ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹರಡಿದ 8 ಯೂಟ್ಯೂಬ್ ಚಾನೆಲ್ ಬ್ಯಾನ್! ಯಾವುವು ಆ ಚಾನೆಲ್ ಗಳು?
ನವದೆಹಲಿ, ಆಗಸ್ಟ್ 10: ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಹಾಗೂ ಒದೇಶ ವಿರೋಧಿ ಚುಟವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇರೆಗೆ ಸುಮಾರು 23 ಮಿಲಿಯನ್ ಚಂದಾದಾರರನ್ನು ಹೊಂದಿರುವ ಎಂಟು ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಮಂಗಳವಾರ ನಿಷೇಧಿಸಿದೆ.
ಯಹಾ ಸಚ್ ದೇಖೊ, ಕ್ಯಾಪಿಟಲ್ ಟಿವಿ, ಕೆಪಿಎಸ್ ನ್ಯೂಸ್, ಸರಕಾರಿ ವೋಗ್, ಅರ್ನ್ ಟೆಕ್ ಇಂಡಿಯಾ, ಎಸ್‌ಪಿಎನ್ 9 ನ್ಯೂಸ್, ಎಜುಕೇಷನಲ್ ದೋಸ್ತ್ ಮತ್ತು ವರ್ಲ್ಡ್ ಬೆಸ್ಟ್ ನ್ಯೂಸ್ ನಿಷೇಧಕ್ಕೆ ಒಳಗಾಗಿರುವ ಯುಟ್ಯೂಬ್ ಚಾನೆಲ್‌ಗಳಾಗಿವೆ. ಈ ಯೂಟ್ಯೂಬ್ ಚಾನೆಲ್ ಗಳು ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಪತ್ರಿಕಾ ಮಾಹಿತಿ ಬ್ಯೂರೋ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಲ್ಡ್ ಬೆಸ್ಟ್ ನ್ಯೂಸ್, 1.7 ಮಿಲಿಯನ್ ಚಂದಾದಾರರು ಮತ್ತು 18 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಯುಟ್ಯೂಬ್ ಚಾನೆಲ್, ಭಾರತೀಯ ಸೇನೆಯನ್ನು ತಪ್ಪಾಗಿ ಪ್ರತಿನಿಧಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಚಾನೆಲ್‌ಗಳು 2.3 ಕೋಟಿ ಚಂದಾದಾರರನ್ನು ಹೊಂದಿದ್ದವು . ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ, ಸರಕಾರದ ವಿವಿಧ ಯೋಜನೆಗಳು, ಚುನಾವಣಾ ಆಯೋಗ, ಇವಿಎಂ ತಿರುಚುವಿಕೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪದ ಮೇರೆಗೆ ಈ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
3.43 ಮಿಲಿಯನ್ ಚಂದಾದಾರರು ಮತ್ತು 23 ಕೋಟಿ ವೀಕ್ಷಣೆ ಹೊಂದಿರುವ ಎಜುಕೇಷನಲ್ ದೋಸ್ತ್ ಚಾನೆಲ್ ಸರ್ಕಾರಿ ಯೋಜನೆಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿದೆ. 4.8 ಮಿಲಿಯನ್ ಚಂದಾದಾರರು ಮತ್ತು 189 ಕೋಟಿ ವೀಕ್ಷಣೆಗಳನ್ನು ಹೊಂದಿರುವ ಎಸ್‌ಪಿಎನ್ 9 ಸುದ್ದಿ ರಾಷ್ಟ್ರಪತಿ, ಪ್ರಧಾನಿ ಮತ್ತು ಹಲವರಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
4.5 ಮಿಲಿಯನ್ ಚಂದಾದಾರರು ಮತ್ತು 9.4 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಚಾನೆಲ್ Sarkari Vlog ಸರ್ಕಾರದ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಮತ್ತು 13 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ 'ಕೆಪಿಎಸ್ ನ್ಯೂಸ್' ಚಾನೆಲ್ ಸರ್ಕಾರಕ್ಕೆ ಸಂಬಂಧಿಸಿದ ಯೋಜನೆಗಳು, ಆದೇಶಗಳು ಮತ್ತು ನಿರ್ಧಾರಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ, ಉದಾಹರಣೆಗೆ ಅಡುಗೆ ಅನಿಲ ಸಿಲಿಂಡರ್‌ಗಳು 20 ರೂ.ಗೆ ಲಭ್ಯತೆ ಮತ್ತು ಪೆಟ್ರೋಲ್ ಲೀಟರ್‌ಗೆ 15 ರೂ ಗೆ ಸುಳ್ಳು ಸುದ್ದಿ ಮಾಡಿದ್ದಾರೆ ಎಂದು ತಿಳಿಸಲಾಗಿದೆ.
