Haryana Exit Polls: 'ಹರಿಯಾಣದ ನಾಗರಿಕರಿಗೆ ಇಂದು ವಿಜಯೋತ್ಸವ' ವಿನೇಶ್ ಫೋಗಟ್
ಹರಿಯಾಣ ವಿಧಾನಸಭೆ ಚುನಾವಣೆ 2024ರ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಈ ಬಗ್ಗೆ ಕ್ರೀಡಾಪಟು ವಿನೇಶ್ ಫೋಗಟ್ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಹರಿಯಾಣದ ಜನರಿಗೆ ಸಂತೋಷದ ಕ್ಷಣವಾಗಿದೆ. ಇದು ಕಳೆದ 10 ವರ್ಷಗಳಲ್ಲಿ ಜನರು ಎದುರಿಸಿದ ದೌರ್ಜನ್ಯದ ಫಲಿತಾಂಶವಾಗಿದೆ. ಈ ಅದ್ಭುತ ಪ್ರದರ್ಶನಕ್ಕಾಗಿ ನಾನು ಕಾಂಗ್ರೆಸ್ ಅನ್ನು ಅಭಿನಂದಿಸುತ್ತೇನೆ" ಎಂದು ಜುಲಾನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಹೇಳಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ 2024ರ ಫಲಿತಾಂಶವನ್ನು ಅಕ್ಟೋಬರ್ 8 ರಂದು ಪ್ರಕಟಿಸಲಾಗುವುದು. ಇದಕ್ಕೂ ಮುನ್ನ ಅಕ್ಟೋಬರ್ 5 ರಂದು ಅಂದರೆ ಇಂದು ಸಂಜೆ 6.30ರ ನಂತರದಿಂದ ವಿವಿಧ ಮಾಧ್ಯಮ ಚಾನೆಲ್‌ಗಳು ಮತ್ತು ಸಮೀಕ್ಷಾ ಏಜೆನ್ಸಿಗಳಿಂದ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಮತದಾನದ ನಂತರ ತಕ್ಷಣವೇ ಎಕ್ಸಿಟ್ ಪೋಲ್‌ಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಮತದಾರರು ಯಾರಿಗೆ ಮತ ಚಲಾಯಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಹಾಗಾದರೆ ಹರಿಯಾಣದಲ್ಲಿ ಯಾವ ಪಕ್ಷ ಸರ್ಕಾರ ರಚಿಸಬಹುದು ಎಂದು ಸಮೀಕ್ಷೆಗಳ ಭವಿಷ್ಯ ನುಡಿದಿದೆ? ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು? ಎಂದು ತಿಳಿಯೋಣ.
ಜಮ್ಮು ಮತ್ತು ಕಾಶ್ಮೀರದ 'ಪೀಪಲ್ ಪಲ್ಸ್' ಎಕ್ಸಿಟ್ ಪೋಲ್ ಬಿಡುಗಡೆ ಆಗಿದೆ. ಇಲ್ಲಿ ಕಾಂಗ್ರೆಸ್ 46 ರಿಂದ 50 ಸ್ಥಾನ, ಬಿಜೆಪಿ ಕೇವಲ 23 ರಿಂದ 27, ಪಿಡಿಪಿ 07 ರಿಂದ 11 ಸೀಟುಗಳು ಗೆದ್ದರೆ, ಇತರೆ ಪಾರ್ಟಿಗಳು 4ರಿಂದ 6 ಸೀಟು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ದಶಕದ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ಸೆಟೆದು ನಿಲ್ಲುವ ಭರವಸೆ ಸಿಕ್ಕಿದೆ.

