Gujarat: ಶಾಲಾ ಮಕ್ಕಳಿಗೆ ಸ್ಪೂರ್ತಿ ಕೇಂದ್ರವಾದ ಮೋದಿ ಓದಿದ ಶಾಲೆ

ದೆಹಲಿ ಜೂನ್ 7: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದ ಗುಜರಾತ್‌ನ ವಡ್‌ನಗರದಲ್ಲಿರುವ ಹೆರಿಟೇಜ್ ಶಾಲೆಯನ್ನು ನವೀಕರಿಸಲಾಗಿದೆ. ಶಾಲೆಯನ್ನು ಸ್ಪೂರ್ತಿ ತಾಣವಾಗಿ ಪ್ರೇರಣಾ ಯೋಜನೆಯ ಅಡಿಯಲ್ಲಿ ಮರುಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಸುಮಾರು 28,000 ಜನಸಂಖ್ಯೆಯನ್ನು ಹೊಂದಿರುವ ಐತಿಹಾಸಿಕ ಪಟ್ಟಣವಾದ ವಡ್‌ನಗರ ಅಹಮದಾಬಾದ್‌ನಿಂದ 100 ಕಿಮೀ ದೂರದಲ್ಲಿದೆ. ಇಲ್ಲಿ ಮೋದಿ ಅವರು ಓದಿದೆ ಶಾಲೆ ಇದೆ. ಈ ಶಾಲೆ ಮಕ್ಕಳಿಗೆ ಸ್ಪೂರ್ತಿ ಕೇಂದ್ರವಾಗಿ ಕೆಲಸ ಮಾಡಬೇಕೆನ್ನುವ ಉದ್ದೇಶದಿಂದ ಪ್ರೇರಣಾ ಯೋಜನೆಯಡಿ ಶಾಲೆಯನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿಸಲಾದ ಈ ಶಾಲೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹಳೆಯ ವಾಸ್ತುಶಿಲ್ಪ ಶೈಲಿಯಲ್ಲಿ ನವೀಕರಿಸುತ್ತಿದೆ.

Heritage school in Vadnagar

ದೇಶದ ಒಟ್ಟು 740 ಜಿಲ್ಲೆಗಳ ಶಾಲೆಗಳಲ್ಲಿನ ತಲಾ ಇಬ್ಬರು ಮಕ್ಕಳು ಮೋದಿ ಅವರು ಕಲಿತ ಈ ಶಾಲೆಯಲ್ಲಿ ಒಂದು ವಾರ ಕಳೆಯುವ ಯೋಜನೆಯು ಈ ವರ್ಷಾಂತ್ಯದಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹಳೆಯ ಕಟ್ಟಡವನ್ನು ವಾಸ್ತುಶೈಲಿಯ ಸ್ಥಳೀಯ ಅಂಶಗಳನ್ನು ಮತ್ತು ಮೂಲ ಕಟ್ಟಡದ ದೃಶ್ಯೀಕರಣವನ್ನು ಬಳಸಿಕೊಂಡು ನವೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಲಾ ಮಕ್ಕಳು ಮೋದಿ ಅವರು ಓದಿದ ಶಾಲೆಯನ್ನು ನೋಡಬಹುದು. ಶಾಲೆಯಿಂದ ಸ್ಫೂರ್ತಿ ಪಡೆಯಬಹುದು. ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ಪ್ರಾರಂಭವಾಗಿದೆ. ಸಂಸ್ಕೃತಿ ಸಚಿವಾಲಯ ದೇಶದಾದ್ಯಂತ ವಿದ್ಯಾರ್ಥಿಗಳ 30 ಬ್ಯಾಚ್‌ಗಳನ್ನು ತೆಗೆದುಕೊಳ್ಳುತ್ತದೆ. ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳ ಮೇಲೆ ಆಯ್ಕೆ ಮಾಡಲಾಗುತ್ತದೆ.

ಈ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಬೌದ್ಧಿಕವಾಗಿರುವುದಿಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಗೆ ಬರುವಾಗ ಸ್ಥಳೀಯ ಪಾಕವಿಧಾನಗಳನ್ನು ತರಲು ಮಕ್ಕಳಿಗೆ ತಿಳಿಸಲಾಗುವುದು ಮತ್ತು ಇವುಗಳಿಂದ ಪಾಕವಿಧಾನಗಳ ಪುಸ್ತಕವನ್ನು ತಯಾರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Heritage school in Vadnagar

