ದಸರಾ ಕೊಡುಗೆ: ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳವಾಯ್ತು

ಸದ್ಯ ಶೇ. 80ರಷ್ಟು ಇರುವ ತುಟ್ಟಿಭತ್ಯೆಯನ್ನು ಶೇ. 90ಕ್ಕೆ ಏರಿಸಬೇಕು ಎಂಬ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ಸೂಚಿಸಿದ್ದು, ಇದರಿಂದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 30 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತುಟ್ಟಿ ಭತ್ಯೆಯು 2 ಅಂಕಿಯಷ್ಟು ಹೆಚ್ಚಾಗುತ್ತಿರುವುದು ಕಳೆದ 3 ವರ್ಷಗಳಲ್ಲಿ ಇದೇ ಮೊದಲು. 2010ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು ಶೇ. 10ರಷ್ಟು ಏರಿಕೆ ಮಾಡಿತ್ತು. ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ (CPI-IW data) ಆಧಾರದಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ.
ಈ ನಿರ್ಧಾರದಿಂದ ಸರಕಾರದ ಬೊಕ್ಕಸದ ಮೇಲೆ ಹೆಚ್ಚುವರಿಯಾಗಿ ವಾರ್ಷಿಕ 10,879 ಕೋಟಿ ರೂ ಗಳ ಹೊರೆ ಬೀಳಲಿದೆ. 2013-14ನೇ ಸಾಲಿನಲ್ಲಿ 6,297 ಕೋಟಿ ರೂ.ಅಧಿಕ ಹೊರೆ ಬೊಕ್ಕಸದ ಮೇಲೆ ಬೀಳಲಿದೆ.












Click it and Unblock the Notifications