Viral: ಆಫೀಸ್‌ ಉದ್ಯೋಗಿಗಳಿಗೆ ಕಿಯಾ ಸೊನೆಟ್ ಕಾರು ಗಿಫ್ಟ್ ಕೊಟ್ಟ ಬಾಸ್‌!

ಸಾಮಾನ್ಯವಾಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ಇನ್ಸೆಂಟಿವ್ ಅಥವಾ ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡುವುದನ್ನು ನಾವು ನೋಡಿದ್ದೇವೆ. ಕೆಲಸದ ಒತ್ತಡದ ನಡುವೆ ಉದ್ಯೋಗಿಗಳನ್ನ ಪ್ರೋತ್ಸಾಹಿಸಲು ಕಾರ್ಪೊರೇಟ್ ಜಗತ್ತಿನಲ್ಲಿ ನಾನಾ ರೀತಿಯ ಕಸರತ್ತುಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳ ನಿಷ್ಠೆ ಹಾಗೂ ಶ್ರಮವನ್ನು ಗುರುತಿಸಿ, ಬರೋಬ್ಬರಿ ಕಾರುಗಳನ್ನೇ ಗಿಫ್ಟ್ ಆಗಿ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.

ಹರಿಯಾಣ ಮೂಲದ ಮಿಟ್ಸ್ ಹೆಲ್ತ್‌ಕೇರ್ ಸಂಸ್ಥೆಯು ತನ್ನ ನಾಲ್ವರು ನಿಷ್ಠಾವಂತ ಉದ್ಯೋಗಿಗಳಿಗೆ ಹೊಚ್ಚಹೊಸ ಕಿಯಾ ಸೊನೆಟ್ ಕಾರುಗಳನ್ನ ಉಡುಗೊರೆಯಾಗಿ ನೀಡಿದೆ. ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಕಾರ್ಮಿಕರ ಬೆನ್ನಿಗೆ ನಿಲ್ಲುವ ಮೂಲಕ ಈ ಕಂಪನಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Haryana MITS Healthcare Boss Gifts Brand New Kia Sonet Cars To Four Loyal Employees For Hard Work

ನಿಷ್ಠಾವಂತ ಉದ್ಯೋಗಿಗಳಿಗೆ ಕಾರು ಗಿಫ್ಟ್

ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ, ಅದರ ಹಿಂದೆ ಉದ್ಯೋಗಿಗಳ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ನಿಷ್ಠೆ ಬಹಳ ಮುಖ್ಯವಾಗುತ್ತದೆ. ಇದನ್ನ ಅರಿತಿರುವ ಮಿಟ್ಸ್ ಹೆಲ್ತ್‌ಕೇರ್ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಎಂ.ಕೆ. ಭಾಟಿಯಾ ಅವರು, ತಮ್ಮ ಕಂಪನಿಯ ಯಶಸ್ಸಿಗೆ ಕಾರಣರಾದ ನಾಲ್ವರು ಸಿಬ್ಬಂದಿಯನ್ನ ಗುರುತಿಸಿ ಸನ್ಮಾನಿಸಿದ್ದಾರೆ.

ನಿತಿನ್, ನಿರ್ಮಲ್, ವೀನಸ್ ಮತ್ತು ಗುರ್ವೀರ್ ಎಂಬ ನಾಲ್ವರು ಉದ್ಯೋಗಿಗಳಿಗೆ ಈ ಹೊಚ್ಚಹೊಸ ಕಾರುಗಳು ಒಲಿದುಬಂದಿವೆ. ವರ್ಷಗಳ ಕಾಲ ಕಂಪನಿಗಾಗಿ ತಮ್ಮನ್ನು ತಾವು ಮುಡಿಪಾಗಿಟ್ಟುಕೊಂಡು, ಸಂಸ್ಥೆಯ ಪ್ರತಿಯೊಂದು ಹಂತದ ಬೆಳವಣಿಗೆಯಲ್ಲೂ ಜೊತೆಯಾಗಿ ನಿಂತ ಈ ನಾಲ್ವರ ಸಾಧನೆಯನ್ನ ಗುರುತಿಸಿ ಈ ಬಹುಮಾನವನ್ನ ನೀಡಲಾಗಿದೆ.

