Jalebi Baba: 100ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ ಎಸಗಿ, ವಿಡಿಯೋ ಮಾಡಿದ್ದ ಜಿಲೇಬಿ ಬಾಬಾನಿಗೆ 14 ವರ್ಷ ಜೈಲು
ಚಂಡಿಗಢ, ಜ.10: ಮಠಗಳು, ದೇವಮಾನವರು, ಸ್ವಾಮೀಜಿಗಳ ಮೇಲೆ ಪದೇ ಪದೇ ಅತ್ಯಾಚಾರ ಆರೋಪಗಳು ಕೇಳಿ ಬರುತ್ತಲೇ ಇವೆ. ಜನರು ನಂಬಿಕೆಯಿಂದ ಹೋಗುವ ಮಠಗಳು, ದೇವಸ್ಥಾನಗಳಲ್ಲಿಯೇ ಇಂತಹ ಘಟನೆಗಳು ವರದಿಯಾಗುತ್ತಿರುವುದು ಆತಂಕಕಾರಿ ಘಟನೆಯಾಗಿವೆ. ಇಂತಹದ್ದೇ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಜಿಲೇಬಿ ಬಾಬಾನಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಹರಿಯಾಣದ ಅಮರವೀರ್ ಅಲಿಯಾಸ್ ಜಿಲೇಬಿ ಬಾಬಾ 120 ವಿವಿಧ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಮತ್ತು ಅದರ ವಿಡಿಯೋಗಳನ್ನು ಮಾಡಿದ ಆರೋಪದಲ್ಲಿ ನ್ಯಾಯಾಲಯವು ತಪ್ಪಿತಸ್ಥನೆಂದು ತೀರ್ಪು ನೀಡಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಲ್ವಂತ್ ಸಿಂಗ್ ಮಂಗಳವಾರ ಪೋಕ್ಸೋ ಕಾಯ್ದೆ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಒಟ್ಟು 14 ವರ್ಷ ಶಿಕ್ಷೆ ವಿಧಿಸಲಾಗಿದೆ.

ಹರಿಯಾಣದ ತೋಹಾನಾದಲ್ಲಿರುವ ಬಾಬಾ ಬಾಲಕನಾಥ ದೇವಸ್ಥಾನದ ಅರ್ಚಕ ಜಿಲೇಬಿ ಬಾಬಾ ಅವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಜಿಲೇಬಿ ಬಾಬಾ ತಾನು ದೇವಮಾನವ ಎಂದು ಕರೆದುಕೊಳ್ಳುವ ಮೊದಲು, ಅಮರಪುರಿ ತೋಹಾನಾ ರೈಲ್ವೆ ರಸ್ತೆಯಲ್ಲಿ ಜಿಲೇಬಿಗಳನ್ನು ಮಾರಾಟ ಮಾಡುತ್ತಿದ್ದರು. ಹೀಗಾಗಿ ಅವರನ್ನು "ಜಿಲೇಬಿ ಬಾಬಾ" ಎಂದು ಕರೆಯಲಾಗುತ್ತಿದೆ.
ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಮುನ್ನ ಸಂತ್ರಸ್ತರಿಗೆ ಮಾದಕ ವಸ್ತುಗಳನ್ನು ನೀಡುತ್ತಿದ್ದರು. ಬಳಿಕ ಅತ್ಯಾಚಾರ ಎಸಗಿ ಅವರ ವಿಡಿಯೋಗಳನ್ನು ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ದೂರಿನ ಬೆನ್ನಲ್ಲೇ ಪೊಲೀಸರು ಆರೋಪಿ ಜಿಲೇಬಿ ಬಾಬಾ ಕೋಣೆಯಲ್ಲಿ 120 ಅಶ್ಲೀಲ ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಹಲವು ಮಾದಕ ದ್ರವ್ಯದ ಮಾತ್ರೆಗಳು ಪತ್ತೆಯಾಗಿವೆ. ಈ ವಿಡಿಯೋಗಳಲಲ್ಲಿ ಕೆಲವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಅತ್ಯಾಚಾರ, ಐಟಿ ಕಾಯ್ದೆ ಉಲ್ಲಂಘನೆ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳಿವೆ.
ಇಪ್ಪತ್ತು ವರ್ಷಗಳ ಹಿಂದೆ, ಅಪರಾಧಿ ಜಿಲೇಬಿ ಬಾಬಾ ಪಂಜಾಬ್‌ನ ಮಾನ್ಸಾದಿಂದ ಹರಿಯಾಣದ ತೊಹಾನಾಗೆ ಬಂದು, ತೊಹಾನಾದ ರೈಲ್ವೆ ರಸ್ತೆಯಲ್ಲಿ ಜಿಲೇಬಿ ವ್ಯಾಪಾರ ಆರಂಭಿಸಿದರು.












Click it and Unblock the Notifications