Breaking: ಗುಜರಾತ್‌ನಲ್ಲಿ 12 ಬಂಡಾಯ ನಾಯಕರನ್ನು ಅಮಾನತುಗೊಳಿಸಿದ ಬಿಜೆಪಿ
ಗಾಂಧಿನಗರ, ನವೆಂಬರ್ 23: ಗುಜರಾತ್‌ನಲ್ಲಿ ಬಂಡಾಯ ಬಾವುಟ ಹಾರಿಸಿದ ಅಭ್ಯರ್ಥಿಗಳ ವಿರುದ್ಧ ಭಾರತೀಯ ಜನತಾ ಪಕ್ಷವು ಮುರಿದುಕೊಂಡು ಬಿದ್ದಿದೆ. ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಅಖಾಡಕ್ಕೆ ಇಳಿದ ಅಭ್ಯರ್ಥಿಗಳನ್ನು ಪಕ್ಷದಿಂದಲೇ ವಜಾಗೊಳಿಸಿದೆ.
ಗುಜರಾತ್‌ನಲ್ಲಿ ಬುಧವಾರ ಬಂಡಾಯ ಬಾವುಟ ಹಾರಿಸಿದ 12 ಬಂಡಾಯ ನಾಯಕರನ್ನು ಬಿಜೆಪಿಯು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತುಗೊಳಿಸಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರದಲ್ಲಿ ಬಿಜೆಪಿಯು ಅಮಾನತುಗೊಳಿಸಿದ ಬಂಡಾಯ ನಾಯಕರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ರಾಜ್ಯ ಘಟಕದ ಮುಖ್ಯಸ್ಥ ಸಿಆರ್ ಪಾಟೀಲ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪಾದ್ರಾ ಮಾಜಿ ಶಾಸಕ ದಿನು ಪಟೇಲ್, ಬಯಾದ್ ಮಾಜಿ ಶಾಸಕ ಧವಲಸಿಂಹ ಝಾಲಾ ಕೂಡ ಇದ್ದಾರೆ. ಇದರ ಜೊತೆಗೆ ಸಾವ್ಲಿಯ ಕುಲದೀಪ್‌ಸಿನ್ಹ್ ರೌಲ್, ಶೆಹ್ರಾದ ಖತುಭಾಯಿ ಪಾಗಿ, ಲುನವಾಡದ ಎಸ್‌ಎಂ ಖಂತ್, ಲುನವಾಡದ ಜೆಪಿ ಪಟೇಲ್, ಉಮ್ರೆತಾದ ರಮೇಶ್ ಝಲಾ, ಖಂಭತ್ ಅಮರ್ಷಿ ಝಲಾ, ಖೇರಾಲು ರಾಮ್‌ಸಿನ್ಹ್ ಠಾಕೋರ್, ಧನೇರಾದ ಮಾವ್ಜಿ ದೇಸಾಯಿ ಮತ್ತು ದೀಸಾದ ಲೆಬ್ಜಿ ಠಾಕೋರ್ ಸೇರಿದ್ದಾರೆ.

ಗುಜರಾತ್‌ನಲ್ಲಿ ಮತದಾನ: ಗುಜರಾತ್‌ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications