Haryana Election Times Now Exit Poll Results: ಹರ್ಯಾಣದಲ್ಲಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ
ನವದೆಹಲಿ, ಅಕ್ಟೋಬರ್ 05: 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗುವುದರ ಜತೆಯಲ್ಲೇ ಹರಿಯಾಣದಲ್ಲೂ ನರೇಂದ್ರ ಮೋದಿ ಅವರ ಅಲೆ ಭಾರೀ ಪ್ರಭಾವ ಬೀರಿತ್ತು. ಹೀಗಾಗಿ ರಾಜ್ಯದಲ್ಲೂ ಕಮಲ ಅರಳಿ, ಬರೋಬ್ಬರಿ ಒಂದು ದಶಕದ ಕಾಲ ಕೇಸರಿ ಪಾಳಯದ ಆಳ್ವಿಕೆ ಸಾಧ್ಯವಾಯಿತು. ಇದೇ ಹುಮ್ಮಸ್ಸಿನಲ್ಲಿ ಹರಿಯಾಣದಲ್ಲಿ ಮೂರನೇ ಬಾರಿಯೂ ರಾಜ್ಯದ ಗದ್ದುಗೆ ಏರಲು ಬಿಜೆಪಿ ಮುಂದಾಗಿದ್ದಾರೆ, ಆದರೆ, ಕಾಂಗ್ರೆಸ್ ಪಕ್ಷ ತನ್ನ ನೆಲೆ ಗಟ್ಟಿಮಾಡಿಕೊಳ್ಳಲು ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಬುನಾದಿ ಹಾಕಿಬಿಟ್ಟಿದೆ.
ಮೂರನೇ ಬಾರಿಗೆ ಗದ್ದುಗೆ ಏರಲು ಬಿಜೆಪಿ ರೆಡಿಯಾಗಿದ್ದು, ಈ ಬಾರಿ ಹರಿಯಾಣ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆ, ಒಂದೇ ಹಂತದಲ್ಲಿ ಅಕ್ಟೋಬರ್ 5ರ ಶನಿವಾರ ಮತದಾನ ನಡೆದಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು 46 ಮ್ಯಾಜೀಕ್ ನಂಬರ್ ಬೇಕಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಪ್ರಬಲ ಎದುರಾಳಿಗಳಾಗಿವೆ.

ಇಂದು(ಶನಿವಾರ) ಹರಿಯಾಣದಲ್ಲಿ ಸಂಜೆ 5 ಗಂಟೆಯ ವೇಳೆಗೆ ಶೇ 68.83ರಷ್ಟು ಮತದಾನವಾಗಿತ್ತು. ಎಷ್ಟು ಮತದಾನವಾಗಿದೆ ಎಂಬ ಅಂತಿಮ ಚಿತ್ರಣ ಇನ್ನೂ ಲಭ್ಯವಾಗಬೇಕಿದೆ. ಮತದಾನ ಮುಗಿಯುತ್ತಿದ್ದಂತೆಯೇ ರಾಷ್ಟ್ರೀಯ ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಪ್ರಕಟವಾಗಿವೆ. ಬಾರೀ ನಿರೀಕ್ಷೆಯಂತೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕರು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ಎಕ್ಸಿಟ್ ಪೋಲ್ ಫಲಿತಾಂಶ: ಹರ್ಯಾಣ ವಿಧಾನಸಭೆ ಚುನಾವಣೆ 2024ರ ಕುರಿತು Poll Of Polls On Times Now ಸಮೀಕ್ಷೆ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಯಾರು ಅಧಿಕಾರವನ್ನು ಹಿಡಿಯಬಹುದು ಎಂಬ ಲೆಕ್ಕಾಚಾರ ಸಮೀಕ್ಷೆಯಿಂದ ಸಿಕ್ಕಿದೆ. Poll Of Polls On Times Now ಸಮೀಕ್ಷೆ ಪ್ರಕಾರ, ಅಧಿಕಾರ ಪಡೆಯುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಸಮೀಕ್ಷೆಯ ಪ್ರಕಾರ, ಬಿಜೆಪಿಯೂ 26 ಸ್ಥಾನಗಳನ್ನ ಗೆಲ್ಲಬಹುದು. ಕಾಂಗ್ರೆಸ್ ಬರೋಬ್ಬರಿ 55 ಸ್ಥಾನಗಳನ್ನ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಜೆಜೆಪಿ 0-1 ಮತ್ತು ಇತರರು 8 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
ಒಟ್ನಾಲಿ, ಮತ್ತೆ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಬಿಜೆಪಿಗೆ ಚುನಾವಣಾಪೂರ್ವ ಸಮೀಕ್ಷೆಯಿಂದ ಶಾಕ್ ಎದುರಾಗಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 30 ಕ್ಷೇತ್ರಗಳಲ್ಲಿ ಗೆದ್ದಿತ್ತು. ಜೆಜೆಪಿ 10 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಇತರರು 9 ಕ್ಷೇತ್ರಗಳಲ್ಲಿ ಗೆದ್ದಿದ್ದರು. ಬಿಜೆಪಿ ಹಾಗೂ ಜೆಜೆಪಿ ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಿದ್ದವು. ಆದರೆ, ಈಗ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ನೋಡಿದರೆ ಬಿಜೆಪಿಗೆ ಮುಖಭಂಗವಾಗಲಿದ್ದು, ಹೀನಾಯ ಸೋಲನ್ನು ಅನುಭವಿಸುವ ಸಾಧ್ಯತೆ ಇದೆ. ಅಕ್ಟೋಬರ್ 8 ರಂದು ಅಧಿಕೃತ ಫಲಿತಾಂಶ ಬರಲಿದ್ದು, ಅಂದು ಎಕ್ಸಿಟ್ ಪೋಲ್‌ಗಳು ನಿಜವಾಗುತ್ತಾ? ಸುಳ್ಳಾಗುತ್ತಾ? ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications