ಆಯುಧ ಪೂಜೆ ವಿಶೇಷ: ನೌಕರರ ಬೋನಸ್ ಮಿತಿ ಏರಿಕೆ

ನವದೆಹಲಿ, ಅ. 22: ಕಾರ್ಖಾನೆ ಕೆಲಸಗಾರರು ಮತ್ತು 20 ಅಥವಾ ಅದಕ್ಕಿಂತ ಹೆಚ್ಚಿನ ಕೆಲಸಗಾರರುಳ್ಳ ಸಂಸ್ಥೆಗಳ ನೌಕರರ ಬೋನಸ್ ಲೆಕ್ಕ ಮಿತಿ ದ್ವಿಗುಣಗೊಳಿಸಲು ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವೇತನದ ಮಿತಿಯನ್ನು ಈಗಿರುವ 3,500 ರೂ.ನಿಂದ 7,000 ರೂ.ಗೆ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ತಿದ್ದುಪಡಿ ಮಸೂದೆಯನ್ನು 2015 ಎಪ್ರಿಲ್ 1 ರಿಂದ ಜಾರಿಗೆ ತರಲಾಗುವುದು. ಇನ್ನು ಮಸೂದೆಯನ್ನು ಅನುಮೋದನೆಗಾಗಿ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವುದು. ಉದ್ಯೋಗಿಯೊಬ್ಬರ ವೇತನ ಅಥವಾ ಮಜೂರಿಯಿಂದ ಬೋನಸ್ ಪಾವತಿಗೆ ಅರ್ಹತೆ ಮಿತಿಯನ್ನು ಈಗಿನ 10,000 ರೂ.ಯಿಂದ 21,000 ರೂ.ಗೆ ಏರಿಸುವ ಉದ್ದೇಶವನ್ನೂ ಮಸೂದೆ ಹೊಂದಿದೆ.

Government doubles monthly bonus calculation ceiling to Rs 7,000

ಬೋನಸ್ ಪಡೆಯಲು ಕಾರ್ವಿುಕರಿಗಿರುವ ವೇತನ ಅರ್ಹತೆ ಮಿತಿಯನ್ನೂ ಹೆಚ್ಚಿಸಲಾಗಿದೆ. ಸದ್ಯ ಮಾಸಿಕ 10,000 ರೂ. ವೇತನ ಪಡೆಯುತ್ತಿರುವವರನ್ನು ಮಾತ್ರ ಬೋನಸ್​ಗೆ ಪರಿಗಣಿಸಲಾಗುತ್ತಿದೆ.

ಹೊಸ ನಿಯಮದ ಪ್ರಕಾರ, 21,000 ರೂ.ವರೆಗೆ ಮಾಸಿಕ ವೇತನ ಪಡೆಯುವವರು ಬೋನಸ್​ಗೆ ಅರ್ಹರಾಗಿರುತ್ತಾರೆ. '1965ರ ಬೋನಸ್ ಪಾವತಿ ಕಾಯ್ದೆ'ಗೆ ಈ ಹಿಂದೆ 2007ರಲ್ಲಿ ತಿದ್ದುಪಡಿ ತರಲಾಗಿತ್ತು. ಆಗ, 2006ರ ಏ. 1ರಿಂದ ಪೂರ್ವಾನ್ವಯವಾಗುವಂತೆ ಬೋನಸ್ ಲೆಕ್ಕಾಚಾರದ ಮಿತಿ ಮತ್ತು ವೇತನ ಮಿತಿಯಲ್ಲಿ ಬದಲಾವಣೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+