Gujarat Election Result 2022 : ಮುನ್ನಡೆ ಕಾಯ್ದುಕೊಂಡ ಸಿಎಂ ಭೂಪೇಂದ್ರ ಪಟೇಲ್
ಅಹಮದಾಬಾದ್‌ನ ಘಟ್ಲೋಡಿಯಾದಿಂದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಬೆಳಿಗ್ಗೆ 9.50ರ ವೇಳೆಗೆ 5000ಕ್ಕೂ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ವಿಜಯ್ ರೂಪಾನಿ ಬದಲಿಗೆ ಕಳೆದ ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಭೂಪೇಂದ್ರ ಪಟೇಲ್‌ಗೆ ಈ ಬಾರಿಯ ಚುನಾವಣೆ ಪತ್ರಿಷ್ಠೆಯಾಗಿದೆ. ಚುನಾವಣೆಗೆ ವರ್ಷಗಳ ಮುನ್ನ ಮುಖ್ಯಮಂತ್ರಿಯನ್ನು ಬದಲಾಯಿಸುವ ಕ್ರಮಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಭೂಪೇಂದ್ರ ಪಟೇಲ್‌ಗೆ ಈ ಚುನಾವಣೆ ಪರೀಕ್ಷೆಯಾಗಿದೆ.
Recommended Video
6 ಬಾರಿ ಸತತವಾಗಿ ಗೆಲ್ಲುವ ಸಾಧಿಸುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿರುವ ಬಿಜೆಪಿ 7ನೇ ಬಾರಿಗೆ ಕೂಡ ಭರ್ಜರಿ ಜಯ ಸಾಧಿಸಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತವರು ರಾಜ್ಯವಾಗಿರುವ ಕಾರಣ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ.

2017ರ ವಿಧಾನಸಭೆ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ 99 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಸತತ 27 ವರ್ಷಗಳಿಂದ ಬಿಜೆಪಿ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿದೆ. ಸಿಎಂ ಭೂಪೇಂದ್ರ ಪಟೇಲ್ ಸ್ಪರ್ಧೆ ಮಾಡಿರುವ ಘಟ್ಲೋಡಿಯಾ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಇವರ ವಿರುದ್ಧವಾಗಿ ಕಾಂಗ್ರೆಸ್‌ನಿಂದ ಅಮೀ ಯಾಗ್ನಿಕ್ ಸ್ಪರ್ಧಿಸಿದ್ದು, ಆಮ್ ಆದ್ಮಿ ಪಕ್ಷದಿಂದ ವಿಜಯ್ ಪಟೇಲ್ ಕಣಕ್ಕಿಳಿದಿದ್ದಾರೆ.

ಅಕ್ಟೋಬರ್ 31 ರಂದು ಮೊರ್ಬಿ ಜಿಲ್ಲೆಯಲ್ಲಿ 140 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಸೇತುವೆ ಕುಸಿತದ ಬಗ್ಗೆ ಬಿಜೆಪಿ ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಘಟನೆ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತೆ ಎನ್ನಲಾಗಿತ್ತು. ಆದರೆ, ಸದ್ಯದ ಬೆಳವಣಿಗೆಯ ಪ್ರಕಾರ ಬಿಜೆಪಿ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications