ಗುಜರಾತ್ ಚುನಾವಣೆಯಲ್ಲಿ NOTA, ಬಿಜೆಪಿಗೆ ನೀಡುವುದೆ ಕಾಟ?

ನವದೆಹಲಿ, ಡಿಸೆಂಬರ್ 06: ಯಾರಿಗೆ ಜಿಎಸ್ ಟಿ ಬಗ್ಗೆ ಬೇಸರವಿದೆಯೋ, ಯಾವ ಪಕ್ಷದ ಮೇಲೆಯೂ ವಿಶ್ವಾಸವಿಲ್ಲವೋ ಅಂಥವರು, 2017 ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನೋಟಾ(None Of The Above) ಆಯ್ಕೆಯನ್ನು ಆರಿಸಿಕೊಳ್ಳಬಹುದು!

ಹೌದು, ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿಯೂ ನೋಟಾ ಬಳಕೆಗೆ ಚುನಾವಣಾ ಆಯೋಗ ಅವಕಾಶ ನೀಡಿದೆ. 2014 ರ ಲೋಕಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆಗೆ ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ 4.20 ಯಷ್ಟು ವೋಟುಗಳು ನೋಟಾ ಖಾತೆ ಸೇರಿದ್ದವು! ಅಂದರೆ ಯಾವ ಪಕ್ಷದ ಖಾತೆಗೂ ಸೇರಿರಲಿಲ್ಲ!

Gujarat assembly elections 2017: Will NOTA hurt the BJP?

ಈ ನೋಟಾ ಆಯ್ಕೆ ಬಿಜೆಪಿಗೆ ಶಾಪವಾಗಲಿದೆ ಎಂಬ ಮಾತು ಹಲವೆಡೆಯಿಂದ ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಮತಹಾಕಿದವರೂ ಈ ಬಾರಿ ಕೇಂದ್ರ ಬಿಜೆಪಿ ಸರ್ಕಾರದ ಜಿಎಸ್ ಟಿ ಮತ್ತು ನೋಟು ನಿಷೇಧದ ನಿರ್ಧಾರದಿಂದಾಗಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ. ಅವರೆಲ್ಲ ಈ ಬಾರಿ ನೋಟಾ ಆಯ್ಕೆಯನ್ನು ಆರಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನೋಟಾ ಮಾಡಿದ ಮ್ಯಾಜಿಕ್ ಏನು ಎಂಬುದು ಡಿ.18 ರ ಫಲಿತಾಂಶದ ದಿನದಂದು ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+