• search

ರಾಹುಲ್ ಗಾಂಧಿ ಬಾಯಿಗೆ ಆಹಾರವಾದ ಮೋದಿಯ ಉತ್ತರ

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ನರೇಂದ್ರ ಮೋದಿಯವರನ್ನ ಛೇಡಿಸಿದ ರಾಹುಲ್ ಗಾಂಧಿ | Oneindia Kannada

    ನವದೆಹಲಿ, ಜೂನ್ 4: ನೈಜ ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಎದುರಿಸಲಾರರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅವರೇನಿದ್ದರೂ ಬರೆದುಕೊಟ್ಟ ಸಂದರ್ಶನಗಳನ್ನಷ್ಟೇ ನೀಡಬಲ್ಲರು. ನೈಜ ಪ್ರಶ್ನೆಗಳಿಗೆ ಅವರು ಉತ್ತರಿಸಿದರೆ ಅದು ನಮಗೆಲ್ಲರಿಗೆ ಮುಜುಗರ ತರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

    ವೈರಲ್ ವಿಡಿಯೋ : ಸಿಂಗಪುರದಲ್ಲಿ ಚಪ್ಪಾಳೆ ಗಿಟ್ಟಿಸಿದ ರಾಹುಲ್

    ಆಗಿದ್ದೇನು?

    ಸಿಂಗಾಪುರದ ನನ್ಯಾಂಗ್ ಟೆಕ್ನೋಲಾಜಿಕಲ್ ಯುನಿವರ್ಸಿಟಿಯಲ್ಲಿ ಕಳೆದ ಶುಕ್ರವಾರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿಯವರಿಗೆ 'ಏಷ್ಯಾ ಎದುರಿಸುತ್ತಿರುವ ಸಮಸ್ಯೆಗಳೇನು?' ಎಂಬ ಪ್ರಶ್ನೆ ಎದುರಾಯಿತು.

    Good that he doesnt take real questions, says Rahul mocks Modi

    ಇದಕ್ಕೆ ಹಿಂದಿಯಲ್ಲಿ, ತಮ್ಮ ಎಂದಿನ ದಾಟಿಯಲ್ಲಿ ಪ್ರಧಾನಿ ಚರ್ವಿತ ಚರ್ವಣ ಉತ್ತರ ನೀಡಿದ್ದಾರೆ. ಆದರೆ ಇದನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಬೇಕಿದ್ದ ಮಹಿಳೆ ಮಾತ್ರ, ಪ್ರಧಾನಿ ನೀಡದೇ ಇದ್ದ ಉತ್ತರವನ್ನು ಸುಲಲಿತವಾಗಿ ಜನರ ಮುಂದಿಟ್ಟಿದ್ದಾರೆ.

    ರಾಹುಲ್ ವೈರಲ್ ವಿಡಿಯೋ ವಿರುದ್ಧ ದಾವೆ ಹೂಡಲು ಹೊರಟ ಲೇಖಕ

    ಇದನ್ನು ವ್ಯಂಗ್ಯ ಮಾಡಿರುವ ರಾಹುಲ್ ಗಾಂಧಿ, "ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಆ ಕ್ಷಣದ ಪ್ರಶ್ನೆಯನ್ನು ಎದುರಿಸಿದ್ದಾರೆ. ಆದರೆ ಅವರ ತರ್ಜುಮೆಗಾರ್ತಿ ಮಾತ್ರ ಅದಕ್ಕೆ ಸಿದ್ದಪಡಿಸಿದ್ದ ಉತ್ತರ ಹೊಂದಿದ್ದರು," ಎಂದು ಕಾಲೆಳೆದಿದ್ದಾರೆ.

    "ಪುಣ್ಯ ಅವರು ನೈಜ ಪ್ರಶ್ನೆಗಳನ್ನು ಎದುರಿಸಲಿಲ್ಲ.. ಒಂದೊಮ್ಮೆ ಉತ್ತರಿಸಿದ್ದರೆ ನಮಗೆಲ್ಲಾ ಮುಜುಗರವಾಗುತ್ತಿತ್ತು," ಎಂದು ರಾಹುಲ್ ಛೇಡಿಸಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    "Good that he doesn't take real questions. Would have been a real embarrassment to us all if he did," said Rahul Gandhi after Narendra Modi's answer to a question in Singapore's Nanyang Technological University.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more