ಪಾಸ್ ಪೋರ್ಟ್ 'ಕೇಸರೀಕರಣ'ವಿಲ್ಲ! ನಿಲುವು ಬದಲಿಸಿದ ಸರ್ಕಾರ
ನವದೆಹಲಿ, ಜನವರಿ 31: ಇನ್ನು ಮೇಲೆ ಅಡ್ರೆಸ್ ಪ್ರೋಫ್ ಗೆ ಪಾಸ್ ಪೋರ್ಟ್ ಬಳಸುವಂತಿಲ್ಲ ಎಂಬ ಹೊಸ ನಿಯಮವನ್ನು ಜಾರಿಗೆ ತರುವುದಾಗಿ ಇತ್ತೀಚೆಗೆ ತಾನೇ ಹೇಳಿದ್ದ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ.
ಹತ್ತನೇ ತರಗತಿ ಪಾಸಾಗದವರಿಗೆ 'ಕೇಸರಿ' ಬಣ್ಣದ ಪಾಸ್ ಪೋರ್ಟ್ ನೀಡುವ ಬಗ್ಗೆಯೂ ಸರ್ಕಾರ ಯೋಚಿಸಿತ್ತು. ಮತ್ತು ಪಾಸ್ ಪೋರ್ಟಿನ ಕೊನೆಯ ಪುಟ, ಅಂದರೆ ವಿಳಾಸವನ್ನು ಹೊಂದಿರುವ ಪುಟವನ್ನೇ ತೆಗೆದುಹಾಕಲು ತೀರ್ಮಾನಿಸಿತ್ತು.
ಈ ಬಗ್ಗೆ ವಿರೋಧಪಕ್ಷ ಮಾತ್ರವಲ್ಲದೆ ಕೆಲ ಜನಸಾಮಾನ್ಯರೂ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ತಾರತಮ್ಯ ಎಸಗಿದಂತಾಗುತ್ತದೆ ಎಂದೂ ದೂರಲಾಗಿತ್ತು. ಅಷ್ಟೇ ಅಲ್ಲ, ಸರ್ಕಾರ ಪಾಸ್ ಪೋರ್ಟ್ ಅನ್ನೂ ಕೇಸರೀಕರಣಗೊಳಿಸಲು ಹೊರಟಿದೆ ಎಂದು ಲೇವಡಿ ಮಾಡಲಾಗಿತ್ತು.

2012ರಿಂದ ವಿತರಣೆಯಾದ ಪಾಸ್ಪೋರ್ಟ್ ಗಳಲ್ಲಿ ಬಾರ್ ಕೋಡ್ ಅಳವಡಿಸಲಾಗಿದೆ. ಹೀಗಾಗಿ, ಮಾಹಿತಿ ಕಲೆ ಹಾಕುವುದು ಸುಲಭ. ಕೊನೆಯ ಪುಟದಲ್ಲಿರುವ ವಿವರಗಳು ಪಾಸ್ಪೋರ್ಟ್ ಕಚೇರಿ ಅಥವಾ ವಲಸೆ ಇಲಾಖೆಗೆ ಬೇಕಾಗಿಲ್ಲ. ಹೀಗಾಗಿ, ಕೊನೆಯ ಪುಟವನ್ನು ಖಾಲಿಯಾಗಿಡಲು ಚಿಂತನೆ ನಡೆದಿತ್ತು.











Click it and Unblock the Notifications