ಕಿಯಾ ಸೊನೆಟ್ ಕಾರು ವಿತರಣೆ ಸಂಭ್ರಮ

ಉದ್ಯೋಗಿಗಳಿಗೆ ಕಾರು ವಿತರಿಸಿದ ಸಂಭ್ರಮಾಚರಣೆಯ ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಮಿಟ್ಸ್ ಹೆಲ್ತ್‌ಕೇರ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಸಂಸ್ಥಾಪಕ ಎಂ.ಕೆ. ಭಾಟಿಯಾ ಅವರು ಖುದ್ದಾಗಿ ಕಾರಿನ ಕೀಗಳನ್ನು ಉದ್ಯೋಗಿಗಳಿಗೆ ಹಸ್ತಾಂತರಿಸುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ.

ಶೋರೂಮ್‌ನಲ್ಲಿ ಹೊಸ ಕಾರುಗಳನ್ನ ಅನಾವರಣಗೊಳಿಸಿದ ಬಳಿಕ ಕೇಕ್ ಕತ್ತರಿಸಿ ವಿಜೃಂಭಣೆಯಿಂದ ಸಂಭ್ರಮಿಸಲಾಗಿದೆ. ಅನಿರೀಕ್ಷಿತವಾಗಿ ಈ ಉಡುಗೊರೆ ಪಡೆದ ಉದ್ಯೋಗಿಗಳ ಮುಖದಲ್ಲಿ ಅರಳಿದ ಮಂದಹಾಸ ಹಾಗೂ ಅವರ ಕುಟುಂಬದವರ ಖುಷಿ ಎದ್ದುಕಾಣುತ್ತಿದೆ.

ಕಂಪನಿಯು ತನ್ನ ಕ್ಯಾಪ್ಶನ್‌ನಲ್ಲಿ, "ಇದು ಕೇವಲ ಉಡುಗೊರೆಯಲ್ಲ, ನಮ್ಮ ಉದ್ಯೋಗಿಗಳ ಮೇಲಿನ ಪ್ರೀತಿ ಹಾಗೂ ಕೃತಜ್ಞತೆಯ ಸಂಕೇತ. ನಮ್ಮ ಬೆಳವಣಿಗೆಯ ಹಿಂದಿರುವ ಶಕ್ತಿಯನ್ನು ನಾವು ಸದಾ ಗೌರವಿಸುತ್ತೇವೆ" ಎಂದು ಬರೆದುಕೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮೆಚ್ಚುಗೆ

ಮಿಟ್ಸ್ ಹೆಲ್ತ್‌ಕೇರ್ ಕಂಪನಿಯ ಈ ಔದಾರ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಉದ್ಯೋಗಿಗಳನ್ನು ಕೇವಲ ಕೆಲಸಗಾರರಂತೆ ನೋಡದೆ, ಕುಟುಂಬದ ಸದಸ್ಯರಂತೆ ಕಂಡು ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಇಂತಹ ಸಂಸ್ಥೆಗಳು ನಿಜಕ್ಕೂ ಮಾದರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಇಂತಹ ಪ್ರೋತ್ಸಾಹದಾಯಕ ಕಾರ್ಯಗಳು ಉದ್ಯೋಗಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬುತ್ತವೆ, ಜೊತೆಗೆ ಇತರ ನೌಕರರಿಗೂ ಉತ್ತಮವಾಗಿ ಕೆಲಸ ಮಾಡಲು ಸ್ಪೂರ್ತಿಯಾಗುತ್ತವೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಒಟ್ಟಿನಲ್ಲಿ, ಕೇವಲ ಲಾಭದ ಕಡೆಗೆ ಮಾತ್ರ ಗಮನಹರಿಸದೆ ತಮ್ಮ ಉದ್ಯೋಗಿಗಳ ಶ್ರೇಯೋಭಿವೃದ್ಧಿಗೂ ಮಿಡಿಯುವ ಇಂತಹ ಕಂಪನಿಗಳು ಇಂದಿನ ಕಾರ್ಪೊರೇಟ್ ಜಗತ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+