Good News: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್
Good News: ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯು ಆಗಾಗ ಸಿಹಿ ಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ಸಹ ಉತ್ತಮ ಸೌಲಭ್ಯಗಳನ್ನು ಕಲ್ಪಿಸುತ್ತಲೇ ಇರುತ್ತದೆ. ಹಾಗೆಯೇ ಇದೀಗ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಜೊತೆಗೆ ರುಚಿಕರವಾದ ಊಟ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
ತೆಲಂಗಾಣ ರಾಜ್ಯದ ಕಲ್ಯಾಣ ಹಾಸ್ಟೆಲ್‌ಗಳಲ್ಲಿನ ಸ್ಥಿತಿಗತಿಗಳನ್ನು ತಿಳಿಯಲು ತಾವೇ ಖುದ್ದು ಸಿಎಂ ರೇವಂತ ರೆಡ್ಡಿ ಮತ್ತು ಸಚಿವರು ಇಡೀ ಸರ್ಕಾರಿ ಆಡಳಿತದೊಂದಿಗೆ ಹಾಸ್ಟೆಲ್ ಮತ್ತು ಗುರುಕುಲಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಅಲ್ಲದೆ, ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅವರೊಂದಿಗೆ ಊಟ ಮಾಡಿ ಗಮನ ಸೆಳೆದರು.

ಬಳಿಕ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಜೊತೆಗೆ ರುಚಿಕರವಾದ ಊಟ ನೀಡುವತ್ತ ಗಮನಹರಿಸಲು ಸರ್ಕಾರ ನಿರ್ಧರಿಸಿದೆ. ಇದುವರೆಗೆ ಜಾರಿಗೆ ಬಂದಿರುವ ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡಲು ಮೆನು ಸಿದ್ಧಪಡಿಸಲಾಗಿದೆ. ಇದುವರೆಗೆ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಪ್ರತಿ ಭಾನುವಾರ ಕೋಳಿ ಮಾಂಸ (ಚಿಕನ್) ನೀಡಲಾಗುತ್ತಿತ್ತು. ಆದರೆ, ಇದೇ ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಮಟನ್ ನೀಡಲಾಗುತ್ತಿದೆ.
ಇನ್ಮುಂದೆ ಊಟದಲ್ಲಿ ತಿಂಗಳಿಗೆ ಎರಡು ಬಾರಿ ಮಟನ್ ಹಾಗೂ 4 ಬಾರಿ ಚಿಕನ್ ನೀಡಲಾಗುವುದು. ಮಾಂಸಾಹಾರಿ ಊಟದಲ್ಲಿ ಸಾಂಬಾರ್ ಮತ್ತು ಮೊಸರು ಸೇರಿದೆ. ರಂಗಾರೆಡ್ಡಿ ಜಿಲ್ಲೆಯ ಚಿಲ್ಕೂರಿನ ಸಮಾಜ ಕಲ್ಯಾಣ ವಸತಿ ಶಾಲೆಗೆ ಸಿಎಂ ರೇವಂತ್ ರೆಡ್ಡಿ ಭೇಟಿ ನೀಡಿದ ಬಳಿಕ ರಾಜ್ಯದ ಎಲ್ಲಾ ಸರ್ಕಾರಿ ಹಾಸ್ಟೆಲ್, ಗುರುಕುಲಗಳಲ್ಲಿ ಈ ಯೋಜನೆ ಆರಂಭಿಸಲಾಯಿತು. ಬಳಿಕ ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
2025ನೇ ಸಾಲಿನ ಶೈಕ್ಷಣಿಕ ರಜೆ ದಿನಗಳ ಪಟ್ಟಿ
* ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ: ಜನವರಿ 14, 2025
* ಗಣರಾಜ್ಯೋತ್ಸವ: ಜನವರಿ 26, 2025
* ಮಹಾ ಶಿವರಾತ್ರಿ: ಫೆಬ್ರವರಿ 26, 2025
* ಯುಗಾದಿ ಹಬ್ಬ: 30 ಮಾರ್ಚ್, 2025
* ಖುತುಬ್-ಎ-ರಂಜಾನ್: 31 ಮಾರ್ಚ್, 2025
* ಗುಡ್ ಫ್ರೈಡೆ: 18 ಏಪ್ರಿಲ್, 2025
* ಬಸವ ಜಯಂತಿ/ಅಕ್ಷಯ ತೃತೀಯ: 30 ಏಪ್ರಿಲ್, 2025 & ಮೇ 1, 2025
* ಬೇಸಿಗೆ ರಜೆಗಳು: 20 ಮೇ ನಿಂದ 30 ಜೂನ್, 2025
* ಬಕ್ರೀದ್: 7 ಜೂನ್, 2025
* ಮೊಹರಂನ ಕೊನೆಯ ದಿನ: 27 ಜುಲೈ, 2025
* ಸ್ವಾತಂತ್ರ್ಯ ದಿನಾಚರಣೆ: 15 ಆಗಸ್ಟ್, 2025
* ವರಸಿದ್ಧಿ ವಿನಾಯಕ ವ್ರತ: 27 ಆಗಸ್ಟ್, 2025
* ಈದ್ ಮಿಲಾದ್: 5 ಸೆಪ್ಟೆಂಬರ್, 2025
* ಮಹಾನವಮಿ, ಆಯುಧಪೂಜೆ: 1 ಅಕ್ಟೋಬರ್, 2025
* ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆ: 2 ಅಕ್ಟೋಬರ್, 2025
* ಮಹರ್ಷಿ ವಾಲ್ಮೀಕಿ ಜಯಂತಿ: 7 ಅಕ್ಟೋಬರ್, 2025
* ತುಲಾ ಸಂಕ್ರಮಣ: 17 ಅಕ್ಟೋಬರ್, 2025
* ನರಕ ಚತುರ್ದಶಿ: 20 ಅಕ್ಟೋಬರ್, 2025
* ಬಲಿಪಾಡ್ಯಮಿ, ದೀಪಾವಳಿ: ಅಕ್ಟೋಬರ್ 22, 2025
* ಕನ್ನಡ ರಾಜ್ಯೋತ್ಸವ: 1 ನವೆಂಬರ್, 2025
* ಕನಕದಾಸ ಜಯಂತಿ: 8 ನವೆಂಬರ್, 2025
* ಹುತ್ರಿ: 5 ಡಿಸೆಂಬರ್, 2025
ಕರ್ನಾಟಕದಲ್ಲಿ ನಿರ್ಬಂಧಿತ ರಜಾದಿನಗಳ ಪಟ್ಟಿ
* ಹೊಸ ವರ್ಷ: 1 ಜನವರಿ, 2025
* ಹೋಳಿ: 14 ಮಾರ್ಚ್, 2025
* ಪವಿತ್ರ ಶನಿವಾರ: 15 ಮಾರ್ಚ್, 2025
* ಜುಮತ್-ಉಲ್-ವಿದಾ: 28 ಮಾರ್ಚ್, 2025
* ಶಬ್-ಎ-ಖಾದರ್: 27 ಮಾರ್ಚ್, 2025
* ರಾಮನವಮಿ: 6 ಏಪ್ರಿಲ್, 2025
* ಬುದ್ಧ ಪೂರ್ಣಿಮಾ: 12 ಏಪ್ರಿಲ್, 2025
* ವರಮಹಾಲಕ್ಷ್ಮಿ ವ್ರತ: 8 ಆಗಸ್ಟ್, 2025
* ಶ್ರೀ ಕೃಷ್ಣ ಜನ್ಮಾಷ್ಟಮಿ: 16 ಆಗಸ್ಟ್, 2025
* ಸ್ವರ್ಣಗೌರಿ ವ್ರತ: 26 ಆಗಸ್ಟ್, 2025
* ರಗ್-ಉಪಕರ್ಮ, ಯಜುರ್ ಉಪಕರ್ಮ: 9 ಆಗಸ್ಟ್, 2025
* ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ: 18 ಸೆಪ್ಟೆಂಬರ್, 2025
* ವಿಶ್ವಕರ್ಮ ಜಯಂತಿ: 17 ಸೆಪ್ಟೆಂಬರ್, 2025
* ಗುರುನಾನಕ್ ಜಯಂತಿ: 5 ನವೆಂಬರ್2025
* ಕ್ರಿಸ್ ಮಸ್ ಮುನ್ನಾದಿನ: 24 ಡಿಸೆಂಬರ್, 2025












Click it and Unblock the Notifications