ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಸವಾರರಿಗೆ ಸಿಹಿ ಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

By Mahesh
|
Google Oneindia Kannada News

ನವದೆಹಲಿ, ಜು.01: ವಾಹನ ಸವಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಸರ ಕೊಂಚ ತಗ್ಗಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೊಂಡಿದೆ. ಇತ್ತೀಚೆಗೆ ಜೂ.15ರಂದು ಪೆಟ್ರೋಲ್ ದರ ಏರಿಕೆಯಾಗಿ, ಡೀಸೆಲ್ ಅಗ್ಗವಾಗಿತ್ತು.

ಜೂ.30ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್ ಮೇಲೆ 31 ಪೈಸೆ ಕಡಿಮೆಯಾದರೆ, ಡೀಸೆಲ್ ಪ್ರತಿ ಲೀಟರ್ ಮೇಲೆ 71 ಪೈಸೆ ಕಡಿಮೆಯಾಗಿದೆ.

Good news! Petrol price cut by 31 p/L, diesel by 71 p/L

ಕಳೆದ ಮೇ 1 ರಂದು ಹಾಗೂ 15 ರಂದು ಪೆಟ್ರೋಲ್ ಹಾಗೂ ಹೆಚ್ಚಳ ಮಾಡಲಾಗಿತ್ತು. ಮೇ 1ರಂದು ಪೆಟ್ರೋಲ್ ದರ ಲೀಟರ್ ಗೆ 3.96 ರು. ಹಾಗೂ ಡೀಸೆಲ್ ಲೀಟರ್ ಗೆ 2.37 ರು. ಏರಿಕೆ ಮಾಡಲಾಗಿತ್ತು. ಬಳಿಕ ಮೇ 15 ರಂದು 3.13 ರು ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 2.71 ರು. ಏರಿಕೆ ಮಾಡಲಾಗಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಹೊಸ ದರ ಪ್ರಕಟಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಥೆಗಳು ಹೇಳಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ದರ 66.62 ರೂ. ಆಗಿದ್ದು, ಡೀಸೆಲ್ ದರ 50.22 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 73.46 ರು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 55.17 ರು ನೀಡಬೇಕಾಗುತ್ತದೆ.

English summary
The government on Tuesday(Jun.30) cut the petrol prices by 31 paise per litre and diesel by 71 paise per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X