Congress Guarantee: ಅಬ್ಬಾಬ್ಬ ಲಾಟರಿ: ಇಲ್ಲಿವೆ ನೋಡಿ ಕಾಂಗ್ರೆಸ್‌ನ ಗ್ಯಾರಂಟಿ 5 ಅಲ್ಲ 7
ನವದೆಹಲಿ, ಸೆಪ್ಟೆಂಬರ್ 18: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಭರ್ಜರಿಯಾಗಿ ಕಾಂಗ್ರೆಸ್ ಗೆಲುವು ಸಾಧಿಸಲು ಪಂಚ ಗ್ಯಾರಂಟಿ ಯೋಜನೆಗಳೆ ಪ್ರಮುಖ ಕಾರಣವಾಗಿತ್ತು. ಕರ್ನಾಟಕ, ತೆಲಂಗಾಣದ ಬಳಕ ಇದೀಗ ಹರಿಯಾಣದಲ್ಲೂ ಸಹ ಗ್ಯಾರಂಟಿಯನ್ನ ಕಾಂಗ್ರೆಸ್ ಘೋಷಣೆ ಮಾಡಿದೆಟ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಂತ ಹಂತವಾಗಿ ಐದು ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಯನ್ನ ಜಾರಿಗೊಳಿಸಿದೆ. ಈ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡ ವರ್ಗಕ್ಕೆ ಸಾಕಷ್ಟು ಸಹಾಯಕವಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆ ಕಾಂಗ್ರೆಸ್ ಕೈ ಹಿಡಿದಿದೆ. ತೆಲಂಗಾಣದಲ್ಲೂ ಈ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿದಿತ್ತು. ಇದೀಗ ಹರಿಯಾಣ ವಿಧಾನಸಭಾ ಚುಣಾವಣೆ ಹಿನ್ನೆಲೆ ಕಾಂಗ್ರೆಸ್ ಏಳು ಗ್ಯಾರಂಟಿಗಳನ್ನ ಬುಧವಾರ ಘೋಷಣೆ ಮಾಡಿದೆ.

ಹರಿಯಾಣ ವಿಧಾನಸಭಾ ಚುನಾವಣೆ ಅಕ್ಟೋಬರ್ 5 ರಂದು ನಡೆಯಲಿದ್ದು, ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಇಂದು(ಬುಧವಾರ) ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ. ಐಎಸಿಸಿ ಅಧ್ಯಕ್ಷದಾರ ಮಲ್ಲಿಕಾರ್ಜುನ್ ಖರ್ಗೆ ಅವರು ಬರೋಬ್ಬರಿ 14 ಭರವಸೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, 7 ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದಾರೆ.
ಕುಟುಂಬಗಳ ಸಮೃದ್ಧಿ
ಕಾಂಗ್ರೆಸ್ ಪಕ್ಷವು 300 ಯೂನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿಯೊಬ್ಬರಿಗೂ ₹25 ಲಕ್ಷದವರೆಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುತ್ತದೆ ಎಂದು ಗ್ಯಾರಂಟಿಯನ್ನ ಘೋಷಿಸಿದೆ.
ಮಹಿಳೆಯರ ಸಬಲೀಕರಣ
ಮಹಿಳೆಯರ ಸಬಲೀಕರಣಕ್ಕಾಗಿ ಮನೆಯ ಒಡತಿಯರಿಗೆ ತಲಾ ₹2 ಸಾವಿರ ಪಾವತಿ ಹಾಗೂ ₹500ಕ್ಕೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು.
ಯುವಕರಿಗೆ ಸುರಕ್ಷಿತ ಭವಿಷ್ಯ
ಯುವಕರ ಭವಿಷ್ಯಕ್ಕಾಗಿ 2 ಲಕ್ಷ ಖಾಲಿ ಹುದ್ದೆಗಳಿಗೆ ನೇಮಕಾತಿ ಹಾಗೂ ಡ್ರಗ್ ಮುಕ್ತ ಹರಿಯಾಣ ಉಪಕ್ರಮದ ಭರವಸೆ
ಸಾಮಾಜಿಕ ಭದ್ರತೆ
₹6,000 ವೃದ್ಧಾಪ್ಯ ವೇತನ, ₹6,000 ಅಂಗವಿಕಲ ಪಿಂಚಣಿ, ₹6,000 ವಿಧವಾ ವೇತನ ನೀಡುವುದು ಹಾಗೂ ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿ ಭರವಸೆ ನೀಡಲಾಗಿದೆ
ಬಡವರಿಗೆ ವಸತಿ
ಬಡವರಿಗೆ ₹3.5 ಲಕ್ಷ ವೆಚ್ಚದ ಮನೆಗಳ ನಿರ್ಮಾಣ
ಹಿಂದುಳಿದ ವರ್ಗಗಳ ಹಕ್ಕುಗಳು
ಜಾತಿ ಗಣತಿಯನ್ನು ನಡೆಸುವ ಭರವಸೆ. ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಮತ್ತು ಬೆಳೆ ಪರಿಹಾರದ ಕಾನೂನು ಖಾತರಿ ಭರವಸೆ
ರೈತರ ಸಮೃದ್ಧಿ
ಪಕ್ಷವು ಕನಿಷ್ಟ ಬೆಂಬಲ ಬೆಲೆ (MSP) ಮತ್ತು ತಕ್ಷಣದ ಬೆಳೆ ಪರಿಹಾರದ ಭರವಸೆಯನ್ನ ನೀಡಿದೆ
हरियाणा के लिए 7 वादे-पक्के इरादे
— Congress (@INCIndia) September 18, 2024
🔹महिलाओं को शक्ति
✅ हर महीने 2,000 रुपए
✅ 500 रुपए में गैस सिलेंडर
🔹 सामाजिक सुरक्षा को बल
✅ 6,000 रुपए बुढ़ापा पेंशन
✅ 6,000 रुपए दिव्यांग पेंशन
✅ 6,000 रुपए विधवा पेंशन
✅ पुरानी पेंशन बहाल होगी
🔹 युवाओं को सुरक्षित भविष्य
✅ 2… pic.twitter.com/WWWJIAqqFQ












Click it and Unblock the Notifications