3.5 ಮಿಲಿಯನ್ ಚಂದಾದಾರರು ಮತ್ತು 160 ಕೋಟಿಗೂ ಹೆಚ್ಚು ವೀಕ್ಷಣೆ ಹೊಂದಿರುವ 'ಕ್ಯಾಪಿಟಲ್ ಟಿವಿ' ಚಾನೆಲ್ ಕೂಡ ಪ್ರಧಾನಿ, ಸರ್ಕಾರ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದ ಆದೇಶಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದೆ ತಿಳಿದು ಬಂದಿದೆ.
ಇನ್ನೂ ಯಹಾನ್ ಸಚ್ ದೇಖೋ 3 ಮಿಲಿಯನ್ ಚಂದಾದಾರರು ಮತ್ತು 100 ಮಿಲಿಯನ್ ವೀಕ್ಷಣೆಗಳನ್ನು ಹೊಂದಿರುವ ಚುನಾವಣಾ ಆಯೋಗ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡುತ್ತಿದೆ. 31,000 ಚಂದಾದಾರರು ಮತ್ತು 3.6 ಮಿಲಿಯನ್ ವೀಕ್ಷಣೆಗಳನ್ನು ಹೊಂದಿರುವ 'ಅರ್ನ್ ಇಂಡಿಯಾ ಟೆಕ್' ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಇತರರಿಗೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ
ಒಟ್ನಾಲಿ ದೇಶದ ಭದ್ರತೆ, ಆಡಳಿತ, ವಿದೇಶಾಂಗ ವ್ಯವಹಾರ, ಧಾರ್ಮಿಕ ವಿಷಯಗಳ ಬಗ್ಗೆ ತಪ್ಪು ಮಾಹಿತಿ ಪ್ರಸರಿಸುತ್ತಿರುವ ಯೂಟ್ಯೂಬ್ ಚಾನೆಲ್, ವೆಬ್‌ಸೈಟ್‌ಗಳ ವಿರುದ್ಧ ಕೇಂದ್ರ ಸರಕಾರವು, 2021ರ ಐಟಿ ನಿಯಮದ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅದರ ಮುಂದುವರಿದ ಭಾಗ ಇದಾಗಿದೆ.ಈ ಚಾನೆಲ್‌ಗಳು ಲೋಕಸಭೆ ಚುನಾವಣೆಯು ಅವಧಿಗೂ ಮುನ್ನವೇ ಘೋಷಣೆಯಾಗಲಿದೆ,
ವಿದ್ಯುನ್ಮಾನ ಮತ ಯಂತ್ರಗಳನ್ನು ನಿಷೇಧಿಸಲಾಗುತ್ತದೆ ಎಂಬಂತಹ ಸುಳ್ಳು ಮಾಹಿತಿಗಳನ್ನು ನೀಡಿದ್ದವು. ಯಾವುದೇ ಆಧಾರವಿಲ್ಲದೆ ಸುದ್ದಿಗಳನ್ನು ಸೃಷ್ಟಿ ಮಾಡುತ್ತಿದ್ದ ಯೂಟ್ಯೂಬ್ ಚಾನೆಲ್‌ಗಳ ಬಗ್ಗೆ ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ (ಪಿಐಬಿ) ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಅದನ್ನು ಪರಿಶೀಲಿಸಿದ ಬಳಿಕ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.












Click it and Unblock the Notifications