8th Pay Commission: ಸರ್ಕಾರಿ ನೌಕರರ ವೇತನ ಹೆಚ್ಚಳ ವೇಳೆ ಫಿಟ್‌ಮೆಂಟ್ ಅಂಶ ಎಷ್ಟಿರಲಿದೆ?
ಬೆಂಗಳೂರು, ಆಗಸ್ಟ್ 23: ದೇಶದಲ್ಲಿ ಏಳನೇ ವೇತನ ಆಯೋಗ (7th Pay Commission) ಜಾರಿಯಲ್ಲಿದೆ. ಅದರ ಅಡಿಯಲ್ಲಿಯೇ 2024ರ ಜುಲೈ ತಿಂಗಳ ತುಟ್ಟಿ ಭತ್ಯೆ (ಡಿಎ), ತುಟ್ಟಿ ಪರಿಹಾರ (ಡಿಆರ್) ಹೆಚ್ಚಳಕ್ಕೆ ಕ್ಷಣಗಣನ ಆರಂಭವಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದ ಅಡಿಯಲ್ಲಿ ಮುಂದಿನ ವೇತನ ಏರಿಕೆಗಾಗಿ ಕಾಯುತ್ತಿದ್ದಾರೆ.
ದೇಶದಲ್ಲಿ ಕೇಂದ್ರ ಸರ್ಕಾರಿ ನೌಕರರು, ಸಂಘಗಳು ಕಳೆದ ಒಂದು ವರ್ಷದಿಂದ 8ನೇ ವೇತನ ಆಯೋಗ ಶೀಘ್ರವೇ ಅನುಷ್ಠಾನಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಈ ಬಗ್ಗೆ ಯಾವ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೆ ಮೂಲಗಳ ಪ್ರಕಾರ ಹೊಸ ವೇತನ ಆಯೋಗ ಒಂದೂವರೆ ವರ್ಷದ ನಂತರ 2026ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಈ ಹೊಸ 8ನೇ ವೇತನ ಆಯೋಗ ಜಾರಿಯಾದರೆ ಅದರ ಅಡಿಯಲ್ಲಿ ನೌಕರರ ವೇತನವನ್ನು 'ಹೊಸ ಫಿಟ್‌ಮೆಂಟ್ ಫ್ಯಾಕ್ಟರ್' ಅಡಿಯಲ್ಲಿ ಹೆಚ್ಚಳ ಮಾಡಬಹುದು. ಏಕೆಂದರೆ 7ನೇ ವೇತನ ಆಯೋಗ ಜಾರಿಗೆ ಬಂದ ವೇಳೆ ಶಿಫಾರಸಿನ ಮೇಲೆಈ ಫಿಟ್‌ಮೆಂಟ್ ಅಂಶ 2.57ಕ್ಕೆ ನಿಗದಿ ಮಾಡಲಾಗಿತ್ತು. ಅದರಡಿಯಲ್ಲೇ ಇದೀಗ ವೇತನ ಹೆಚ್ಚಳವನ್ನು ಫಿಟ್‌ಮೆಂಟ್ ಆಧಾರದಲ್ಲಿಯೇ ಮರು ಅಳವಡಿಕೆ ಮಾಡುವ ಸಾಧ್ಯತೆ ಇದೆ.
2026 ಜನವರಿಗೆ ಹೊಸ ವೇತನ ಆಯೋಗ ಜಾರಿ?
2016ರಲ್ಲಿ ಏಳನೇ ವೇತನ ಆಯೋಗ ಜಾರಿಗೆ ಬಂದಿತ್ತು. ಇದೀಗ ಮುಂದಿನ 2026ರಂದು 8ನೇ ವೇತನ ಆಯೋಗವು ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಕೇಂದ್ರ ಸರ್ಕಾರ ಪ್ರತಿ 10 ವರ್ಷಕ್ಕೊಮ್ಮೆ ಹೊಸ ವೇತನ ಆಯೋಗ ಜಾರಿಗೆ ಮಾಡುತ್ತದೆ. ಇದರ ಆಧಾರದಲ್ಲಿ ಮತ್ತು ಶಿಫಾರಸುಗಳನ್ನು ಪರಿಗಣಿಸಿ ತುಟ್ಟಿಭತ್ಯೆ, ತುಟ್ಟಿ ಪರಿಹಾರಗಳನ್ನು ಹೆಚ್ಚಳ ಮಾಡುತ್ತದೆ.
