Gold Good News: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌: ಒನ್ ನೇಷನ್ ಒನ್ ಗೋಲ್ಡ್‌ ಪ್ರೈಸ್‌ ಮಹತ್ವದ ಅಪ್ಡೇಟ್ಸ್‌ ಇಲ್ಲಿದೆ

Gold Good News: ಚಿನ್ನ ಪ್ರಿಯರು ಖುಷಿಪಡುವ ಬೆಳವಣಿಗೆಯೊಂದು ದೇಶದಲ್ಲಿ ನಡೆಯುತ್ತಿದೆ. ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದರ ನಡುವೆ ಚಿನ್ನ ಪ್ರಿಯರು ಖುಷಿ ಪಡುವ ಸುದ್ದಿಯೊಂದು ಇಲ್ಲಿದೆ. ದೇಶದಲ್ಲಿ ಒನ್ ನೇಷನ್ ಒನ್ ರೇಷನ್ ಕಾರ್ಡ್‌, ಒನ್ ನೇಷನ್ ಒನ್ ಎಲೆಕ್ಷನ್ ಎನ್ನುವುದನ್ನು ಕೇಳಿರುತ್ತೀರಿ. ಇದೀಗ ಒನ್ ನೇಷನ್ ಒನ್ ಗೋಲ್ಡ್‌ ರೇಟ್‌ ಸಮಯ. ಹೌದು ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನದ ಬೆಲೆಯು ಒಂದೊಂದು ರೀತಿಯಲ್ಲಿ ಇದೆ. ಇದೀಗ ಈ ಗೊಂದಲಗಳಿಗೆ ತೆರೆ ಎಳೆದು ಒನ್ ನೇಷನ್‌ ಒನ್‌ ಗೋಲ್ಡ್‌ ರೇಟ್‌ ತರುವಲ್ಲಿ ಸಿದ್ಧತೆ ಜೋರಾಗಿದೆ. ಇದೇನಾದರೂ ಜಾರಿಗೆ ಬಂದರೆ ಚಿನ್ನ ಪ್ರಿಯರಿಗೆ ಹಾಗೂ ಚಿನ್ನ ಖರೀದಿದಾರರಿಗೆ ಬಂಪರ್ ಅಂತಲೇ ಹೇಳಲಾಗ್ತಿದೆ. ಚಿನ್ನದ ಬೆಲೆ ಕುಸಿತ ಕಾಣುವ ಸಾಧ್ಯತೆ ತುಂಬಾನೇ ಇದೆ.

ಚಿನ್ನದ ಬೆಲೆ ಕಳೆದ ಐದಾರು ವರ್ಷದಲ್ಲೇ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಕಳೆದ ಎರಡು ಮೂರು ವರ್ಷದಲ್ಲೇ 10ರಿಂದ 20 ಸಾವಿರ ರೂಪಾಯಿಯ ವರೆಗೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗಿದ್ದು, ಇದೀಗ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುತ್ತಲ್ಲೇ ಇದೆ. ಚಿನ್ನ ಪ್ರಿಯರು ಹಾಗೂ ಹೂಡಿಕೆಯಲ್ಲಿ ಜಾಣ್ಮೆ ಪ್ರದರ್ಶನ ಮಾಡುವವರು ಚಿನ್ನದ ಮೇಲೆ ಮೊದಲು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಚಿನ್ನದ ಬೆಲೆಯು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿದೆ. ಚಿನ್ನದ ಬೆಲೆ ಕರ್ನಾಟಕದಲ್ಲಿ ಒಂದಿದ್ದರೆ, ಕೇರಳದಲ್ಲಿ ಒಂದು ಹಾಗೂ ತಮಿಳುನಾಡಿನಲ್ಲಿ ಬೇರೆ ಬೆಲೆನೇ ಇದೆ. ಅಲ್ಲದೆ ಕರ್ನಾಟಕದಲ್ಲಿ 10 ಗ್ರಾಂ ಚಿನ್ನದ ಬೆಲೆ ನಿಗದಿಯಾದರೆ, ಕೇರಳದಲ್ಲಿ 8 ಗ್ರಾಂ ಲೆಕ್ಕ ಮಾಡಲಾಗುತ್ತದೆ.

