ನಟಿಗೆ ಶಾಸಕರು ಕೊಟ್ಟದ್ದು ಏನು? ಚಿತ್ರನೋಡಿ

ಲಕ್ನೋ, ಮಾ.23: ಜನಪ್ರಿಯ ಗ್ಲಾಮರಸ್ ನಟಿ ಕಮ್ ಕಾಂಗ್ರೆಸ್ ನಾಯಕಿ ನಂದಿತಾ ಮೋರಾರ್ಜಿ ಅಲಿಯಾಸ್ ನಗ್ಮಾ ಅವರು ತಮ್ಮ ಪಕ್ಷದ ಸ್ಥಳೀಯ ಶಾಸಕರೊಬ್ಬರಿಂದಲೇ ಲೈಂಗಿಕ ದೌರ್ಜನ್ಯ ಎದುರಿಸಿದ ಪ್ರಸಂಗ ನಡೆದಿದೆ. ಸ್ಥಳೀಯ ಶಾಸಕ ಗಜರಾಜ್ ಶರ್ಮ ಅವರು ನಗ್ಮಾ ಅವರನ್ನು ಸಾರ್ವಜನಿಕವಾಗಿ ಚುಂಬಿಸಲು ಯತ್ನಿಸಿದ ಘಟನೆ ಜರುಗಿದೆ.

ಉತ್ತರಪ್ರದೇಶದ ಮೀರತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಗ್ಮಾ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಹಪುರ ಎಂಬಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾಗ ಈ ದುರ್ಘಟನೆ ನಡೆದಿದೆ. ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆಗೆ ಬಂದಿದ್ದ ನಗ್ಮಾ ಅವರು ಈ ಘಟನೆಯಿಂದ ವಿಚಲಿತರಾಗಿ, ಕೂಡಲೇ ಅಲ್ಲಿಂದ ಹೊರಟ್ಟಿದ್ದಾರೆ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಬೇಕಿದ್ದ ನಗ್ಮಾ ಅವರು ಗಜರಾಜ್ ಅವರ ಕೈಕೊಡವಿಕೊಂಡು ತೆರೆದ ಜೀಪು ಏರುವ ದೃಶ್ಯ ಕಂಡು ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಗ್ಮಾ ಅವರ ಮೇಲಿನ ದೌರ್ಜನ್ಯ ಪ್ರಕರಣದ ವಿಡಿಯೋ ಗಮನಿಸಿದರೆ ಶಾಸಕ ಗಜರಾಜ್ ಶರ್ಮ ನಗ್ಮಾ ಅವರಿಗೆ ಗುಟ್ಟು ಹೇಳುತ್ತಿರಬೇಕು ಅಥವಾ ಚುಂಬಿಸುತ್ತಿರಬೇಕು ಎಂದೆನಿಸುತ್ತದೆ. ಒಟ್ಟಾರೆ ಘಟನೆಯಿಂದ ನಗ್ಮಾ ಮನಸ್ಸಿಗೆ ಆಘಾತವಾಗಿರುವುದು ಮಾತ್ರ ಸ್ಪಷ್ಟವಾಗಿದೆ. ಈ ಘಟನೆಯನ್ನು ಮಹಿಳಾ ಸಂಘಟನೆಗಳು ಖಂಡಿಸಿದ್ದಲ್ಲದೆ ಗಜರಾಜ್ ಶರ್ಮ ಕ್ಷಮೆಯಾಚನೆಗೆ ಆಗ್ರಹಿಸಿವೆ. ನಗ್ಮಾ ಮೇಲಿನ ದೌರ್ಜನ್ಯದ ಚಿತ್ರ ಹಾಗೂ ವಿಡಿಯೋ ಮುಂದಿದೆ ನೋಡಿ..

ಸ್ಥಳೀಯ ಮಹಿಳಾ ಸಂಘಟನೆಗಳಿಂದ ಖಂಡನೆ

ಸ್ಥಳೀಯ ಮಹಿಳಾ ಸಂಘಟನೆಗಳಿಂದ ಖಂಡನೆ

ಹರಪುರದ ಸ್ಥಳೀಯ ಮುನ್ಸಿಪಾಲಿಟಿ ಚೇರ್ಮನ್ ಮಾಲತಿ ಭಾರ್ತಿ ಅವರು ಘಟನೆ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿ, ಮಹಿಳೆಗೆ ನೀಡಬೇಕಾದ ಕನಿಷ್ಠ ಗೌರವವನ್ನು ನೀಡದ ಇಂಥ ನಾಯಕರು ನಮ್ಮ ಊರಿಗೆ ಬೇಡ. ನಗ್ಮಾ ಅವರನ್ನು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದಿದ್ದಾರೆ.

ಕೆಲ ಮಾಧ್ಯಮಗಳಲ್ಲಿ ಗಜರಾಜ್ ಪರ ವರದಿ

ಕೆಲ ಮಾಧ್ಯಮಗಳಲ್ಲಿ ಗಜರಾಜ್ ಪರ ವರದಿ

ಮೀರತ್ ಕ್ಷೇತ್ರದ ಅಭ್ಯರ್ಥಿ ನಗ್ಮಾ ಅವರು ಶಾಸಕ ಗಜರಾಜ್ ಶರ್ಮ ಅವರ ಮಗಳ ವಯಸ್ಸಿನವರಾಗಿದ್ದಾರೆ. ಹೀಗಾಗಿ ವಾತ್ಸಲ್ಯದಿಂದ ಆಕೆಯನ್ನು ಚುಂಬಿಸಲು ಯತ್ನಿಸಿರಬಹುದು. ಅಥವಾ ಏನಾದರೂ ಗುಟ್ಟು ಹೇಳಲು ಯತ್ನಿಸಿರಬಹುದು ಇದಕ್ಕೆ ಸುಮ್ಮನೆ ಪ್ರಚಾರ ನೀಡುವುದು ಬೇಡ ಎಂದು ವರದಿಯಾಗಿದೆ.

ನಗ್ಮಾ ನಾಮಪತ್ರ ಸಲ್ಲಿಕೆಗೆ ಅಡ್ಡಿಯಾಗಿತ್ತು

ನಗ್ಮಾ ನಾಮಪತ್ರ ಸಲ್ಲಿಕೆಗೆ ಅಡ್ಡಿಯಾಗಿತ್ತು

ಕಳೆದ ಹತ್ತು ವರ್ಷಗಳಿಂದ ನಾನು ಕಾಂಗ್ರೆಸ್ ಪರ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಸೆಲೆಬ್ರಿಟಿ ಸ್ಟೇಟಸ್ ಮುಂದಿಟ್ಟುಕೊಂಡು ಚುನಾವಣೆ ಸ್ಪರ್ಧಿಸುತ್ತಿಲ್ಲ. ಕಳೆದ ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಅಡ್ಡಿ ಉಂಟಾಗಿದ್ದು ನಿಜ. ನಾಮಪತ್ರಕ್ಕೆ ಸಂಬಂಧಿಸಿದ ದಾಖಲೆ ಪತ್ರ ತರುತ್ತಿದ್ದ ನಮ್ಮ ಕಾರ್ಯಕರ್ತ ಸಲೀಂ ಭಟ್ಟಿ ಅವರನ್ನು ಪೊಲೀಸರು ತಡೆ ಹಿಡಿದಿದ್ದರು. ಆದರೆ, ಈಗ ಸಮಸ್ಯೆ ಬಗೆ ಹರಿದಿದೆ ಎಂದು ಹರಪುರಕ್ಕೆ ಬರುವ ಮುನ್ನ ನಗ್ಮಾ ಹೇಳಿದ್ದರು.

ವಿವಾದಿತ ಗಜರಾಜ್-ನಗ್ಮಾ ವಿಡಿಯೋ

ವಿವಾದಿತ ಗಜರಾಜ್-ನಗ್ಮಾ ವಿಡಿಯೋ ತುಣುಕು ಇಲ್ಲಿದೆ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+