Gold: ಭಾರತೀಯರ ಚಿನ್ನ ವ್ಯಾಮೋಹದಿಂದ ಎದುರಾಯ್ತು ಹೊಸ ಸಂಕಷ್ಟ: ದೇಶಕ್ಕೆ ದುಬಾರಿಯಾದ ಚಿನ್ನದ ಖರೀದಿ

Gold: ಭಾರತವು ಅತಿ ಹೆಚ್ಚು ಚಿನ್ನವನ್ನು ಖರೀದಿ ಮಾಡುತ್ತಿರುವುದೇ ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ. ಭಾರತವು ಜಗತ್ತಿನ ಇನ್ನ್ಯಾವುದೇ ದೇಶವು ಖರೀದಿ ಮಾಡುವ ಚಿನ್ನಕ್ಕಿಂತಲೂ ಹೆಚ್ಚು ಚಿನ್ನವನ್ನು ಖರೀದಿ ಮಾಡುತ್ತಿದೆ. ಭಾರತವು ಪ್ರತಿ ವರ್ಷ ಸುಮಾರು 700 ರಿಂದ 800 ಟನ್ ಚಿನ್ನವನ್ನು ಬಳಸುತ್ತಿದೆ ಅಥವಾ ಖರೀದಿ ಮಾಡುತ್ತಿದೆ. ಇದು ಅಮೆರಿಕದಂತಹ ಸೂಪರ್ ನೇಷನ್‌ಗಳಿಗಿಂತಲೂ ಹೆಚ್ಚಾಗಿದೆ.

ಭಾರತದಲ್ಲಿ ಚಿನ್ನ ಖರೀದಿಯು ಕೇವಲ ಹೂಡಿಕೆಯಾಗಿ ಮಾತ್ರ ಬಳಕೆಯಲ್ಲಿಲ್ಲ. ಸಾಂಪ್ರದಾಯಿ ಕವಾಗಿಯೂ ಚಿನ್ನದ ಬಳಕೆ ಮಾಡಲಾಗುತ್ತದೆ. ಹೀಗಾಗಿ, ಚಿನ್ನದ ಖರೀದಿ ಹಾಗೂ ಮಾರಾಟವು ಭಾರತದಲ್ಲಿ ವಿಶ್ವದ ಯಾವುದೇ ರಾಷ್ಟ್ರದಲ್ಲಿಯೂ ಇಲ್ಲದಷ್ಟು ಹೆಚ್ಚಿನ ಪ್ರಮಾಣದಲ್ಲಿ ಇದೆ. ಮದುವೆಗಳು, ಹಬ್ಬಗಳು, ಹೂಡಿಕೆ ಖರೀದಿ ಮತ್ತು ಗ್ರಾಮೀಣ ಭಾಗದಲ್ಲಿನ ಉಳಿತಾಯ ವಿಧಾನ ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಖರೀದಿ ಪ್ರಮಾಣವು ಹೆಚ್ಚಾಗಿದೆ. ಆದರೆ ಚಿನ್ನದ ದೇಶೀಯ ಉತ್ಪಾದನೆಯು ವಾರ್ಷಿಕವಾಗಿ ಕೇವಲ 1 ರಿಂದ 2 ಟನ್‌ಗಳಿಗೆ ಸೀಮಿತವಾಗಿದೆ. ಹೀಗಾಗಿ, ಭಾರತ ಸರ್ಕಾರವು ಭಾರತೀಯರಿಗೆ ಅವಶ್ಯವಿರುವ ಶೇ 90% ಕ್ಕಿಂತ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ.

Gold

Gold: ಈಗ ಚಿನ್ನದ ವಿಷಯದಲ್ಲಿ ಸಂಕಷ್ಟವೇಕೆ

ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ತೈಲ ಮತ್ತು ರಸಗೊಬ್ಬರ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇರಾನ್ ಹಾಗೂ ಅಮೆರಿಕದ ನಡುವಿನ ಸುದೀರ್ಘ ಅವಧಿಯ ಯುದ್ಧವು ಜಾಗತಿಕ ಪೂರೈಕೆ ಸರಪಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ.

ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರು ಮುಂದಿನ ಒಂದು ವರ್ಷದ ಅವಧಿಗೆ ಹೂಡಿಕೆ ಮೇಲಿನ ಚಿನ್ನದ ಖರೀದಿ ಪ್ರಕ್ರಿಯೆಯನ್ನು ಮುಂದೂಡಿ ಎಂದು ಸಲಹೆ ನೀಡಿದ್ದಾರೆ. ಮುಂದಿನ ಒಂದು ವರ್ಷದ ಅವಧಿಗೆ ಹೂಡಿಕೆ ಮೇಲಿನ ಚಿನ್ನದ ಖರೀದಿ ಕೈಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.

ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಇಂಧನ ಬಳಕೆಯನ್ನು ಕಡಿತಗೊಳಿಸುವುದು, ಸಾರ್ವಜನಿಕ ಸಾರಿಗೆಯನ್ನು ಬಳಸುವುದು, ವಿದ್ಯುತ್ ವಾಹನಗಳನ್ನು ಬಳಸುವುದು, ಅನಿವಾರ್ಯವಲ್ಲದ ವಿದೇಶಿ ಪ್ರಯಾಣವನ್ನು ತಪ್ಪಿಸುವುದು ಮತ್ತು ದೇಶೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಬೆಂಬಲಿಸುವುದು ಅಗತ್ಯವಾಗಿದೆ ಎಂದಿದ್ದರು.

ಅಲ್ಲದೆ ಮುಖ್ಯವಾಗಿ ಮುಂದಿನ ಒಂದು ವರ್ಷದ ಅವಧಿಗೆ ಅವಶ್ಯವಲ್ಲದ ಅಥವಾ ತುರ್ತು ಬೇಡಿಕೆ ಇಲ್ಲದ ಮುಖ್ಯವಾಗಿ ಹೂಡಿಕೆಯ ಮೇಲಿನ ಚಿನ್ನವನ್ನು ಖರೀದಿ ಮಾಡದಂತೆ ಮನವಿ ಮಾಡಿದ್ದರು. ಡಾಲರ್ ಮೇಲೆ ಅವಲಂಬನೆ ಹಾಗೂ ವಿದೇಶಿ ವಿನಿಮಯದ ಹಣಕಾಸು ಗಂಭೀರ ಪರಿಸ್ಥಿತಿಯನ್ನು ತಲುಪದಂತೆ ನೋಡಿಕೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+