ಗುಜರಾತಿನಲ್ಲಿ 6ನೇ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ

Posted By:
Subscribe to Oneindia Kannada

ಗಾಂಧಿನಗರ, ಡಿಸೆಂಬರ್ 26: ಗುಜರಾತ್‌‌ನಲ್ಲಿ ಬಿಜೆಪಿ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ವಿಜಯ್‌‌ ರೂಪಾನಿ ಹಾಗೂ ಉಪ ಮುಖ್ಯಮಂತ್ರಿಯಾಗಿ ನಿತೀನ್‌ ಪಟೇಲ್‌ ಪದಗ್ರಹಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದಾರೆ.

ಸಂಘಟನಾ ಚತುರ, ಶುದ್ಧಹಸ್ತ, ಅಮಿತ್ ಆಪ್ತ ವಿಜಯ್ ರೂಪಾನಿ!

ಡಿಸೆಂಬರ್ 9 ಮತ್ತು 14ರಂದು ಎರಡು ಹಂತಗಳಲ್ಲಿ ಗುಜರಾತ್‌‌ ಚುನಾವಣೆ ನಡೆದಿತ್ತು.ಬಿಜೆಪಿ 99 ಪ್ಲಸ್ ಸ್ಥಾನ ಗಳಿಸಿ 92 ಮ್ಯಾಜಿಕ್ ನಂಬರ್ ದಾಟಿ, ಅಧಿಕಾರ ಸ್ಥಾಪಿಸಿದೆ. ಸತತ ಆರನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯಪಾಲ ಓ.ಪಿ ಕೊಹ್ಲಿ ಅವರು ವಿಜಯ್ ರೂಪಾನಿ ಹಾಗೂ ನಿತೀನ್ ಪಟೇಲ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

Vijay Rupani's swearing-in shortly, Modi arrives in Ahmedabad

ವಿಜಯ್ ರೂಪಾನಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಬಿಜೆಪಿ ಆಡಳಿತವಿರುವ 18 ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರು ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ.

ಹೊಸ ಮುಖಗಳಿಗೆ ಆದ್ಯತೆ: ವಿಜಯ್ ರೂಪಾನಿ ಅವರು ಮುಖ್ಯಮಂತ್ರಿ, ನಿತಿನ್ ಪಟೇಲ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 12ಕ್ಕೂ ಅಧಿಕ ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ. ಪಾಟೀದಾರ್, ಒಬಿಸಿ ಲೆಕ್ಕಾಚಾರಕ್ಕೆ ತಕ್ಕಂತೆ ಸಂಪುಟ ದರ್ಜೆ ಸಚಿವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi arrived in Ahmedabad on Tuesday morning to take part in the swearing-in ceremony of Vijay Rupani, who will take oath as the Gujarat Chief Minister.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