ಗುರ್ಗಾಂವ್: ಪತ್ನಿ ಮೇಲಿನ ಮುನಿಸಿಗೆ ಆತ್ಮಹತ್ಯೆಯ ಫೆಸ್ಬುಕ್ ಲೈವ್!

ಪತ್ನಿಯ ಜೊತೆ ಜಗಳ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲಿನ ಬೇಸರಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರ್ಯಾಣದ ಗುರ್ಗಾಂವ್ ನಲ್ಲಿ ನಡೆದಿದೆ. ಅಷ್ಟೇ ಅಲ್ಲ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನೂ ಆತನ ಫೇಸ್ ಬುಕ್ ಲೈವ್ ಮಾಡಿದ್ದಾರೆ!

28 ವರ್ಷ ವಯಸ್ಸಿನ ಅಮಿತ್ ಎಂಬ ವ್ಯಕ್ತಿ ಪಟೌಡಿಯ ಹೈಲಿ ಮಂಡಿ ನಿವಾಸಿ. ಆತ ಸೋಮವಾರ(ಜು.30) ಬೆಳಿಗ್ಗೆತನ್ನ ಪತ್ನಿ ಪ್ರೀತಿಯ ಜೊತೆ ಜಗಳವಾಡಿದ್ದರು. ಈ ಘತನೆಯಿಂದ ಮನನೊಂದ ಆತನ ಪತ್ನಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಬೇಸರಗೊಂಡ ಅಮಿತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೆ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಫೆಸ್ ಬುಕ್ ಲೈವ್ ಮಾಡಿದ್ದಾರೆ.

ಆತ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದು ಫೇಸ್ ಬುಕ್ ಲೈವ್ ನಿಂದ ತಿಳಿಯುತ್ತಿದ್ದಂತೆಯೇ ಆತನ ಸ್ನೇಹಿತರೆಲ್ಲ ಆತನಿಗೆ ಫೋನಾಯಿಸಿ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ.

Gurgaon man live streams suicide on Facebook

ಇತ್ತೀಚೆಗಷ್ಟೆ ಉತ್ತರ ಪ್ರದೇಶದ ಆಗ್ರಾದಲ್ಲೂ ಇಂಥದೇ ಘಟನೆ ನಡೆದಿತ್ತು. ಮುನ್ನಾ ಕುಮಾರ್ ಎಂಬಾತ ಬಿಎಸ್ಸಿ ಪದವೀಧರ. ಸೇನೆ ಸೇರಬೇಕು ಎಂಬುದು ಆತನ ಕನಸಾಗಿತ್ತು. 24 ವರ್ಷದ ಈತ ಐದು ಬಾರಿ ಇದಕ್ಕೆ ಸಂಬಂಧಿಸಿದ ಪರೀಕ್ಷೆ ಬರೆದು ಫೇಲ್ ಆಗಿದ್ದ. ಇದರಿಂದ ಮನನೊಂದು ಖಿನ್ನತೆ ಜಾರಿದ್ದ.

ನಂತರ ಆತನಿಗಾಗಿ ಮನೆಯಲ್ಲಿ ಅಂಗಡಿಯೊಂದನ್ನು ತೆರೆದುಕೊಟ್ಟು ವ್ಯವಹಾರ ನೋಡಿಕೊಳ್ಳುವಂತೆ ಹೇಳಿದ್ದರು. ಆದರೆ ಆತ ಖಿನ್ನತೆಯಿಂದ ಹೊರಬರಲಾರದೆ ಆತ್ಮಹತ್ಯೆ ಮಾಡಿಕೊಂಡ. ಆರು ಪುಟದ ಡೆತ್ ನೋಟನ್ನು ಬರೆದಿರುವ ಈತ, ತಾನು ಸಾಯುವ ಕೊನೆಯ ಕ್ಷಣಗಳನ್ನು ಎಫ್ ಬಿ ಲೈವ್ ಮಾಡಿದ್ದ. 2750 ಜನ ಇದನ್ನು ವೀಕ್ಷಿಸಿದ್ದರೂ ಯಾರೊಬ್ಬರೂ ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+