ಜುಲೈ 6ರಿಂದ ಕಚೇರಿಯಲ್ಲಿ ಕೆಲಸ ಮಾಡಲು ಗೂಗಲ್ ಒಪ್ಪಿಗೆ

ಬೆಂಗಳೂರು, ಮೇ 28 : ಗೂಗಲ್ ಜುಲೈ 6ರಿಂದ ಕಚೇರಿಯನ್ನು ತೆರೆಯುವುದಾಗಿ ಘೋಷಣೆ ಮಾಡಿದೆ. ಕಚೇರಿ ಆರಂಭವಾದರೂ ಶೇ 20ರಷ್ಟು ಸಿಬ್ಬಂದಿಗಳು ಮಾತ್ರ ಕಚೇರಿಯಿಂದ ಕೆಲಸ ಮಾಡಬೇಕಿದೆ. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು.

ಮಾರ್ಚ್‌ನಲ್ಲಿ ಕೊರೊನಾ ಭೀತಿ ಹೆಚ್ಚಾದಾಗ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಗೂಗಲ್ ನಿರ್ದೇಶನ ನೀಡಿತ್ತು. ಈಗ ಜುಲೈ 6ರಿಂದ ಶೇ 20ರಷ್ಟು ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡಬಹುದು ಎಂದು ಹೇಳಿದೆ.

ಕಚೇರಿಗೆ ಉದ್ಯೋಗಿಗಳು ಆಗಮಿಸುವುದನ್ನು ರೋಟೇಷನ್ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ ಎಂದು ಗೂಗಲ್ ಹೇಳಿದೆ. ಪ್ರತಿ ವಾರ ಒಬ್ಬರ ಸರದಿ ಬದಲಾಗಲಿದೆ. ಸೆಪ್ಟೆಂಬರ್‌ನಲ್ಲಿ ಶೇ 30ರಷ್ಟು ಉದ್ಯೋಗಿಗಳು ಕಚೇರಿಗೆ ಬರಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.

 Google To Reopen Office From July 6 With Limited Employees

ಮನೆಯಿಂದಲೇ ಕೆಲಸ ಮಾಡಲು ಗೂಗಲ್ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಲಿದೆ. ಇದಕ್ಕಾಗಿ ಮನೆಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು 1000 ಯುಎಸ್ ಡಾಲರ್ ಹಣವನ್ನು ಉದ್ಯೋಗಿಗಳಿಗೆ ನೀಡಲಿದೆ.

'ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿದ ಮೇಲೆಯೂ ಮನೆಯಿಂದ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಲಾಗುತ್ತದೆ" ಎಂದು ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+