ಮೋದಿ ಅವರು ಓದಿದ ನವೀಕರಣಗೊಂಡ ಶಾಲೆಯಲ್ಲಿ ಮಣಿಗಳು, ಪ್ರತಿಮೆಗಳು, ನಾಣ್ಯಗಳು ಸೇರಿದಂತೆ 40,000 ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ. ತಲ್ಲೀನಗೊಳಿಸುವ ತಂತ್ರಜ್ಞಾನಗಳಾದ AR/VR, 3D ಪ್ರದರ್ಶನಗಳು, ಪ್ರತಿಕೃತಿಗಳು ಮತ್ತು ಅನ್ವೇಷಣೆ ಕೊಠಡಿಗಳು, ಕಿಯೋಸ್ಕ್‌ಗಳು, ಆಡಿಯೊ ಗೈಡ್‌ಗಳು, ಕಾರ್ಯಾಗಾರಗಳು ಇತ್ಯಾದಿ ಚಟುವಟಿಕೆಗಳು ವಸ್ತುಸಂಗ್ರಹಾಲಯದಲ್ಲಿ ಲಭ್ಯವಿರುತ್ತದೆ.

ಬೌದ್ಧ ಧರ್ಮೀಯರಿಗೆ ಇದು ಪ್ರಮುಖ ಕಲಿಕೆಯ ಸ್ಥಳವಾಗಿದೆ ಎಂದು ಸೈಟ್‌ನಲ್ಲಿನ ಸಂಶೋಧನೆಗಳು ತೋರಿಸುತ್ತವೆ ಎಂದು ಸಚಿವಾಲಯ ಹೇಳಿದೆ. ಮೂರು ಐಐಟಿಗಳು ಸೇರಿದಂತೆ ಎಂಟು ಸಂಸ್ಥೆಗಳು ಸೈಟ್‌ನಲ್ಲಿನ ಸಂಶೋಧನೆಗಳನ್ನು ಹೇಗೆ ಅಧ್ಯಯನ ಮಾಡುತ್ತಿವೆ ಎಂದು ಡಿಹೆಚ್ ಈ ಹಿಂದೆ ವರದಿ ಮಾಡಿತ್ತು.

2018ರಲ್ಲಿ ನವೀಕರಣ ಕಾರ್ಯ ಪ್ರಾರಂಭವಾಯಿತು

ಶಾಲೆಯ ಕಟ್ಟಡದ ನವೀಕರಣ ಕಾರ್ಯ 2018 ರಲ್ಲಿ ಪ್ರಾರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಇದು ನೀಡುತ್ತದೆ. ಭವಿಷ್ಯದಲ್ಲಿ ಅವರನ್ನು ಪ್ರೇರೇಪಿಸುತ್ತದೆ. ಅದಕ್ಕಾಗಿ ಇಲ್ಲಿ ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಬಳಸಲಾಗುತ್ತದೆ. ವಡ್ನಗರದಿಂದ ಪ್ರಾರಂಭಿಸಿ ಎಲ್ಲಾ ಜಿಲ್ಲೆಗಳಲ್ಲಿ ಭಾರತೀಯರನ್ನು ಪ್ರೇರೇಪಿಸುವುದು ಈ ಉಪಕ್ರಮದ ಪ್ರಾಥಮಿಕ ಉದ್ದೇಶವಾಗಿದೆ.

ಏಳು ಅವಧಿಗಳ ಪುರಾವೆಗಳು ಇಲ್ಲಿ ಇರಲಿವೆ. ಪ್ರೀ-ರಾಂಪಾರ್ಟ್ (2ನೇ BCE ಪೂರ್ವ), ರಾಂಪಾರ್ಟ್ (2ನೇ BCE ನಿಂದ 1ನೇ CE), ಕ್ಷತ್ರಪ (1ನೇಯಿಂದ 4ನೇ CE), ನಂತರದ ಕ್ಷತ್ರಪ (5ನೇಯಿಂದ 10ನೇ CE), ಸೋಲಂಕಿ (11ನೇಯಿಂದ 13ನೇ CE), ಸುಲ್ತಾನೇಟ್-ಮೊಘಲ್ (14 ರಿಂದ 18 ನೇ CE) ಮತ್ತು ಗಾಯಕ್ವಾಡ್ ಅವಧಿಗಳು (18 ರಿಂದ 19 ನೇ ಶತಮಾನದ AD ವರೆಗೆ) ಜೊತೆಗೆ ಭೂಕಂಪದ ಕುರುಹುಗಳು ಸಹ ಇಲ್ಲಿ ಕಾಣಬಹುದು. 19ನೇ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿಸಲಾದ ಶಾಲೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹಳೆಯ ವಾಸ್ತುಶಿಲ್ಪ ಶೈಲಿಯಲ್ಲಿ ಪುನರ್ ಸ್ಥಾಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+