Great Good News for Gold Lovers Important Updates on One Nation One Gold Price are Here

ದೇಶದಲ್ಲಿ ವಿವಿಧ ರಾಜ್ಯಗಳ ಚಿನ್ನದ ಗುಣಮಟ್ಟದ ಬಗ್ಗೆಯೂ ಕೆಲವು ತಕರಾರುಗಳು ಇವೆ. ಅದನ್ನು ಬಿಟ್ಟರೆ ಮೇಕಿಂಗ್ ಚಾರ್ಜ್‌, ವರ್ಕ್‌ ಚಾರ್ಜ್‌ ಅಂತೆಲ್ಲ ಇದೆ. ಉತ್ತರ ಭಾರತದ ರಾಜ್ಯಗಳಿಗಿಂತ ದಕ್ಷಿಣ ಭಾರತದ ಕರ್ನಾಟಕ ಹಾಗೂ ಉಳಿದ ರಾಜ್ಯದಲ್ಲಿ ಚಿನ್ನದ ಗುಣಮಟ್ಟ ಅದ್ಭುತವಾಗಿ ಇರುತ್ತದೆ ಎನ್ನುವ ಮಾತಿದೆ. ಇನ್ನು ಈಗಾಗಲೇ ಚಿನ್ನ 10 ಗ್ರಾಂಗೆ 80,000 ಸಾವಿರ ರೂಪಾಯಿ ಗಡಿಗೆ ಬಂದು ನಿಂತಿದೆ. ಈ ರೀತಿ ಇರುವಾಗಲೇ ಚಿನ್ನ ಪ್ರಿಯರಿಗೆ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಅದೇ ಒನ್‌ ನೇಷನ್ ಒನ್ ಗೋಲ್ಡ್‌ ರೇಟ್‌. ಈಗಾಗಲೇ ಈ ವಿಚಾರವಾಗಿ ಅಕ್ಟೋಬರ್‌ನಲ್ಲಿ ಒಂದು ಸುತ್ತಿನ ಸಭೆ ನಡೆದಿತ್ತು. ಇದೀಗ ಈ ಚರ್ಚೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ.

ನಮ್ಮ ದೇಶದ ಒಂದೊಂದು ರಾಜ್ಯದಲ್ಲೂ ಚಿನ್ನದ ಬೆಲೆ ಒಂದೊಂದು ರೀತಿ ಇದೆ. ಇದು ಗೊಂದಲ ಹಾಗೂ ಚಿನ್ನ ಖರೀದಿ ಮಾಡುವ ಗ್ರಾಹಕರ ಮನಿಸಿಗೂ ಕಾರಣ. ಚಿನ್ನ ಪ್ರಿಯರ ಸಂತೋಷನ್ನು ದುಪ್ಪಟ್ಟು ಮಾಡುವ ಹಾಗೂ ಬೆಲೆ ಇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಒಂದು ರಾಷ್ಟ್ರ, ಒಂದು ಬೆಲೆ ನೀತಿ ಜಾರಿಗೆ ತರಲು ಸಿದ್ಧತೆ ಎರಡನೇ ಹಂತ ತಲುಪಿದೆ.

Great Good News for Gold Lovers Important Updates on One Nation One Gold Price are Here

ಭಾರತದಲ್ಲಿ ಒಂದು ರಾಷ್ಟ್ರ ಹಾಗೂ ಒಂದು ಬೆಲೆ ನೀತಿ ಜಾರಿ (ONOR) ಮಾಡುವುದಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಆಭರಣ ಉದ್ಯಮಗಳು ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಇಂಡಿಯನ್ ಜ್ಯುವೆಲರ್ಸ್ & ಬುಲಿಯನ್ ಅಸೋಸಿಯೇಷನ್ ​​ಆಫ್ ಇಂಡಿಯಾ ಹಾಗೂ ಆಲ್ ಇಂಡಿಯಾ ಜೆಮ್ ಮತ್ತು ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ ಉದ್ಯಮದಿಂದ ಅಕ್ಟೋಬರ್‌ ತಿಂಗಳಿನಲ್ಲಿ ಮುಂದಿ ಸುತ್ತಿನ ಸಭೆ ನಡೆಸಲಾಗಿತ್ತು. ಇದೀಗ ಇದನ್ನು ಎರಡನೇ ಹಂತಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ.

ಚಿನ್ನದ ಬೆಲೆಯಲ್ಲಿ ಇರುವ ಗೊಂದಲ ಹಾಗೂ ದೇಶದಲ್ಲಿ ಏಕರೂಪ ಚಿನ್ನದ ಬೆಲೆ ನಿಗದಿ ಮಾಡುವುದಕ್ಕಾಗಿ ಅಖಿಲ ಭಾರತ ರತ್ನ ಮತ್ತು ಆಭರಣ ಡೊಮೆಸ್ಟಿಕ್ ಕೌನ್ಸಿಲ್ ಏಕರೂಪ ಚಿನ್ನದ ಬೆಲೆ ನೀತಿಗೆ ಒತ್ತು ನೀಡುತ್ತಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಒಂದೇ ಚಿನ್ನದ ಬೆಲೆ ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ದೇಶದ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಗಳು ಒಂದೆಡೆ ಸೇರಿ ಚರ್ಚೆ ನಡೆಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+