Get Updates
Get notified of breaking news, exclusive insights, and must-see stories!

ಗುಜರಾತ್ : ಚುನಾವಣಾ ಪೂರ್ವ ಸಮೀಕ್ಷೆ, ಫಲಿತಾಂಶ

ಬೆಂಗಳೂರು, ಡಿಸೆಂಬರ್ 18 : ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 6ನೇ ಬಾರಿ ಸರಳ ಬಹುಮತ ಪಡೆದು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಕಾಂಗ್ರೆಸ್‌ ಸೋತರೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 9 ಮತ್ತು 14ರಂದು ಚುನಾವಣೆ ನಡೆದಿತ್ತು. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 92. ಬಿಜೆಪಿ 99 ಸ್ಥಾನಗಳಲ್ಲಿ ಜಯಗಳಿಸಿದೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಪಕ್ಷ 105ರಿಂದ 106 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದ್ದವು. ಸಮೀಕ್ಷೆ ಪ್ರಕಾರ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಪಕ್ಷ 100ರ ಗಡಿ ದಾಟಿಲ್ಲ.

ಕಾಂಗ್ರೆಸ್ ಪಕ್ಷ 73 ರಿಂದ 74 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿತ್ತು. ಆದರೆ, ಕಾಂಗ್ರೆಸ್ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತರ ಪಕ್ಷದ ಅಭ್ಯರ್ಥಿಗಳು 4 ರಿಂದ 5 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಲಾಗಿತ್ತು....

ಬಿಜೆಪಿಗೆ ಗೆಲುವು ಖಚಿತವಾಗಿತ್ತು

ಬಿಜೆಪಿಗೆ ಗೆಲುವು ಖಚಿತವಾಗಿತ್ತು

ಚುನಾವಣಾ ಪೂರ್ವ ಸಮೀಕ್ಷೆಯಲ್ಲಿಯಲ್ಲಿಯೇ ಬಿಜೆಪಿಗೆ ಗೆಲುವು ಖಚಿತವಾಗಿತ್ತು. ಟೈಮ್ಸ್‌ ನೌ 111, ಇಂಡಿಯಾ ಟಿವಿ 106-116, ರಿಪಬ್ಲಿಕ್ ಟಿವಿ 110-125, ಟಿವಿ9 109, ಸಹರಾ ಸಿಎನ್‌ಎಕ್ಸ್‌ 128 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಹೇಳಿತ್ತು. ಇವುಗಳ ಸರಾಸರಿ 105 ರಿಂದ 106 ಸ್ಥಾನಗಳಾಗಿತ್ತು.

ಕಾಂಗ್ರೆಸ್‌ ಎಷ್ಟು ಸ್ಥಾನಗಳಿಸಲಿದೆ?

ಕಾಂಗ್ರೆಸ್‌ ಎಷ್ಟು ಸ್ಥಾನಗಳಿಸಲಿದೆ?

ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 73 ರಿಂದ 74 ಸ್ಥಾನಗಳನ್ನು ಗಳಿಸಲಿದೆ ಎಂದು ವರದಿಗಳು ಬಂದಿದ್ದವು. ಇಂಡಿಯಾ ಟಿವಿ 63-73, ಟೈಮ್ಸ್‌ ನೌ 68, ಎಬಿಪಿ ಸಿಎಸ್‌ಡಿಎಸ್‌ 78-86, ನ್ಯೂಸ್ ನೇಷನ್ 37-47, ರಿಪಬ್ಲಿಕ್ ಟಿವಿ 53-68, ಟಿವಿ 9 73, ಸಹರಾ ಸಿಎನ್ಎಕ್ಸ್ 52 ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಬಹುದು ಎಂದು ಹೇಳಿತ್ತು.

4 ರಿಂದ 5 ಸ್ಥಾನಗಳಲ್ಲಿ ಗೆಲುವು

4 ರಿಂದ 5 ಸ್ಥಾನಗಳಲ್ಲಿ ಗೆಲುವು

ಗುಜರಾತ್ ಚುನಾವಣೆಯಲ್ಲಿ ಇತರ ಪಕ್ಷದ ಅಭ್ಯರ್ಥಿಗಳು 4 ರಿಂದ 5 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆ ಹೇಳಿತ್ತು. ಟೈಮ್ಸ್‌ ನೌ 3, ಎಬಿಪಿ ಸಿಎಸ್‌ಟಿಎಸ್‌ 3-7, ನ್ಯೂಸ್ ನೇಷನ್ 4, ಇಂಡಿಯಾ ಟಿವಿ -4 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಹೇಳಿದ್ದವು.

99 ಸ್ಥಾನಗಳಲ್ಲಿ ಗೆಲುವು

99 ಸ್ಥಾನಗಳಲ್ಲಿ ಗೆಲುವು

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗದೆ

ಬಿಜೆಪಿ - 99

ಕಾಂಗ್ರೆಸ್ - 80

ಇತರ ಪಕ್ಷದವರು - 3 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+