖ್ಯಸ್ಥರಿಂದ ಮತಾಂಧ ಎಂದು ಹೆಸರಾದ ಮೊಘಲ್ ಚಕ್ರವರ್ತಿ, ಅಂದರೆ ಔರಂಗಜೇಬ್ ಜಾತ್ಯತೀತ ನಾಯಕ ಎಂದು ಕರೆಯಲ್ಪಡುವ ಶಿವಾಜಿಯ ಬಗ್ಗೆಗಿನ ಮಾತನ್ನು ಕೇಳಿದ್ದೇವೆ. ಈಗ ವಾಸ್ತವವಾಗಿ, ನಮ್ಮ ಸಂವಿಧಾನದಲ್ಲಿ ಭ್ರಾತೃತ್ವವು ಒಂದು ಪ್ರಮುಖ ಮೌಲ್ಯವಾಗಿದೆ ನೀವು ಸಹೋದರತ್ವವನ್ನು ಉಳಿಸಲು ಬಯಸಿದರೆ ನೀವು ಬಾಬರ್ ಅಥವಾ ಅವರ ಮೊಮ್ಮಗ ಅಕ್ಬರ್‌ನಂತಹ ಮೊಘಲ್ ಚಕ್ರವರ್ತಿಯನ್ನು ಆಯ್ಕೆ ಮಾಡಬೇಕೆಂದು ನಾನು ಭಾವಿಸಿದ್ದೇನೆ. ಅಕ್ಬರ್ ಬಹುಶಃ ಯಾವುದೇ ರಾಷ್ಟ್ರವು ಯಾವುದೇ ಸಮಯದಲ್ಲಿ ತಿಳಿದಿರದ ಅತ್ಯಂತ ಜಾತ್ಯತೀತ ಆಡಳಿತಗಾರರಲ್ಲಿ ಒಬ್ಬರಾಗಿ ಪ್ರಸಿದ್ಧರಾಗಿದ್ದರು," ಎಂದು ಕೂಡಾ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಇತಿಹಾಸವನ್ನು ವಿವರಿಸಿದ್ದಾರೆ.

 ದ್ವೇಷ ಭಾಷಣ: ಯತಿ ನರಸಿಂಗಾನಂದ ಜಾಮೀನು ಅರ್ಜಿ ವಜಾ ಏಕೆ? ದ್ವೇಷ ಭಾಷಣ: ಯತಿ ನರಸಿಂಗಾನಂದ ಜಾಮೀನು ಅರ್ಜಿ ವಜಾ ಏಕೆ?

ಬಾಬರ್ ಬರೆದ ಪತ್ರ

"ಯಾವುದೇ ರಾಷ್ಟ್ರವು ಯಾವುದೇ ಸಂದರ್ಭದಲ್ಲಿ ತಿಳಿದಿರುವ ಪ್ರಸಿದ್ಧ ಜಾತ್ಯತೀತ ನಾಯಕರಲ್ಲಿ ಅಕ್ಬರ್ ಒಬ್ಬರು. ಅವರು ತಮ್ಮ ಅಜ್ಜ ಬಾಬರ್ ನಂತರ ಆಡಳಿತವನ್ನು ಮಾಡಿದ್ದಾರೆ. ಬಾಬರ್ ಸಾಯುವ ಒಂದು ವರ್ಷದ ಮೊದಲು ತನ್ನ ಮಗ ಹುಮಾಯೂನ್‌ಗೆ ಬರೆದ ಪತ್ರವನ್ನು ನೀವು ಓದಬೇಕೆಂದು ನಾನು ಬಯಸುತ್ತೇನೆ. ಬಾಬರ್ ಬರೆದ ಪತ್ರವು ಭಾರತದ ವೈವಿಧ್ಯತೆಯ ಬಗ್ಗೆ ಮತ್ತು ಅವನ ಮಗ ಹುಮಾಯೂನ್ ಅದರ ವಿವಿಧ ಧರ್ಮಗಳು ಮತ್ತು ಸಮುದಾಯಗಳೊಂದಿಗೆ ವ್ಯವಹರಿಸುವಾಗ ದೇಶವನ್ನು ಹೇಗೆ ಆಳಬೇಕು ಎಂಬುದರ ಕುರಿತು ಹೇಳುತ್ತದೆ," ಎಂದು ತಿಳಿಸಿದ್ದಾರೆ. "ದೇಶದ್ರೋಹದ ಕಾನೂನನ್ನು ಸಂಪೂರ್ಣವಾಗಿ ತೊಡೆದುಹಾಕಲು, ಮತ್ತು ಮುಕ್ತ ಭಾಷಣವನ್ನು ಅನುಮತಿಸುವ ಸಮಯ ಇದು. ಯಾರನ್ನಾದರೂ ಹಿಂಸಾಚಾರಕ್ಕೆ ಪ್ರಚೋಧಿಸುವುದು ಅಲ್ಲ. ದ್ವೇಷದ ಭಾಷಣ ಹಿಂಸಾಚಾರದಿಂದ ಕೊನೆಯಾಗುತ್ತದೆ," ಎಂದರು. (ಒನ್‌ಇಂಡಿಯಾ ಸುದ್ದಿ)

English summary
Hate speech a criminal act, But increasing: former Supreme Court judge express concern.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X