ರಿಪಬ್ಲಿಕ್ ಮ್ಯಾಟ್ರಿಜ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. ಹರಿಯಾಣದಲ್ಲಿ, ಮ್ಯಾಟ್ರಿಕ್ಸ್ ಸಮೀಕ್ಷೆ ಬಿಜೆಪಿಗೆ 18 ರಿಂದ 24 ಸ್ಥಾನಗಳನ್ನು, ಕಾಂಗ್ರೆಸ್‌ಗೆ 55 ರಿಂದ 62 ಸ್ಥಾನಗಳನ್ನು, ಜೆಜೆಪಿಗೆ 0 ರಿಂದ 3 ಸ್ಥಾನಗಳನ್ನು, ಭಾರತೀಯ ರಾಷ್ಟ್ರೀಯ ಲೋಕದಳಕ್ಕೆ (ಐಎನ್‌ಎಲ್‌ಡಿ) 3 ರಿಂದ 6 ಸ್ಥಾನಗಳನ್ನು ಮತ್ತು ಇತರರಿಗೆ 2 ರಿಂದ 5 ಸ್ಥಾನಗಳನ್ನು ನೀಡಿದೆ. ಆದರೆ ಮ್ಯಾಟ್ರಿಸ್‌ನ ಎಕ್ಸಿಟ್ ಪೋಲ್ ಪ್ರಕಾರ, ಆಮ್ ಆದ್ಮಿ ಪಕ್ಷ (ಎಎಪಿ) ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ತನ್ನ ಖಾತೆಯನ್ನು ತೆರೆದೇ ಇಲ್ಲ. ಹರಿಯಾಣದಲ್ಲಿ ಬಹುಮತಕ್ಕೆ 90 ರಲ್ಲಿ 46 ಸ್ಥಾನಗಳು ಬೇಕು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮಂಗಳವಾರ ಪೂರ್ಣಗೊಂಡಿದೆ. ಅಕ್ಟೋಬರ್ 5 ರಂದು ಹರಿಯಾಣದಲ್ಲಿ ಮತದಾನ ನಡೆಯಲಿದೆ. ಹರಿಯಾಣದಲ್ಲಿ ಮತದಾನ ಪ್ರಕ್ರಿಯೆ ಮುಗಿದ ನಂತರ, ವಿವಿಧ ಏಜೆನ್ಸಿಗಳು ಎರಡೂ ರಾಜ್ಯಗಳ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಿವೆ.
ಚುನಾವಣಾ ಆಯೋಗ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 7 ರಿಂದ ಅಕ್ಟೋಬರ್ 5 ರ ಸಂಜೆ 6.30 ರವರೆಗೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಅಥವಾ ಇತರ ಯಾವುದೇ ಪ್ರಸಾರದ ಮೂಲಕ ನಿರ್ಗಮನ ಸಮೀಕ್ಷೆಗಳ ಪ್ರಸಾರವನ್ನು ನಿಷೇಧಿಸಿದೆ. ಹೀಗಾಗಿ ಅಕ್ಟೋಬರ್ 5ರ ಶನಿವಾರ ಸಂಜೆ 6.30ರ ನಂತರವಷ್ಟೇ ಎಕ್ಸಿಟ್ ಪೋಲ್‌ಗಳು ಬಹಿರಂಗಗೊಂಡಿವೆ.
ಹರಿಯಾಣ ಸದಸ್ಯರ ಬಲಾಬಲ
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಇಂದು (ಅಕ್ಟೋಬರ್ 5) ಮತದಾನ ನಡೆಯಿತು. 1,031 ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಜಿಂದ್‌ನಲ್ಲಿ ಅತ್ಯಧಿಕ ಅಂದರೆ 72 ಅಭ್ಯರ್ಥಿಗಳು ಕಣದಲ್ಲಿದ್ದರೆ, ನುಹ್‌ನಲ್ಲಿ ಅತಿ ಕಡಿಮೆ ಅಂದರೆ 21 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಒಟ್ಟು 95 ಲಕ್ಷ ಪುರುಷ, 85 ಲಕ್ಷ ಮಹಿಳಾ ಮತದಾರರು ಸೇರಿದಂತೆ ಒಟ್ಟು 1.83 ಕೋಟಿ ಮತದಾರರು ಹೊಸ ಸರಕಾರ ರಚನೆಯ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರು.
2019 ಹರಿಯಾಣ ಅಸೆಂಬ್ಲಿ ಚುನಾವಣಾ ನಿರ್ಗಮನ ಸಮೀಕ್ಷೆ
ಹರಿಯಾಣದಲ್ಲಿ 2019 ರ ವಿಧಾನಸಭಾ ಚುನಾವಣೆಯಲ್ಲಿ, 90 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇಸರಿ ಪಕ್ಷಕ್ಕೆ 60ಕ್ಕೂ ಹೆಚ್ಚು ಸ್ಥಾನಗಳನ್ನು ಸಮೀಕ್ಷೆಗಳು ಊಹಿಸಿದ್ದವು. ಕಾಂಗ್ರೆಸ್ ಪಕ್ಷಕ್ಕೆ ಸುಮಾರು 18 ಸ್ಥಾನಗಳನ್ನು ನೀಡಿದ್ದವು. ಫಲಿತಾಂಶದ ವೇಳೆ ಬಿಜೆಪಿ 40 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿತು.
ಎಕ್ಸಿಟ್ ಪೋಲ್ ಎಂದರೇನು?
ಎಕ್ಸಿಟ್ ಪೋಲ್ ಒಂದು ರೀತಿಯ ಚುನಾವಣಾ ಸಮೀಕ್ಷೆ. ಮತದಾನದ ದಿನದಂದು ಮತದಾರನು ಮತದಾನದ ನಂತರ ಮತಗಟ್ಟೆಯಿಂದ ಹೊರಬರುವಾಗ, ವಿವಿಧ ಸಮೀಕ್ಷೆ ಸಂಸ್ಥೆಗಳು ಮತ್ತು ಸುದ್ದಿ ವಾಹಿನಿಗಳ ಪ್ರತಿನಿಧಿಗಳು ಅಲ್ಲಿ ಹಾಜರಿರುತ್ತಾರೆ. ಅವರು ಮತದಾನದ ಬಗ್ಗೆ ಮತದಾರರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಇದರಲ್ಲಿ ಯಾರಿಗೆ ಮತ ಹಾಕಿದ್ದೀರಿ ಎಂದು ಕೇಳುತ್ತಾರೆ. ಈ ರೀತಿಯಾಗಿ ಪ್ರತಿ ವಿಧಾನಸಭೆ ಅಥವಾ ಲೋಕಸಭೆಯ ವಿವಿಧ ಮತಗಟ್ಟೆಗಳಿಂದ ಮತದಾರರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಹೀಗೆ ಮತದಾನ ಮುಗಿಯುವ ಹೊತ್ತಿಗೆ ಹೆಚ್ಚಿನ ಮಾಹಿತಿ ಸಂಗ್ರಹವಾಗುತ್ತದೆ. ಈ ಡೇಟಾವನ್ನು ಸಂಗ್ರಹಿಸುವ ಮೂಲಕ ಮತ್ತು ಅವರ ಉತ್ತರಗಳ ಪ್ರಕಾರ, ಸಾರ್ವಜನಿಕ ಮನಸ್ಥಿತಿ ಯಾವ ರೀತಿಯಲ್ಲಿದೆ ಎಂದು ಅಂದಾಜಿಸಲಾಗುತ್ತದೆ. ಇದರ ಆಧಾರದ ಮೇಲೆ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆಯಬಹುದು ಎಂದು ನಿರ್ಧರಿಸಲಾಗುತ್ತದೆ. ಮತದಾನ ಮುಗಿದ ನಂತರವೇ ಪ್ರಸಾರವಾಗುತ್ತದೆ.
ನಿರ್ಗಮನ ಸಮೀಕ್ಷೆಗಳನ್ನು ಯಾರು ಬಿಡುಗಡೆ ಮಾಡುತ್ತಾರೆ?
ಸಮೀಕ್ಷೆ ಏಜೆನ್ಸಿಗಳು ಅಥವಾ ಸುದ್ದಿ ವಾಹಿನಿಗಳು ನಿರ್ಗಮನ ಸಮೀಕ್ಷೆಗಳನ್ನು ನಡೆಸುತ್ತವೆ. ಮತದಾನದ ನಂತರ ತಕ್ಷಣವೇ ಸಮೀಕ್ಷಾ ವರದಿಗಳನ್ನು ಪ್ರಸಾರ ಮಾಡಲಾಗುತ್ತದೆ. ಇದರಲ್ಲಿ ಮತದಾರ ಹೇಳಿಕೆ ಮಾತ್ರ ಸೇರಿಸಲಾಗುತ್ತದೆ. ಮತದಾನದ ನಂತರ ಹೊರಬರುವ ಜನರ ಹೇಳಿಕೆಯನ್ನು ಮಾತ್ರ ಎಕ್ಸಿಟ್ ಪೋಲ್‌ನಲ್ಲಿ ಪರಿಗಣಿಸಲಾಗುತ್ತದೆ. ಎಕ್ಸಿಟ್ ಪೋಲ್ ನಿರ್ಣಾಯಕ ಹಂತದಲ್ಲಿ ನಡೆಯುತ್ತದೆ. ಇದು ಯಾವ ಪಕ್ಷದಲ್ಲಿ ಜನರು ವಿಶ್ವಾಸ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ.












Click it and Unblock the Notifications