ಯುವಜನರ ಮೆಚ್ಚಿನ ಟಿಕ್-ಟಾಕ್ ಆ್ಯಪ್ ಭಾರತದಲ್ಲಿ ಬಂದ್

ನವದೆಹಲಿ, ಏಪ್ರಿಲ್ 17: ಯುವಕರ ಮೆಚ್ಚಿನ ಮನೊರಂಜನಾ ಆ್ಯಪ್ ಆಗಿದ್ದ ಟಿಕ್-ಟಾಕ್‌ ಭಾರತದಲ್ಲಿ ಬಂದ್ ಆಗುವ ಸಮಯ ಸನ್ನಿಹಿತವಾಗಿದೆ. ಈಗಾಗಲೇ ಗೂಗಲ್ ಈ ಆಪ್ ಅನ್ನು ತನ್ನ ಪಟ್ಟಿಯಿಂದ ತೆಗೆದುಹಾಕಿದೆ.

ಟಿಕ್-ಟಾಕ್ ಅನ್ನು ಬ್ಯಾನ್ ಮಾಡಬೇಕೆಂದು ಮದ್ರಾಸ್ ಹೈಕೋರ್ಟ್ ಕೆಲವು ದಿನಗಳ ಹಿಂದಷ್ಟೆ ಸರ್ಕಾರಕ್ಕೆ ಸೂಚಿಸಿತ್ತು. ಇದನ್ನು ಕೆಲವರು ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದರು, ಆದರೆ ಸುಪ್ರಿಂ ತಡೆ ನೀಡಲು ನಿರಾಕರಿಸಿತ್ತು.

ಹಾಗಾಗಿ ಸರ್ಕಾರವು ಗೂಗಲ್ ಮತ್ತು ಆಪಲ್ ಸಂಸ್ಥೆಗಳನ್ನು ಟಿಕ್-ಟಾಕ್ ಅನ್ನು ಭಾರತದಲ್ಲಿ ತಮ್ಮ ಪ್ಲೇಸ್ಟೋರ್ ಗಳಿಂದ ಡಿಲೀಟ್ ಮಾಡುವಂತೆ ಕೋರಿತ್ತು. ಅಂತೆಯೇ ಸದ್ಯಕ್ಕೆ ಗೂಗಲ್ ಸಂಸ್ಥೆಯು ಪ್ಲೇಸ್ಟೋರ್‌ನಿಂದ ಟಿಕ್-ಟಾಕ್ ಅನ್ನು ತೆಗೆದಿದೆ.

Google banned Tik-Tok app in India

ಇನ್ನು ಮುಂದೆ ಟಿಕ್-ಟಾಕ್ ಅನ್ನು ಭಾರತದಲ್ಲಿ ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ, ಆಪಲ್ ಸಂಸ್ಥೆ ಇನ್ನೂ ಟಿಕ್-ಟಾಕ್ ಅನ್ನು ಆಪಲ್ ಪ್ಲೇಸ್ಟೋರ್‌ನಿಂದ ತೆಗೆದಿಲ್ಲ. ಅದೂ ಸಹ ಶೀಘ್ರವಾಗಿ ತೆಗೆಯುವ ಸಾಧ್ಯತೆ ಇದೆ.

ಆದರೆ ಈಗಾಗಲೇ ಟಿಕ್-ಟಾಕ್ ಹೊಂದಿರುವವರು ಅಪ್ಲಿಕೇಶನ್ ಅನ್ನು ಸದ್ಯದ ಮಟ್ಟಿಗೆ ಎಂದಿನಿಂತೆ ಬಳಸಬಹುದಾಗಿದೆ. ಮುಂದೆ ಅದನ್ನೂ ಬಂದ್ ಮಾಡುವ ಸಾಧ್ಯತೆ ಇದೆ.

ಟಿಕ್-ಟಾಕ್‌ನಿಂದ ಅಶ್ಲೀಷ ವಿಡಿಯೋಗಳು ಹೆಚ್ಚಾಗುತ್ತಿವೆ, ಮತ್ತು ಅದರಿಂದ ಲಿಂಗ ದಾಳಿಗಳು ಹೆಚ್ಚಾಗುತ್ತಿವೆ, ಯುಕವರಿಗೆ ಟಿಕ್-ಟಾಕ್ ಆಪ್ ಗೀಳಾಗಿ ಪರಿಣಮಿಸಿದೆ ಎಂದು ಮದ್ರಾಸ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಚೀನಾದ ಟಿಕ್-ಟಾಕ್ ಆಪ್ ಭಾರತದಲ್ಲಿ ಅತ್ಯಂತ ಪ್ರಸಿದ್ಧವಾಗಿತ್ತು, ಬಳಕೆದಾರರೆ ಆಪ್ ಬಳಸಿ ಭಿನ್ನ-ಭಿನ್ನ ವಿಡಿಯೋಗಳನ್ನು ಮಾಡಬಹುದಾಗಿತ್ತು. ಅತ್ಯಂತ ಕಡಿಮೆ ಸಮಯದಲ್ಲಿ ಈ ಆಪ್ ಭಾರತದಲ್ಲಿ ಪ್ರಸಿದ್ಧಿ ಪಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+