ಗೂಗಲ್‌ ಸರ್ವರ್ ಡೌನ್‌: ಯೂಟೂಬ್‌, ಜೀಮೇಲ್‌, ಡ್ರೈವ್‌ ಸ್ಥಗಿತ

ನವದೆಹಲಿ, ಮಾರ್ಚ್‌ 23: ಟೆಕ್ ದೈತ್ಯ ಗೂಗಲ್‌ನ ಸೇವೆಗಳು ಗುರುವಾರ ಬೆಳಿಗ್ಗೆ ಸ್ಥಗಿತವಾಗಿದ್ದವು. ಈ ವ್ಯತ್ಯಯವು ಯೂಟ್ಯೂಬ್, ಡ್ರೈವ್, ಜಿಮೇಲ್ ಮತ್ತು ಸರ್ಚ್ ಎಂಜಿನ್ ಮೇಲೆ ಪರಿಣಾಮ ಬೀರಿತ್ತು.

ಡೌನ್‌ಡೆಕ್ಟರ್ ಪ್ರಕಾರ, ಗೂಗಲ್ ಸೇವೆಯಲ್ಲಿನ ವ್ಯತ್ಯಯವು ಭಾರತದಲ್ಲಿ 1,500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದೆ. ಈ ಬಗ್ಗೆ ಗೂಗಲ್ ಬಳಕೆದಾರರು ಟ್ವೀಟ್‌ ಮಾಡುವ ಮೂಲಕ ಟ್ರೆಂಟ್‌ ಆಗಿದೆ. ಗೂಗಲ್ ಮಾಲೀಕತ್ವದ ಯೂಟ್ಯೂಬ್, ಜಿಮೇಲ್, ಗೂಗಲ್ ಡ್ರೈವ್​ನ ಸರ್ವರ್ ಡೌನ್ ಆಗಿದ್ದು ಬಳಕೆದಾರರು ಉಪಯೋಗಿಸಲು ಪರದಾಡುತ್ತಿದ್ದಾರೆ. ಭಾರತದಾದ್ಯಂತ ಬಳಕೆದಾರರು ಮೇಲ್​​ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಕೂಡ ಪರದಾಡುವ ಸ್ಥಿತಿ ಇತ್ತು.

Google server down: YouTube, Gmail, Drive down

ಬಳಕೆದಾರರು ಈ ಸರ್ವರ್‌ ನಿಧಾನಗೊಂಡಿರುವ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ ಟ್ವೀಟ್ಟರ್‌ನಲ್ಲಿ ಮೀಮ್‌ ಕ್ರಿಯೇಟ್‌ ಮಾಡಿದ್ದರು. ಯೂಟೂಬ್‌, ಡ್ರೈವ್, ಜಿಮೇಲ್‌, ಡೋ, ಮೀಟ್‌, ಹ್ಯಾಂಗ್‌ಔಟ್ಸ್‌, ಡಾಕ್ಸ್, ಶೀಟ್‌ಗಳಂತಹ ಗೂಗಲ್‌ ಕುಟುಂಬದ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಸಹ ಸ್ಥಗಿತಗೊಂಡಿವೆ ಎಂದು ವರದಿಯಾಗಿದೆ.

ಡೌನ್‌ಡೆಕ್ಟರ್ ಪ್ರಕಾರ, ಜಿಮೇಲ್‌ ಬೆಳಗ್ಗೆ 2,000 ವ್ಯತ್ಯಯದ ವರದಿಗಳನ್ನು ಮಾಡಿತ್ತು. ಟ್ವಿಟ್ಟರ್‌ನಲ್ಲಿ ಬಳಕೆದಾರರು ತಮ್ಮ ಜಿಮೇಲ್‌ ಸೈನ್ ಇನ್ ಪುಟದಲ್ಲಿ 502 ದೋಷವನ್ನು ತೋರಿಸುವ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. 502 ದೋಷಗಳು ಕಂಡು ಬಂದಿದ್ದು ಸಾಮಾನ್ಯವಾಗಿ ಸರ್ವರ್ ಪ್ರತಿಕ್ರಿಯಿಸುತ್ತಿಲ್ಲ ಎಂದು ಪೋಸ್ಟ್‌ಗಳು ತಿಳಿಸಿವೆ.

Google server down: YouTube, Gmail, Drive down

ಗೂಗಲ್ ಮಾಲೀಕತ್ವದ ಯೂಟ್ಯೂಬ್, ಡ್ರೈವ್, ಜಿಮೇಲ್, ಡ್ಯೂ, ಗೂಗಲ್ ಮೀಟ್, ಹ್ಯಾಂಗ್​ಔಟ್ಸ್, ಡಾಕ್ಸ್, ಶೀಟ್‌ಗಳಂತಹ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಬಳಕೆದಾರರು ತಮಗೆ ಕಂಡುಬಂದ ದೋಷಗ ಬಗ್ಗೆ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಇದರ ಬಗ್ಗೆ ಗೂಗಲ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+