ಸ್ಯಾನಿಟರಿ ನ್ಯಾಪ್‌ಕಿನ್ ಇನ್ನು ತೆರಿಗೆಮುಕ್ತ

ನವದೆಹಲಿ, ಜುಲೈ 21: ದೇಶದಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ ಸ್ಯಾನಿಟರಿ ನ್ಯಾಪ್‌ಕಿನ್ ಮೇಲಿನ ತೆರಿಗೆಯನ್ನು ಕೈಬಿಡಲಾಗಿದೆ.

ಸರಕು ಮತ್ತು ಸೇವಾ ತೆರಿಗೆ ಸಮಿತಿಯ 28ನೇ ಸಭೆಯಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್‌ಕಿನ್ ಅನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

ಶೇ 28ರ ತೆರಿಗೆ ವಿಭಾಗದಲ್ಲಿರುವ ಅನೇಕ ವಸ್ತುಗಳ ಮೇಲಿನ ತೆರಿಗೆ ಪ್ರಮಾಣದಲ್ಲಿ ಸಹ ಇಳಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಶೇ 12ರ ತೆರಿಗೆ ವಿಧಿಸಲಾಗುತ್ತಿತ್ತು. ಮಹಿಳೆಯರಿಗೆ ಅತಿ ಅಗತ್ಯವಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಒದಗಿಸಬೇಕು. ಆದರೆ ಅದರ ಮೇಲೆ ತೆರಿಗೆ ವಿಧಿಸಲಾಗಿದೆ ಎಂದು ಆಕ್ಷೇಪಿಸಿ ದೇಶದಾದ್ಯಂತ ವಿವಿಧ ಬಗೆಯ ಹೋರಾಟಗಳು ನಡೆದಿದ್ದವು.

gst council 28 meeting sanitary napkin exempted from gst

1 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಪಾದರಕ್ಷೆಗಳಿಗೆ ಶೇ 5ರ ಜಿಎಸ್‌ಟಿ ಬೀಳಲಿದೆ. ವಾಷಿಂಗ್ ಮೆಷಿನ್‌ಗಳು, ರೆಫ್ರಿಜಿರೇಟರುಗಳು ಸೇರಿದಂತೆ 17 ಐಷಾರಾಮಿ ಬಳಕೆಯ ಉಪಕರಣಗಳ ಜಿಎಸ್‌ಟಿ ಮೊತ್ತ ಶೇ 18ಕ್ಕೆ ಇಳಿಕೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

ಪೆಟ್ರೋಲ್‌ಗೆ ಬಳಸುವ ಎಥನಾಲ್ ಮೇಲಿನ ತೆರಿಗೆಯು ಶೇ 18 ರಿಂದ 5ಕ್ಕೆ ಇಳಿಕೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+