Gold Price Today: ಅಗ್ಗದ ಬೆಲೆಗೆ ಚಿನ್ನ ಸಿಗುವ ದೇಶಗಳು ಇವು!, ಚಿನ್ನದ ದರ ಎಷ್ಟಿದೆ? ಪಟ್ಟಿ ವಿವರ

ನವದೆಹಲಿ, ಜುಲೈ 26: ಭಾರತದಲ್ಲಿ ಸದಾ ಬೇಡಿಕೆಯಲ್ಲಿರುವ ಚಿನ್ನಕ್ಕೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಲಕ್ಷಣಗಳು ಗೋಚರಿಸಿವೆ. ಪ್ರಸಕ್ತ ಸಾಲಿನ 2024-25 ಬಜೆಟ್ ಮಂಡನೆ ಆದ ಬಳಿಕ ಗ್ರಾಹಕರಲ್ಲಿ ಮಂದಹಾಸ ಮೂಡಿದ್ದು, ಚಿನ್ನ ಖರೀದಿ ಮಾಡುತ್ತಿದ್ದಾರೆ. ಚಿನ್ನದ ಮೇಲಿನ ಆಮದು ಸುಂಕ ಕಡಿಮೆ ಆಗುತ್ತಿದ್ದಂತೆ ಭಾರತದಲ್ಲಿ ಬೇಡಿಕೆ ಏರುಗತಿಯಲ್ಲಿದೆ. ಹಾಗಾದರೆ ಸುತ್ತಮುತ್ತಲಿನ ದೇಶಗಳ ಪೈಕಿ ಅತೀ ಕಡಿಮೆ ಬೆಲೆಗೆ ಚಿನ್ನ ಸಿಗುವ ದೇಶಗಳು ಯಾವುವು? ಎಲ್ಲೆಲ್ಲಿ ಎಷ್ಟಿದೆ ದರ? ಇಲ್ಲಿದೆ ಮಾಹಿತಿ.

ಭಾರತ ಸರ್ಕಾರ ಜುಲೈ 23 ರಂದು ಮಂಡಿಸಿದ ಬಜೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ (ಆಮದು) ಸುಂಕವನ್ನು ಕಡಿತಗೊಳಿಸಿತು. ದಶಕಗಳ ಬಳಿಕ ಇಂಥದ್ದೊಂದು ನಿರ್ಧಾರವನ್ನು ಸರ್ಕಾರ ಘೋಷಿಸಿದೆ. ಇದರಿಂದಾಗಿ ಚಿನ್ನದ ಮೇಲಿನ ದೀರ್ಘಾವಧಿ ಬಂಡವಾಳ ಲಾಭ ಹಿಡುವಳಿ ಅವಧಿಯನ್ನು 36 ತಿಂಗಳಿನಿಂದ 24 ತಿಂಗಳಿಗೆ ತಗ್ಗಿಸಲಾಗಿದೆ.

Gold-Silver Price Today Gold available in Cheapest price in these top 5 Countries Know Rate list

ಈ ಕಾರಣದಿಂದಾಗಿ ಚಿನ್ನದ ಮೇಲಿನ ಹೂಡಿಕೆ, ಲಾಭದ ಲೆಕ್ಕಾಚಾರಗಳು ಗರಿಗೆದರಿದವು. ಹೀಗಾಗಿಯೇ ಹೂಡಿಕೆಯ ಟ್ರೆಂಡ್ ಬದಲಾಗಿದ್ದು, ಹೂಡಿಕೆದಾರರ ಕಣ್ಣು ಚಿನ್ನದ ಮೇಲಿದೆ. ವಿವಿಧ ದೇಶಗಳಲ್ಲಿ ಚಿನ್ನವು ಮೊದಲಿಗಿಂತಲೂ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. ಈ ಪೈಕಿ ದುಬೈನಲ್ಲಿ ಅಗ್ಗದಲ್ಲಿ ಚಿನ್ನ ಸಿಗುತ್ತದೆ.

ಗೋಲ್ಡ್‌ಪ್ರೈಸ್‌ ಇಂಡಿಯಾ.ಕಾಂ ವರದಿಗಳ ಪ್ರಕಾರ, ವಿಶ್ವದ ಅತೀ ದುಬಾರಿಯ ರಾಷ್ಟ್ರಗಳ ಪೈಕಿ 20ನೇ ಸ್ಥಾನದಲ್ಲಿರುವ ದುಬೈನಲ್ಲಿ ಚಿನ್ನವು ಅಗ್ಗಕ್ಕೆ ಸಿಗಲಿದೆ ಎಂದರೆ ನಂಬಲೇ ಬೇಕು. ಇಲ್ಲಿ ಇಂಧನ, ಚಿನ್ನ ಮಾತ್ರ ಕಡಿಮೆ ಬೆಲೆಗೆ ಸಿಗುತ್ತದೆ. ಮಿಕ್ಕೆಲ್ಲವು ಬಲು ದುಬಾರಿ.

ದುಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ಕರೆನ್ಸಿ ಅರಬ್ ಎಮಿರೇಟ್ಸ್ ದಿನಾರ್ (AED) 245 ನಷ್ಟವಾಗಿದೆ. ಅಂದರೆ 5,579.45 ಭಾರತದ ರೂಪಾಯಿಗಳಲ್ಲಿ ನಷ್ಟವಾಗಿದೆ. ದುಬೈ ಜೊತೆಗೆ ಕೊಲಂಬಿಯಾ, ಆಸ್ಟ್ರೇಲಿಯಾ, ಮಲವಿ, ಇಂಡೋನೇಷಿಯಾ ದೇಶಗಳಲ್ಲಿ ಚಿನ್ನದ ದರ ವಿಶ್ವದ ಇತರೆ 61 ರಾಷ್ಟ್ರಗಳ ಸರಾಸರಿ ಬೆಲೆಗಿಂತ ಕಡಿಮೆ ಇದೆ ಎಂದು ವರದಿ ತಿಳಿಸಿದೆ.

ದುಬೈ ಸೇರಿ ಐದು ದೇಶದಲ್ಲಿ ಅಗ್ಗದ ಚಿನ್ನ ಬೆಲೆ ಪಟ್ಟಿ

* ದುಬೈ ನಲ್ಲಿಚಿನ್ನದ ಬೆಲೆ 24 ಕ್ಯಾರೆಟ್ 1 ಗ್ರಾಂ ಗೆ 245.00 ಅರಬ್ ಎಮಿರೇಟ್ಸ್ ದಿನಾರ್ (AED) ಇದೆ, (ಭಾರತದ ರೂಪಾಯಿಯಲ್ಲಿ- ₹5,570.45).

22ಕ್ಯಾರೆಟ್ 1 ಗ್ರಾಂ ಬಂಗಾರಕ್ಕೆ 227.00 AED (INR-₹5,161.200).

* ಮಲಾವಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ MWK 131,905.00 ಇದ್ದು, (INR-₹6,346.63)ದೆ.

22ಕ್ಯಾರೆಟ್ 1 ಗ್ರಾಂ ಬಂಗಾರಕ್ಕೆ MWK 120,825.00 ಇದ್ದು, (INR-₹5,813.5).

* ಆಸ್ಟ್ರೇಲಿಯಾದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 112.76 AUD ಇದ್ದು, (INR ₹6,347.32).

22ಕ್ಯಾರೆಟ್ 1 ಗ್ರಾಂ ಬಂಗಾರಕ್ಕೆ 103.28 AUD ಇದ್ದು (INR-₹5,813.69) ಇದೆ.

* ಕೊಲಂಬಿಯಾ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 307,720.00 COP, (INR- ₹6,351.73) ಇದೆ.

22ಕ್ಯಾರೆಟ್ 1 ಗ್ರಾಂ ಬಂಗಾರಕ್ಕೆ 2,81,872.00 COP, (ಭಾರತದ ರೂಪಾಯಿಯಲ್ಲಿ ₹5,818.20) ಇದೆ.

* ಇಂಡೋನೇಷಿಯಾ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 12,36,900.00 IDR (ಭಾರತದ ರೂಪಾಯಲ್ಲಿ ₹6,359.47). 22 ಕ್ಯಾರೆಟ್ 1 ಗ್ರಾಂ ಬಂಗಾರಕ್ಕೆ 11,33,000.00 IDR (ಭಾರತದ ರೂಪಾಯಲ್ಲಿ ₹5,825.27) ಇದೆ.

(ವಿಶೇಷ ಸೂಚನೆ: ವಿವಿಧ ದೇಶಗಳಲ್ಲಿ ಚಿನ್ನಾಭರಣ ಮೇಲಿನ ಚಿನ್ನದ ಲಭ್ಯತೆ, ತೆರಿಗೆ ದರಗಳು, ಅಲ್ಲಿನ ಸ್ಪರ್ಧೆ ಮತ್ತು ಬೇಡಿಕೆ ಸೇರಿದಂತೆ, ವೇಸ್ಟೇಜ್ ಸೇರಿದಂತೆ ತಕ್ಕಮಟ್ಟಿಗಿನ ಬೆಲೆಯಲ್ಲಿ ವ್ಯತ್ಯಸ ಕಂಡು ಬರಬಹುದು)

ಬಜೆಟ್ ನಂತರ ಚಿನ್ನದ ದರದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಹತ್ತು ಗ್ರಾಂ ಕೊಳ್ಳುವವರಿಗೆ ತಕ್ಕ ಮಟ್ಟಿಗೆ ಲಾಭವಾದರೆ, ಹತ್ತು ಗ್ರಾಂ ಗಿಂತಲೂ ಹೆಚ್ಚಿನ ಚಿನ್ನ ಕೊಳ್ಳುವವರಿಗೆ ಅತ್ಯಧಿಕ ಹಣ ಉಳಿಯಲಿದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬ ಬರಲಿವೆ. ಆಸಕ್ತರು ಈಗಲೇ ಚಿನ್ನ ಖರೀದಿಸಿದರೆ ಒಳಿತು.

ಅಪ್ಡೇಟ್ (ಭಾನುವಾರದ) ಮಾಹಿತಿ ಪ್ರಕಾರ, ದೇಶದ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಆಗಿದೆ ಎಂದು ತಿಳಿದು ಬಂದಿದೆ. ಬಜೆಟ್ ಬಳಿಕ ಗರಿಷ್ಠ ಪ್ರಮಾಣದಲ್ಲಿ ಇಳಿಕೆ ಆಗಿದ್ದ ಚಿನ್ನವು ಇದೀಗ ಮತ್ತೆ ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಬೇಡಿಕೆ ಪ್ರಮಾಣ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+