Haryana Assembly Election 2024 Republic Bharat-Matrize Exit Poll Results: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಗೆಲುವು

ಹರಿಯಾಣದ, ಅಕ್ಟೋಬರ್ 05: 2024ರ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಇಂದು (ಅಕ್ಟೋಬರ್‌ 05) ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಮ್ಯಾಟ್ರಿಜ್ ಚುಣಾವಣೋತ್ತರ ಸಮೀಕ್ಷೆ ಪ್ರಕಟಿಸಿದೆ. ಹಾಗಾದರೆ ಈ ಸಮೀಕ್ಷೆ ಪ್ರಕಾರ ಯಾವ ಪಕ್ಷ ಗೆಲುವು ಸಾಧಿಸಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಿಪಬ್ಲಿಕ್‌ ಮ್ಯಾಟ್ರಿಜ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 55-62 ಸ್ಥಾನ ಪಡೆಯಲಿದ್ದ, ಈ ಮೂಲಕ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ.

Haryana Assembly 2024 Republic Matrize Exit Poll Prediction

ರಿಪಬ್ಲಿಕ್‌ ಮಾರ್ಟಿಜ್‌ ಸಮೀಕ್ಷೆ

* ಕಾಂಗ್ರೆಸ್‌ 55-62
* ಬಿಜೆಪಿ 18-24
* ಜೆಜೆಪಿ+ 0-3
* ಐಎನ್ಎಲ್‌ಡಿ 3-6
* ಇತರೆ 2-5

ರಿಪಬ್ಲಿಕ್‌ ಟಿವಿ-ಪಿ-ಮಾರ್ಕ್ಯೂ ಸಮೀಕ್ಷೆ

* ಕಾಂಗ್ರೆಸ್‌ 51-61
* ಬಿಜೆಪಿ 27-35
* ಜೆಜೆಪಿ+ 0-1
* ಐಎನ್‌ಎಲ್‌ಡಿ+ 1-5
* ಇತರೆ 4-9

ರಿಪಬ್ಲಿಕ್‌ ಟಿವಿ-ಪಿ-ಮಾರ್ಕ್ಯೂ ಸಮೀಕ್ಷೆ ಪ್ರಕಾರ, ಹರಿಯಾಣದಲ್ಲಿ ಕಾಂಗ್ರೆಸ್‌ 51-61 ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಲಿದೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಇಂದು ಮುಕ್ತಯಾವಾಗಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್‌ನ ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಜೆಜೆಪಿಯ ದುಷ್ಯಂತ್ ಚೌತಾಲಾ ಸೇರಿದಂತೆ 1,031 ಅಭ್ಯರ್ಥಿಗಳು ಕಣದಲ್ಲಿದ್ದರು.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 2.03 ಕೋಟಿ ಅರ್ಹ ಮತದಾರರಿದ್ದು, 1,031 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ಯಾರ ಭವಿಷ್ಯ ಏನು ಎಂಬುದನ್ನು ಮತದಾರರು ನಿರ್ಧಾರ ಮಾಡಲಿದ್ದಾರೆ. ಒಟ್ಟು 2,03,54,350 ಮತದಾರರಿದ್ದಾದ್ದು, 1,031 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಈ ಪೈಕಿ 464 ಅಭ್ಯರ್ಥಿಗಳು ಪಕ್ಷೇತರು ಆಗಿದ್ದಾರೆ. ಇನ್ನು ರಾಜ್ಯದಲ್ಲಿ 20,632 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಬಿಜೆಪಿ, ಕಾಂಗ್ರೆಸ್, ಎಎಪಿ, ಐಎನ್ಎಲ್'ಡಿ-ಬಿಎಸ್'ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷ ಕಣದಲ್ಲಿರುವ ರಾಜಕೀಯ ಪಕ್ಷಗಳಾಗಿವೆ.

ಪೀಪಲ್ಸ್ ಪಲ್ಸ್ ಸಮೀಕ್ಷೆ

* ಬಿಜೆಪಿಗೆ 20-32
* ಕಾಂಗ್ರೆಸ್ 49-61
* ಇತರೆ 3-5

NDTV ಸಮೀಕ್ಷೆ

* ಬಿಜೆಪಿಗೆ-20-32
* ಕಾಂಗ್ರೆಸ್‌ 49-61

ದೈನಿಕ್ ಭಾಸ್ಕರ್ ಸಮೀಕ್ಷೆ

* ಕಾಂಗ್ರೆಸ್‌ಗೆ 44-54

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+