ಭಾರತದಲ್ಲಿ ಸಿಗುವುದಿಲ್ಲ ಫೈಜರ್ ಲಸಿಕೆ: ಕಾರಣವೇನು?

ನವದೆಹಲಿ, ಡಿಸೆಂಬರ್ 14: ಭಾರತದಲ್ಲಿ ತನ್ನ ಕೊರೊನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಅಮೆರಿಕದ ಫೈಜರ್-ಬಯೋಎನ್‌ಟೆಕ್ ಕಂಪೆನಿ ಮನವಿ ಸಲ್ಲಿಸಿದೆ. ಆದರೆ ಭಾರತ ಸರ್ಕಾರವು ಫೈಜರ್ ಲಸಿಕೆಯನ್ನು ಖರೀದಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೋವಿಡ್ ಸೋಂಕಿನ ವಿರುದ್ಧ ಶೇ 95ರಷ್ಟು ಎಂದು ಹೇಳಲಾಗಿರುವ ಫೈಜರ್ ಲಸಿಕೆಯು ದುಬಾರಿಯಾಗಿರುವ ಕಾರಣದಿಂದ ಭಾರತವು ಅದನ್ನು ತನ್ನ ಲಸಿಕೆ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲು ಮುಂದಾಗುತ್ತಿಲ್ಲ.

ಭಾರತದಲ್ಲಿ ಕೋವಿಡ್ 19ರ ನಿಯಂತ್ರಣಕ್ಕೆ ಲಭ್ಯವಿರುವ ಇತರೆ ಆಯ್ಕೆಗಳನ್ನು ಭಾರತ ನೋಡಲಿದ್ದು, ಫೈಜರ್ ಲಸಿಕೆಯ ಖರೀದಿಗೆ ಆದ್ಯತೆ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತಕ್ಕೆ ಬೇಕಾಗುವಷ್ಟು ಲಸಿಕೆ ಖರೀದಿ ಮತ್ತು ಅದರ ಸಾಗಣೆಗೆ ವಿಪರೀತ ವೆಚ್ಚವಾಗಲಿದೆ.

ಈ ನಡುವೆ ಅಮೆರಿಕದಲ್ಲಿ ಫ್ರೀಜರ್‌ನಲ್ಲಿ ಪ್ಯಾಕ್ ಮಾಡಲಾದ ಮೊದಲ ಹಂತದ ಫೈಜರ್ ಲಸಿಕೆಗಳು ವಿವಿಧ ವಿತರಣಾ ಸ್ಥಳಗಳಿಗೆ ರವಾನೆಯಾಗಿದೆ. ಸೋಮವಾರದಿಂದ ಆರೋಗ್ಯ ಕಾರ್ಯಕರ್ತರು ಮತ್ತು ನರ್ಸಿಂಗ್ ಹೋಮ್‌ಗಳ ಸಿಬ್ಬಂದಿಗೆ ಮೊದಲ ಹಂತದ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡುವ ನಿರೀಕ್ಷೆಯಿದೆ. ಮುಂದೆ ಓದಿ.

ಭಾರತಕ್ಕೆ ಬಲು ದುಬಾರಿ

ಭಾರತಕ್ಕೆ ಬಲು ದುಬಾರಿ

ಭಾರತದಲ್ಲಿ ಲಸಿಕೆ ಹಂಚಿಕೆ ಕಾರ್ಯಕ್ರಮದಲ್ಲಿ ಸದ್ಯದಲ್ಲಿ ನಡೆಯುವ ಲಕ್ಷಣಗಳಿಲ್ಲ. ಫೈಜರ್ ಲಸಿಕೆಯ ಬೆಲೆಯು 37 ಡಾಲರ್ ಅಂದರೆ ಸುಮಾರು 2,728 ರೂದಷ್ಟು ಇರುವುದು ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು. ಇದುವರೆಗಿನ ಎಲ್ಲ ಲಸಿಕೆಗಳಲ್ಲಿಯೂ ಅತ್ಯಂತ ದುಬಾರಿ ಎನಿಸಿರುವುದು ಫೈಜರ್ ಲಸಿಕೆ. ಇದಕ್ಕೆ ಹೋಲಿಸಿದರೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಆಸ್ಟ್ರಾಜೆನಿಕಾದ ಕೋವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ಕಡಿಮೆ ವೆಚ್ಚದ್ದಾಗಿವೆ.

-70 ಡಿಗ್ರಿಯಲ್ಲಿ ಸಂಗ್ರಹಿಸಬೇಕು

-70 ಡಿಗ್ರಿಯಲ್ಲಿ ಸಂಗ್ರಹಿಸಬೇಕು

ಇದಲ್ಲದೆ ಫೈಜರ್ ಮತ್ತು ಬಯೋಎನ್‌ಟೆಕ್‌ನ ಲಸಿಕೆಯ ಶೇಖರಣೆ ಮತ್ತೊಂದು ದೊಡ್ಡ ಸವಾಲಾಗಿದೆ. ಫೈಜರ್ ಲಸಿಕೆಯನ್ನು ಮೈನಸ್ 70 ಡಿಗ್ರಿ ಉಷ್ಣಾಂಶದಲ್ಲಿ ದಾಸ್ತಾನು ಮಾಡಿದರೆ ಮಾತ್ರ ಅದು ಉಳಿಯಲಿದೆ. ಭಾರತದಲ್ಲಿ ಇಷ್ಟು ಶೀಥಲೀಕರಿಸಿದ ವ್ಯವಸ್ಥೆ ಲಭ್ಯವಿಲ್ಲ. ಇದರೂ ಲಸಿಕೆಯನ್ನು ಪೂರೈಕೆ ಮಾಡುವುದು ಬಹಳ ಕಷ್ಟಕರ. ಇತರೆ ಕೊರೊನಾ ವೈರಸ್ ಲಸಿಕೆಗಳ ಸಂಗ್ರಹ ಮತ್ತು ರವಾನೆ ಇಷ್ಟು ಕಷ್ಟಕರವಾಗಿಲ್ಲ.

ಭಾರತಕ್ಕೆ ಬರುವಾಗ ಮತ್ತಷ್ಟು ದುಬಾರಿ

ಭಾರತಕ್ಕೆ ಬರುವಾಗ ಮತ್ತಷ್ಟು ದುಬಾರಿ

ಫೈಜರ್ ಲಸಿಕೆಯ ಒಂದು ಬಾಟಲಿಗೆ 3 ಡಾಲರ್ (220.95 ರೂ) ಎಂದುಕೊಂಡರೆ, ಭಾರತವು 680 ಮಿಲಿಯನ್ ಡೋಸ್‌ಗಳಷ್ಟು ಲಸಿಕೆ ಪಡೆದುಕೊಂಡರೆ ಅದಕ್ಕೆ 1.9 ಬಿಲಿಯನ್ ಡಾಲರ್ ವೆಚ್ಚವಾಗಬಹುದು. ಆದರೆ ಲಸಿಕೆಯ ವೆಚ್ಚ 13 ಡಾಲರ್‌ನಷ್ಟೇ ಇದ್ದರೂ ಭಾರತಕ್ಕೆ ಇದು 12 ಪಟ್ಟು ಹೆಚ್ಚಳವಾಗಲಿದೆ. ಫೈಜರ್ ತನ್ನ ಲಸಿಕೆಗಳನ್ನು ಸರ್ಕಾರಿ ಒಪ್ಪಂದಗಳ ಮೂಲಕ ಮಾತ್ರವೇ ಮಾರಾಟ ಮಾಡಲಿದೆ. ಸಂಗ್ರಹ, ಸಾಗಾಣಿಕೆ ವೆಚ್ಚ ಮುಂತಾದವುಗಳನ್ನು ಲೆಕ್ಕಹಾಕಿದಾಗ ಫೈಜರ್ ಮತ್ತಷ್ಟು ದುಬಾರಿಯಾಗಲಿದೆ.

ಅಮೆರಿಕದಲ್ಲಿ ಫೈಜರ್ ವಿತರಣೆ

ಅಮೆರಿಕದಲ್ಲಿ ಫೈಜರ್ ವಿತರಣೆ

ಅಮೆರಿಕದಲ್ಲಿ ಮೊದಲ ಬಾರಿಗೆ ಎಫ್‌ಡಿಎದಿಂದ ಅನುಮತಿ ಪಡೆದಿರುವ ಫೈಜರ್ ಲಸಿಕೆಯ ವಿತರಣೆಗೆ ಸಕಲ ಸಿದ್ಧತೆ ನಡೆದಿದೆ. ಆರಂಭಿಕ ಹಂತದಲ್ಲಿ ಸುಮಾರು ಮೂರು ಮಿಲಿಯನ್ ಡೋಸ್‌ಗಳಷ್ಟು ಲಸಿಕೆಯನ್ನು ವಿವಿಧ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಇದರ ಸಾಗಾಣಿಕೆಯನ್ನು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+