ಈ ಹಿಂದೆ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವನ್ನು 3.68ಕ್ಕೆ ಫಿಟ್‌ಮೆಂಟ್ ಅಂಶ ಪರಿಗಣಿಸಿ ಮಾಡುವಂತೆ ನೌಕರರ ಸಂಘ ಒತ್ತಾಯಿಸಿ ಒಂದಷ್ಟು ಬೇಡಿಕೆಗಳನ್ನು ಸಚಿವಾಲಯಕ್ಕೆ ಸಲ್ಲಿಸಿತ್ತು. ಆದರೆ ಸರ್ಕಾರ ಫಿಟ್‌ಮೆಂಟ್ 2.57ಕ್ಕೆ ಏರಿಕೆ ಮಾಡಿದೆ.

ವೇತನ, ಪಂಚಣಿ ಹೆಚ್ಚಳದ ಲೆಕ್ಕಾಚಾರ
ವೇತನ, ಪಿಂಚಣಿ ವಿಷಯದಲ್ಲಿ ಕೈಗೊಂಡ ನಿರ್ಧಾರ ಗಮನಿಸಿದರೆ, ಆರನೇ ವೇತನ ಆಯೋಗದಡಿ ಕನಿಷ್ಠ ವೇತನ 7,000 ರೂ.ನಿಂದ 18000 ರೂ.ಗೆ ಹೆಚ್ಚಿಸಲಾಯಿತು. ಅದೇ ರೀತಿ ಕಡಿಮೆ ಪಿಂಚಣಿ ರೂ. 3500 ಅನ್ನು 9000 ರೂ.ಗೆ ಏರಿಕೆ ಮಾಡಲಾಯಿತು. ಇದರಿಂದ ವೇತನ 2,50,000 ರೂ. ಆದರೆ ಮತ್ತು ಪಿಂಚಣಿ ಮೊತ್ತ ರೂ. 1,25,000.ರಷ್ಟಾಯಿತು.
8ನೇ ವೇತನ ಆಯೋಗವು ಜಾರಿಯಾದರೆ, ಫಿಟ್‌ಮೆಂಟ್ ಅಂಶವು 1.92 ರಷ್ಟು ಇಟ್ಟು ಕೇಂದ್ರ ಸರ್ಕಾರಿ ನೌಕರರ ಮಾಸಿಕ ವೇತನವನ್ನು ಹೆಚ್ಚಳ ಮಾಡಬಹುದು. ಇದೇ ವೇಳೆ ಕನಿಷ್ಠ ವೇತನ 34,560 ರೂ.ಗೆ ಏರಿಕೆ ಆಗಲಿದೆ. ಅದೇ ರೀತಿ ನಿವೃತ್ತ ನೌಕರರಿಗೂ ಮೊದಲಿಗಿಂತ ಹೆಚ್ಚು ಪಿಂಚಣಿ ಸಿಗುವ ನಿರೀಕ್ಷೆ ಇದೆ.
ಸದ್ಯ ಕೇಂದ್ರ ಸರ್ಕಾರಿ ನೌಕರರು ಈ ವರ್ಷದ ಎರಡನೇ ತುಟ್ಟಿಭತ್ಯೆ ಹೆಚ್ಚಳ, ಅಂದರೆ ಜುಲೈ ತಿಂಗಳ ತುಟ್ಟಿಭತ್ಯೆ ಹಾಗೂ ತುಟ್ಟಿಭತ್ಯೆ ಪರಿಹಾರ ಹೆಚ್ಚಳದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಈ ಭಾರಿ ಶೇಕಡ 03ರಷ್ಟು ಏರಿಕೆ ಸಾಧ್ಯತೆ ಇದ್ದು, ಅದು ಮುಂದಿನ ತಿಂಗಳ ಸೆಪ್ಟಂಬರ್‌ನಲ್ಲಿ ಏರಿಕೆ ಆಗುವ ಸಂಭವವಿದೆ.












Click it and Unblock the Notifications