Haryana Election Peoples Pulse Exit Poll Results: ಹರಿಯಾಣದಲ್ಲಿ ಕಾಂಗ್ರೆಸ್ 'ಕೈ' ಹಿಡಿದ ಜನ, ಬಿಜೆಪಿ ಕಥೆ?
ನವದೆಹಲಿ, ಅಕ್ಟೋಬರ್ 05: ಹರಿಯಾಣ ರಾಜ್ಯದ ವಿಧಾನಸಭಾ ಚುನಾವಣೆಗೆ ಇಂದು ಅಕ್ಟೋಬರ್ 05ರಂದು ಒಂದೇ ಹಂತದಲ್ಲಿ ಮತದಾನ ನಡೆಸಯಿತು. ಇಂದು ಚುನಾವಣೋತ್ತರ ಸಮೀಕ್ಷೆಯ ಹೊರ ಬಿದ್ದಿದೆ. ಹರಿಯಾಣದಲ್ಲಿ 'ಪೀಪಲ್ ಪಲ್ಸ್' (Peoples Pulse Exit Poll) ಚುನಾವಣೋತ್ತರ ಸಮೀಕ್ಷೆ ನಡೆಸಿದೆ. ಒಟ್ಟು 90 ಕ್ಷೇತ್ರಗಳಲ್ಲಿ ರಾಜ್ಯದ ಅಧಿಕಾರ ಯಾರ ಕೈ ಸೇರಲಿದೆ. ಅತ್ಯಧಿಕ ಮತ ಪಡೆದ ಪಕ್ಷದ ಯಾವುದು ಎಂಬ ಮಾಹಿತಿ ಇಲ್ಲಿದೆ.
'ಪೀಪಲ್ ಪಲ್ಸ್' ಸಮೀಕ್ಷೆ ಪ್ರಕಾರ, ಹರಿಯಾಣದಲ್ಲಿ ಬಿಜೆಪಿ ನೆಲಕಚ್ಚುವ ಸಾಧ್ಯತೆ ಇದೆ. ಇಲ್ಲಿ ಕಾಂಗ್ರೆಸ್ 55 ರಿಂದ 62 ಸ್ಥಾನ, ಆಡಳಿತ ಪಕ್ಷ ಬಿಜೆಪಿ ಕೇವಲ 20 ರಿಂದ 32, ಜೆಜೆಪಿ 01 ಸ್ಥಾನಗ, ಐಎನ್‌ಎಲ್‌ಡಿ 2 ರಿಂದ 3 ಸೀಟು ಹಾಗೂ ಇತರರು 3 ರಿಂದ 5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಈ ಮೂಲಕ ಹ್ಯಾಟ್ರಿಕ್ ಭಾರಿಸುವ ಕನಸು ಕಂಡಿದ್ದ ಬಿಜೆಪಿಗೆ ಆಸೆ ನಿರಾಸೆಯಾಗಲಿದೆ ಎಂಬ ಅಂಶ ಈ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಹರಿಯಾಣದಲ್ಲಿ ಈ ಭಾರಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಅಬ್ಬರದ ಪ್ರಯಾಣ ನಡೆಸುವ ಮೂಲಕ ದಲಿತ ಮತ ಸೆಳೆಯಲು, ಮೂರನೇ ಭಾರಿಗೆ ಹರಿಯಾಣ ಅಧಿಕಾರ ಹಿಡಿದು ಹ್ಯಾಟ್ರಿಕ್ ಹೊಡೆಯಲು ಸಜ್ಜಾಗಿತ್ತು. ಆದರೆ ಈ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.
ರಾಜ್ಯ ಚುನಾವಣೆ ಆಯೋಗವು ಅಕ್ಟೋಬರ್ 8 ರಂದು ಹರಿಯಾಣ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣೋತ್ತರ ಎಕ್ಸಿಟ್ ಪೋಲ್ ಫಲಿತಾಂಶವನ್ನು ಕೆಲವೊಂದು ರಾಜಕೀಯ ಪಕ್ಷಗಳು ಒಪ್ಪದೇ ತಳ್ಳಿ ಹಾಕುವುದು ಮಾಮೂಲಿಯಾಗಿದೆ.
ಹರಿಯಾಣದ ಭಾಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ, ನಿರುದ್ಯೋಗ ಸಮಸ್ಯೆ ವಿರುದ್ಧ ಚರ್ಚೆಗಳು ನಡೆದಿದ್ದವು. ಕುಸ್ತಿಪಟುಗಳು ಕೇಂದ್ರದ ವಿರುದ್ಧ, ಸಂಸದ ಲೈಂಗಿಕ ದೌರ್ಜನ್ಯ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಇದೆಲ್ಲ ಅಂಶಗಳನ್ನು ಬಳಸಿಕೊಂಡು ಈ ಬಾರಿ ಬಿಜೆಪಿಗೆ ಅಧಿಕಾರ ತಪ್ಪಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.












Click it and Unblock the Notifications