ಗುಜರಾತ್ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲೂ ಬಿಜೆಪಿಗೆ ಬಹುಮತ!
Recommended Video

ಬೆಂಗಳೂರು, ಡಿಸೆಂಬರ್ 14: ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಇಲ್ಲಿದೆ. ಗುಜರಾತಿನ ವಿಧಾನಸಭೆ ಎರಡು ಹಂತದ ಮತದಾನ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ವರದಿಗಳು ಹರಿದು ಬರುತ್ತಿವೆ.
ಡಿಸೆಂಬರ್ 18ರಂದು ಅಂತಿಮ ಫಲಿತಾಂಶ ಹೊರಬರಲಿದೆ. ಹತ್ತು ಹಲವು ಸಂಸ್ಥೆಗಳು ಎಕ್ಸಿಟ್ ಪೋಲ್ ವರದಿ ನೀಡುತ್ತಿದ್ದು, ಈ ಎಲ್ಲಾ ಸಮೀಕ್ಷೆಗಳ ಸಂಗ್ರಹ, ಸರಾಸರಿ ವರದಿ ಇಲ್ಲಿದೆ.
ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಸರಾಸರಿಯಂತೆ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ಸತತ ಐದನೇ ಬಾರಿಗೆ ಅಧಿಕಾರ ಸ್ಥಾಪಿಸಲಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳ ಸಂಗ್ರಹಗಳ ಸರಾಸರಿಯಂತೆ 182 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 105-106 ಸ್ಥಾನಗಳನ್ನು ಗಳಿಸಲಿದ್ದು, ಮ್ಯಾಜಿಕ್ ನಂಬರ್ 92 ದಾಟುವ ಮೂಲಕ ಅಧಿಕಾರ ಸ್ಥಾಪಿಸುವ ಅವಕಾಶ ಪಡೆಯಲಿದೆ. ಕಾಂಗ್ರೆಸ್ 73-74 ಸ್ಥಾನ ಗಳಿಸಿ ವಿರೋಧ ಪಕ್ಷವಾಗಿ ಉಳಿಯಲಿದೆ.
ಚುನಾವಣೋತ್ತರ ಸಮೀಕ್ಷೆ(exit poll)ಗಳ ಸಂಗ್ರಹಗಳ ಸರಾಸರಿಯಂತೆ 182 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 112 ಸ್ಥಾನಗಳನ್ನು ಗಳಿಸಲಿದ್ದು, ಮ್ಯಾಜಿಕ್ ನಂಬರ್ 92 ದಾಟುವ ಮೂಲಕ ಅಧಿಕಾರ ಸ್ಥಾಪಿಸುವ ಅವಕಾಶ ಪಡೆಯಲಿದೆ. ಕಾಂಗ್ರೆಸ್ 70 ಸ್ಥಾನ ಗಳಿಸಿ ವಿರೋಧ ಪಕ್ಷವಾಗಿ ಉಳಿಯಲಿದೆ.

ಬಿಜೆಪಿ 112/182 ಮ್ಯಾಜಿಕ್ ನಂಬರ್ 92
ಟೈಮ್ಸ್ ವಿಎಂಆರ್ ಎಕ್ಸಿಟ್ ಪೋಲ್ : 109
ರಿಪಬ್ಲಿಕ್ -ಸಿ ವೋಟರ್ : 108
ನ್ಯೂಸ್ ಎಕ್ಸ್ : 110-120
ನ್ಯೂಸ್ 18 ಸಿ ವೋಟರ್: 108
ಇಂಡಿಯಾ ಟಿವಿ : 99-113
ನ್ಯೂಸ್ ನೇಷನ್ : 124-128
ಜೀ ನ್ಯೂಸ್ ಆಕ್ಸಿಸ್ : 99-113
ಚಾಣಕ್ಯ: 135 (+/-11)

ಕಾಂಗ್ರೆಸ್ 70/182, 92 ಮ್ಯಾಜಿಕ್ ನಂಬರ್
ಟೈಮ್ಸ್ ವಿಎಂಆರ್ ಎಕ್ಸಿಟ್ ಪೋಲ್ : 70
ರಿಪಬ್ಲಿಕ್ -ಸಿ ವೋಟರ್ : 74
ನ್ಯೂಸ್ 18 ಸಿ ವೋಟರ್: 74
ಚಾಣಕ್ಯ:ಕಾಂಗ್ರೆಸ್(47 (+/-11)
ನ್ಯೂಸ್ ಎಕ್ಸ್ : 65-75
ನ್ಯೂಸ್ ನೇಷನ್ : 52-56
ಇಂಡಿಯಾ ಟುಡೇ: 68-82
ಜೀ ನ್ಯೂಸ್ :68-82

ಇತರೆ 0/182
ಟೈಮ್ಸ್ ವಿಎಂಆರ್ ಎಕ್ಸಿಟ್ ಪೋಲ್ : 2
ರಿಪಬ್ಲಿಕ್ -ಸಿ ವೋಟರ್ : 0
ನ್ಯೂಸ್ 18 ಸಿ ವೋಟರ್: 0
ನ್ಯೂಸ್ ಎಕ್ಸ್ : 2-4
ನ್ಯೂಸ್ ನೇಷನ್ : 1-3
ಇಂಡಿಯಾ ಟುಡೇ: 1-4
ಜೀ ನ್ಯೂಸ್ : 1

2012ರಲ್ಲಿ ಬಿಜೆಪಿ 116
2012ರಲ್ಲಿ ಬಿಜೆಪಿ 116 ಹಾಗೂ ಕಾಂಗ್ರೆಸ್ 60 ಸ್ಥಾನ ಗಳಿಸಿತ್ತು. ಕಳೆದ 22 ವರ್ಷಗಳಿಂದ ಕೇಸರಿ ಪಕ್ಷ ಅಧಿಕಾರ ಕಳೆದುಕೊಂಡಿಲ್ಲ.ಡಿಸೆಂಬರ್ 9ರಂದು 89 ಸ್ಥಾನಗಳಿಗಾಗಿ ಮೊದಲ ಹಂತದ ಮತದಾನ,ಡಿಸೆಂಬರ್ 14ರಂದು 93 ಸ್ಥಾನಗಳಿಗಾಗಿ ಎರಡನೇ ಹಂತದ ಮತದಾನ ನಿಗದಿಯಾಗಿದೆ. ಡಿಸೆಂಬರ್ 18ರಂದು ಹಿಮಾಚಲ ಪ್ರದೇಶ ಹಾಗೂ ಗುಜರಾತಿನ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications