ಚಿನ್ನದ ಸಾಲಸೋಲ: ಬಡ್ಡಿ ವಿಷ್ಯಾ ಹೇಗೆ?

ಚಿನ್ನದ ಮೇಲೆ ಸಾಲ ನೀಡುವಾಗ ನಾನಾ ಹಣಕಾಸು ಸಂಸ್ಥೆಗಳು ನಾನಾ ರೀತಿ ನೀತಿಗಳನ್ನು ಅನುಸರಿಸಿ, ನಾನಾ ದರದ ಬಡ್ಡಿಗಳಲ್ಲಿ ಸಾಲವನ್ನು ನೀಡುತ್ತವೆ. ಅದು ತುಸು ದುಬಾರಿಯೂ ಹೌದು. ನಿಮ್ಮದೇ ಚಿನ್ನದ ಮೇಲೆ ಸಾಲ ಪಡೆಯಲುವಾಗ ಈ ಲೆಕ್ಕಾಚಾರವನ್ನು ತುಲನೆ ಮಾಡಿ ನೋಡಿ -
ಬ್ಯಾಂಕಿಂಗ್ ವ್ಯವಹಾರ ಮಾಡದ ಹಣಕಾಸು ಸಂಸ್ಥೆಗಳಲ್ಲಿ ನಿಮ್ಮ ಚಿನ್ನದ ಮೇಲೆ ಸಾಲ ಪಡೆಯುವುದು ನಿಜಕ್ಕೂ ದುಬಾರಿಯೇ. ಆದರೆ ಅನಿವಾರ್ಯವೆಸಿದಾಗ ನಿಮ್ಮ ಚಿನ್ನದ ಮೌಲ್ಯಕ್ಕೆ ಅನುಗುಣವಾಗಿ ಸಾಲ ಪಡೆಯಬೇಕಾದರೆ ವರ್ಷಕ್ಕೆ ಶೇ. 22ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ.
ಅದೇ ಉತ್ಪಾದಕತೆ ಉದ್ದೇಶದ ಸಾಲ ಪಡೆಯುವುದಾದರೆ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗೆಂದು ಚಿನ್ನದ ಮೇಲೆ ಸಾಲ ನೀಡುವುದು ಉಂಟು. ಇದು ಶೇ. 13 ರಿಂದ ಶೇ. 16ರ ಪ್ರಮಾಣದಲ್ಲಿರುತ್ತದೆ.
ಅದೇ ಬ್ಯಾಂಕಿಂಗ್ ವ್ಯವಹಾರ ನಡೆಸುವ ಹಣಕಾಸು ಸಂಸ್ಥೆಗಳಲ್ಲಿ (ಅಂದರೆ ಸಹಕಾರ ಸೊಸೈಟಿಗಳಲ್ಲಿ) ಮತ್ತು ಬ್ಯಾಂಕುಗಳ ಮೂಲಕವೇ ಚಿನ್ನದ ಮೇಲೆ ಸಾಲ ಪಡೆಯುವುದಾದರೆ ಬಡ್ಡಿ ದರ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದು ಹೆಚ್ಚು ನಂಬಿಕಾರ್ಹ ಮತ್ತು ಸುರಕ್ಷಿತವೂ ಹೌದು. ಇದು ಸಹ ಒಂದು ಬ್ಯಾಂಕ್/ ಸೊಸೈಟಿಯಿಂದ ಮತ್ತೊಂದಕ್ಕೆ ಭಿನ್ನವಾಗಿರುತ್ತದೆ. ಹಾಗಾಗಿ ಖುದ್ದಾಗಿ ಹಣಕಾಸು ಸಂಸ್ಥೆಗೆ ಭೇಟಿ ನೀಡಿ ವಿಚಾರಿಸುವುದು ಒಳಿತು.












Click it and Unblock the Notifications